ಕುಷ್ಟಗಿ:- ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇವರು ರಾಮನಗರದ ಪ್ರವಾಸಿ ಜಾನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ಎಚ್ಎಲ್ ನಾಗೇಗೌಡರ ಕುಟುಂಬದವರ ಹೆಸರಿನಲ್ಲಿ ನೀಡುವ ದತ್ತಿ ವಾರ್ಷಿಕ ಪ್ರಶಸ್ತಿ ದೊಡ್ಡಮನೆ ಪ್ರಶಸ್ತಿಯನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕೊಡತಗೇರಿ ಗ್ರಾಮದ ಬಯಲಾಟ ತತ್ವಪದಗಳ ಕಲಾವಿದರಾದ ಭೀಮಪ್ಪ ಪೂಜಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ತಿಮ್ಮೇಗೌಡ.ಶಾಸಕಿ ಅನಿತಾ ಕುಮಾರಸ್ವಾಮಿ. ಶ್ರೀ ಆದಿತ್ಯ ನಂಜರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ