This is the title of the web page
This is the title of the web page

Please assign a menu to the primary menu location under menu

State

ಜಾಗತಿಕ ಖ್ಯಾತಿಯ ಅಶೋಕ ಸ್ತಂಭವಿರುವ ವೃತ್ತ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ


ಕೊಪ್ಪಳ ಮಾರ್ಚ್ ೨೧ : ಇಡೀ ವಿಶ್ವದಲ್ಲಿಯೇ ಖ್ಯಾತಿ ಹೊಂದಿರುವ ಹಾಗೂ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಭಾಗಿಯಾದ ಕೊಪ್ಪಳ ಜಿಲ್ಲೆಯ ಮುಂಡರಗಿಯ ಭೀಮರಾಯ, ಹಮ್ಮಿಗಿ ಕೆಂಚನಗೌಡ ಮತ್ತು ಅನೇಕ ವೀರರು ಹುತಾತ್ಮರಾದ ಸ್ಮರಣೆಗಾಗಿ ಸ್ಥಾಪಿಸಲಾದ ಐತಿಹಾಸಿಕ ಅಶೋಕ ಸ್ತಂಭದ ವಿಶೇಷತೆಯ ಅಶೋಕ ವೃತ್ತ ನಿರ್ಮಾಣ ಕಾಮಗಾರಿಗೆ ಕೊಪ್ಪಳ ನಗರದಲ್ಲಿ ಮಾರ್ಚ ೨೧ರಂದು ಚಾಲನೆ ಸಿಕ್ಕಿತು.
ಅಶೋಕನ ಕಾಲದಲ್ಲಿ ಕೊಪ್ಪಳವು ಜೈನ ಧರ್ಮಿಯರ ಪ್ರಮುಖ ಕೇಂದ್ರವಾಗಿ ಜೈನ ಕಾಶಿ ಎಂದೇ ಹೆಸರಾಗಿತ್ತು. ಸ್ವಾತಂತ್ರö್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ವೀರರ ನೆನಪಿನಲ್ಲಿ ೧೯೫೭ರಂದು ಕೊಪ್ಪಳದಲ್ಲಿ ಅಶೋಕ ಸ್ತಂಭವನ್ನು ಸ್ಥಾಪನೆ ಮಾಡಿರುವುದು ಸಹ ಕೊಪ್ಪಳದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಶೋಕನ ಶಿಲಾಶಾಸನ ಮತ್ತು ಅಶೋಕ ಸ್ತಂಭದಿಂದಲು ಸಹ ಕೊಪ್ಪಳದ ಹೆಸರು ಜಗದಗಲ ಹಬ್ಬಿರುವುದು ವಿಶೇಷತೆಯಾಗಿದೆ. ಅದರಂತೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಪ್ರಸಿದ್ಧ ಅಶೋಕ ಸ್ತಂಭವಿರುವ ವೃತ್ತ ನಿರ್ಮಾಣ ಕಾಮಗಾರಿಗೆ ಕೊಪ್ಪಳದಲ್ಲಿ ಚಾಲನೆ ನೀಡಿರುವುದು ನಮ್ಮ ಭಾಗ್ಯವಾಗಿದೆ ಎಂದು ಇದೆ ವೇಳೆ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವರಾದ ಹಾಲಪ್ಪ ಬಸಪ್ಪ ಆಚಾರ, ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಪ್ರತಿಕ್ರಿಯಿಸಿದರು.
ಈ ಐತಿಹಾಸಿಕ ವೃತ್ತವನ್ನು ನಗರಸಭೆಯ ನಿಧಿ ೨೪ ಲಕ್ಷ ರೂ. ಹಾಗೂ ೧೫ನೇ ಹಣಕಾಸಿನ ಉಳಿತಾಯ ಅನುದಾನ ೧೬ ಲಕ್ಷ ರೂ. ಅನುದಾನ ಸೇರಿ ಒಟ್ಟು ೪೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ ಎಂದು ನಗರಸಭೆಯ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರು ತಿಳಿಸಿದರು.
ವಿನೂತನ ವೃತ್ತ: ಭಾರತದ ಇತಿಹಾಸದಲ್ಲಿ ಶೌರ್ಯ ಸಾಹಸಕ್ಕೆ ಹೆಸರಾಗಿದ್ದ ಅಶೋಕನ ಸ್ತಂಭಗಳು ಭಾರತೀಯ ಉಪ ಖಂಡದಾದ್ಯಂಥ ಹರಡಿದ್ದು ಇವು ಏಕಶಿಲೆಯಲ್ಲಿರುವುದು ವಿಶೇಷ. ನಾಲ್ಕು ಸಿಂಹಗಳನ್ನು ಹೊಂದಿರುವ ಈ ಸ್ತಂಭವನ್ನು ಅಶೋಕನು ಧರ್ಮ ಚಕ್ರ ಎಂದೇ ಉಲ್ಲೇಖಿಸಿದ್ದಾನೆ. ಭಾರತದ ರಾಷ್ಟ್ರೀಯ ಲಾಂಛನವಾದ ಅಶೋಕ ಸ್ತಂಭವಿರುವ ವೃತ್ತವು ಕೊಪ್ಪಳದಲ್ಲಿ ವಿನೂತನವಾಗಿ ನಿರ್ಮಾಣವಾಗಲಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ತಿಳಿಸಿದರು.
ಸಾಹಿತಿಗಳು, ಗಣ್ಯರು ಸಾಕ್ಷಿ: ಕೊಪ್ಪಳ ಜಿಲ್ಲೆಯ ಹೋರಾಟಗಾರರು ಮತ್ತು ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ, ಮಹಾಂತೇಶ ಕೊತಬಾಳ, ಬಸವರಾಜ ಶಿಲವಂತರ, ರಾಚಪ್ಪ ಹಡಪದ ಹಾಗೂ ಇನ್ನು ಅನೇಕ ಹೋರಾಟಗಾರರು, ಸಾಹಿತಿಗಳು, ಪತ್ರಕರ್ತರು, ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇನ್ನೀತರರು ಭಾಗಿಯಾಗಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ, ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ನಗರಸಭೆಯ ಪೌರಾಯುಕ್ತರಾದ ಹೆಚ್.ಎನ್.ಭಜ್ಜಕ್ಕನವರ, ತಹಸೀಲ್ದಾರರಾದ ಅಮರೇಶ ಬಿರಾದಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದ ಹೊಸಮನಿ, ನಗರಸಭೆಯ ಉಪಾಧ್ಯಕ್ಷರಾದ ವಿರುಪಾಕ್ಷಪ್ಪ ಮುರನಾಳ, ನಗರಸಭೆ ಸದಸ್ಯರಾದ ಉಮಾ ಪಾಟೀಲ, ಅಕ್ಬರ ಪಾ಼ಷಾ, ಜ್ಯೋತಿ ಗೊಂಡಬಾಳ, ಮುತ್ತು ಕುಷ್ಟಗಿ, ಗುರುರಾಜ ಹಲಗೇರಿ, ವಿದ್ಯಾ ಹೆಸರೂರ, ಅಮಜದ ಪಟೇಲ್, ಮಹೇಂದ್ರ ಚೋಪ್ರಾ, ಅಭಿಯಂತರರಾದ ಮಧುರಾ ಮುಗದೂರ, ಸೋಮಲಿಂಗಪ್ಪ ಹಾಗೂ ಇತರರು ಭಾಗಿಯಾಗಿದ್ದರು.


Leave a Reply