This is the title of the web page
This is the title of the web page

Please assign a menu to the primary menu location under menu

State

ವಚನಗಳಲ್ಲಿ ಭಕ್ತಿ ; ವಚನೋತ್ಸವ ಮನೆಮನೆಗಳಲ್ಲಿ


ಬೆಳಗಾವಿ; ಶ್ರಾವಣ ಮಾಸದ ನಿಮಿತ್ತವಾಗಿ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಅವರ ವಚನ ಸಾರ ವಚನೋತ್ಸವ ಮನೆಮನೆಗಳಲ್ಲಿ ಮನಮನಂಗಳಿಗೆ ಕಾರ್ಯಕ್ರಮವನ್ನು ದಿನಾಂಕ 28,08,2023ರಂದು ಶರಣೆ ಪಾರ್ವತಿ ಬ ವಿಭೂತಿ ಅವರ ನೇತ್ರತ್ವದಲ್ಲಿ ಸತ್ಸಂಗದ ಮನೆಯಲ್ಲಿ ನೆರವೇರಿತು ಇಂದಿನ ಉಪನ್ಯಾಸವನ್ನು ಶರಣೆ ಮೇಘಾ ಪಾಟಿಲ ಅವರು “ವಚನಗಳಲ್ಲಿ ಭಕ್ತಿ” ಕುರಿತು ಮಾತನಾಡಿದರು. ಶರಣರು ವಚನಗಳಲ್ಲಿ ಗುರು, ಲಿಂಗ, ಜಂಗಮ, ಕಾಯಕ ದಾಸೋಹದ ಮಹತ್ವ ತಿಳಿಸುವುದರ ಜೊತೆಗೆ ಭಕ್ತಿಗೂ ಕೂಡಾ ಹೆಚ್ಚು ಮಹತ್ವ ಕೊಟ್ಟಿರುವುದು ಕಂಡು ಬರುತ್ತದೆ ಭಕ್ತಿ ಭಗವಂತನ ಸೇರುವ ಪ್ರಥಮ ಮೆಟ್ಟಿಲಾಗಿದೆ ನಮ್ಮ ಭಕ್ತಿಯನ್ನು ಹಂತ ಹಂತವಾಗಿ ಬೆಳೆಸಿಕೊಳ್ಳಬೇಕು ಎಂದು ಶ್ರವಣ, ಕೀರ್ತನೆ ಸ್ಪರಣೆ , ಪಾದ ಸೇವೆ ಹೀಗೆ ನವ ವಿಧ ಭಕ್ತಿಯನ್ನು ಸವಿಸ್ತಾರವಾಗಿ ಹೇಳಿದರು ಬಸವಣ್ಣನವರು ಎನಗಿಂತ ಕಿರಿಯರಿಲ್ಲ ಎಂದು ಎಲ್ಲರಲ್ಲಿಯೂ ನಿಸ್ವಾರ್ಥ ಪ್ರೀತಿಯನ್ನು ತೊರಿ ನಿಮ್ಮ ಶರಣರ ಮನೆಯ ತೊತ್ತಿನ ತೊತ್ತಿನ ಪಡಿದೊತ್ತಿನ ಮಗ ನಾನು ಕೊಡಲ ಸಂಗಮ ದೇವ ಎಂದು ಭಕ್ತಿ ಭಂಡಾರಿ ಬಸವಣ್ಣ ಎಂದು ಜಗತ್ಪ್ರಸಿದ್ಧರಾದರು ಭಕ್ತಿಯಂಬುದು ಮನಸ್ಸಿನ ಮಾಲಿನ್ಯ ತೊಳೆಯುವ ಶಕ್ತಿಯಾಗಿದೆ, ಭಕ್ತಿಯಂಬುದು ಇಂದ್ರಿಯಗಳನ್ನು ನಿಗ್ರಹಿಸುವುದರ ಜೊತೆಗೆ ಆರೋಗ್ಯ, ಧೈರ್ಯ, ಆತ್ಮವಿಶ್ವಾಸ ಹೆಚ್ಚಿಸುವುದು ಹಾಗೂ ಒಂದು ಸಾಧನವು ಆಗಿದೆ ಎಂದು ತಮ್ಮ ಅನುಭಾವದಲ್ಲಿ ಹೇಳಿದರು. ಅಧ್ಯಕ್ಷರು ಎಸ್ ಜಿ ಸಿದ್ನಾಳರು ಮಾತನಾಡಿ ಸತ್ಯ ಪ್ರಾಮಾಣಿಕತೆಯಿಂದ ನಡೆಯುವವರಿಗೆ ಕಷ್ಟ ಕಾರ್ಪಣ್ಯಗಳು ಹೆಚ್ಚು ಅವುಗಳನ್ನು ಎದುರಿಸಿ ಮುಂದೆ ಹೋಗಬೇಕು ಶರಣರು ನಡೆದು ಬಂದ ದಾರಿ ನಮಗೆ ಮಾರ್ಗದರ್ಶನವಾಗಿದೆ, ವಚನಗಳು ನಮಗೆ ಧೈರ್ಯವನ್ನು ತುಂಬುತ್ತವೆ ವಚನಗಳನ್ನು ಓದಿ ಅರ್ಥೈಸಿಕೊಂಡು ಆ ನಿಟ್ಟಿನಲ್ಲಿ ನಡೆಯುವ ಪ್ರಯತ್ನ ಪಡಬೇಕು ಎಂದು ಹೇಳಿದರು, ಸತ್ಸಂಗದಲ್ಲಿ ಶರಣರಾದ ಸಂಕೇಶ್ವರವರು ತಮ್ಮ ಅನುಭವವನ್ನು ಹಂಚಿಕೊಂಡರು ಶರಣರಾದ ಮುರೆಗೆಪ್ಪಾ ಬಾಳಿ. ಅವರು ನಿರೂಪಣೆ ಮಾಡಿದರು, ಶೋಭಾ ಶಿವಳ್ಳಿ ಸುನಿತಾ ನಂದೆಣ್ಣವರ ಪ್ರಾರ್ಥನೆ ನಡೆಯಿಸಿಕೊಟ್ಟರು ಶರಣೆ ವಸಂತಕ್ಕಾ ಗಡ್ಕರಿ ಹಾಗೂ ತ್ರಿವೇಣಿ ಪಾಟೀಲ ವಚನ ಗಾಯನ ಮಾಡಿದರು ಶರಣರಾದ ಕಟ್ಟಿಮನಿಯರು ಶರಣು ಸಮರ್ಪಣೆ ಮಾಡಿದರು, ಶರಣರಾದ ಎಂಮ್ ಪಿ ಪಾಟೀಲ, ಉಪಾಧ್ಯಕ್ಷ ಕುಂದ್ರಾಳ , ಬಿ ಡಿ ಪಾಟೀಲ, ಗುರಣ್ಣವರ ಶಂಕರ ಶೆಟ್ಟಿ ಮತ್ತು ಉಮಾ ಸಂಕೇಶ್ವರ, ಶೋಭಾ ಕಮತೆ, ಶಾರದಾ ಉಡಕೆರಿ, ರೇಖಾ ಮುದ್ದಾಪುರ ವಿಜಯ ಲಕ್ಷ್ಮಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.


Leave a Reply