This is the title of the web page
This is the title of the web page

Please assign a menu to the primary menu location under menu

Local News

ಕವಿತೆ ಕಟ್ಟಲು ಕಾಲವೇ ದೊಡ್ಡ ಪಾಠವಾಗಿದೆ-ಭುವನಾ ಹಿರೇಮಠ


ಬೆಳಗಾವಿ: ಜನೆವರಿ :” ಕವಿತೆ ಕಟ್ಟಲು ಕಾಲವೇ ದೊಡ್ಡ ಪಾಠವಾಗಿದೆ. ಆದ್ದರಿಂದ ಇಂದಿನ ಆತಂಕದ ದುರಿತ ಕಾಲದಲ್ಲಿ ಕವಿಗಳಾದವರು ಕಾವ್ಯದ ಮೂಲಕ ಮುಖಾ-ಮುಖಿ ಆಗಬೇಕು” ಎಂದು ಕವಯತ್ರಿ ಭುವನಾ ಹಿರೇಮಠ ಹೇಳಿದರು.
ಅವರಿಂದು ಬೆಳಗಾವಿಯ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಬೆಳಗಾವಿ ಜಿಲ್ಲಾ ಘಟಕ ಏರ್ಪಡಿಸಿದ್ದ ‘ ಯುವ ಕವಿಗೋಷ್ಠಿ’ಯಲ್ಲಿ ಆಶಯ ಮಾತುಗಳನ್ನಾಡಿದರು.
ಕವಿತೆಗೆ ಬದುಕಿನ ಮತ್ತು ಓದಿನ ಅನುಭವ ಎರಡೂ ಬೇಕು. ಅದು ಕೊಡುವ ಬಹು ಆಯಾಮದ ಪ್ರಜ್ಞೆಯ ಮೂಲಕ ಸಾವಿರ ಕಣ್ಣುಗಳನ್ನು ಧರಿಸಿ ಕವಿ ಸಮಾಜಕ್ಕೆ ತಿಳುವಳಿಕೆ ನೀಡುವ ಕರ್ತವ್ಯ ನಿರ್ವಹಿಸಬೇಕು. ಕಾಲಕ್ಕೆ ಉತ್ತರ ನೀಡುವ ಕೃಷಿಯನ್ನು ಲೇಖಕರದವರು ಮಾಡಬೇಕು. ಕವಿತೆ ಬರೆಯುವುದರಿಂದ ಸಾಮಾಜಿಕ ಸಂಚಲನ ಮಾಡಬೇಕಾಗಿದೆ” ಎಂದರು. ಕವಿಗೋಷ್ಠಿಯಲ್ಲಿ ಮೆಹಬೂಬ್ ಮುಲ್ತಾನಿ, ಮಹೇಶ ಶಿಂಗೆ, ಸಚಿನ ಮಾಳಗೆ, ಸಿದ್ದರಾಮ ತಳವಾರ, ಪಲ್ಲವಿ ಕಾಂಬಳೆ, ಗೌತಮ ಮಾಳಗೆ, ದೀಪಕ ಶಿಂಧೆ, ಸಂತೋಷ ನಾಯಕ, ತೇಜಸ್ವಿನಿ ಲೋಕುರೆ, ನದಿಮ ಸನದಿ, ಮನೋಹರ ಕಾಂಬಳೆ, ಶಿವಾನಂದ ಉಳ್ಳಿಗೇರಿ, ರಾಜು ಸನದಿ, ಮೆಹಬೂಬ ಸುಭಾನಿ, ಸದಾಶಿವ ಭಜಂತ್ರಿ, ಶಿವರಾಜ ಕಾಂಬಳೆ ಹಾಗೂ ಶಂಕರ ಬಾಗೇವಾಡಿ ಕವಿತೆ ವಾಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಕವಿ ವಿಠಲ ದಳವಾಯಿ ಅವರು ಮಾತನಾಡಿ, ” ಸಮಕಾಲೀನ ತಲ್ಲಣಗಳಿಗೆ ಮುಖಾ-ಮುಖಿ ಯಾಗುವ ಕವಿತೆಗಳು ಇಂದು ಹೆಚ್ಚಾಗಿ ಮೂಡಿಬರುತ್ತಿವೆ. ಕವಿ ಪ್ರಶ್ನೆ ಕೇಳುವ ಜಾಗದಲ್ಲಿ ಇದ್ದು ಕಾವ್ಯ ರಚಿಸುತ್ತಿರುವುದು ಸತ್ವಯುತ ಕಾವ್ಯದ ಕುರಿತ ಭರವಸೆ ಹೆಚ್ಚುತ್ತಿದೆ ” ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಂಡಾಯ ಸಾಹಿತಿ ವೈ. ಬಿ. ಹಿಮ್ಮಡಿ, ಕಾರ್ಮಿಕ ಮುಖಂಡರಾದ ಎಲ್. ಎಸ್. ನಾಯಕ, ಜಿ. ವಿ. ಕುಲಕರ್ಣಿ, ರಾಹುಲ ಮೇತ್ರಿ, ಸುಬ್ರಾವ ಎಂಟೆತ್ತಿನವರ, ದಿಲ್-ಶಾಬೇಗಂ ನದಾಫ, ಆರ್. ಬಿ. ಬನಶಂಕರಿ, ಪ್ರಕಾಶ ಬೊಮ್ಮನವರ,ಬಸಪ್ಪ ಕೋಲಕಾರ, ಅಮಿತ ಗೆಜ್ಜೆಗೋಳ, ವರುಣ ಕರ್ಪೆ, ಆದರ್ಶ ಕಾಂಬಳೆ, ಆನಂದ ಕಾಂಬಳೆ, ಕೃಷ್ಣ ಲಮಾಣಿ, ಸುಧೀರ ಕಾಂಬಳೆ, ವಸಂತ ಗಾಡಿವಡ್ಡರ, ಸುಮಿತ ಕುರಾಡೆ, ಅಭಿ ಮೋಹಿಲ್, ವಿಕಾಸ ಗಾಡಿವಡ್ಡರ, ಪಂಕಜ ಸಾವಂತ, ಸುನಿಲ ನಾಯಕ, ಪ್ರಥಮ ಬಸನಾಯಕ, ತನ್ಮಯ ಬಾಗೇವಾಡಿ ಮುಂತಾದವರು ಉಪಸ್ಥಿತರಿದ್ದರು.
ಬಾಲಕೃಷ್ಣ ನಾಯಕ ಹಾಡಿದ ಕ್ರಾಂತಿಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಆಕಾಶ ಬೇವಿನಕಟ್ಟಿ ಸ್ವಾಗತಿಸಿದರು. ಅಕ್ಷತಾ ಯಳ್ಳೂರ ನಿರ್ವಹಿಸಿದರು. ಮಂಜುನಾಥ ಪಾಟೀಲ ವಂದಿಸಿದರು


Leave a Reply