This is the title of the web page
This is the title of the web page

Please assign a menu to the primary menu location under menu

Local News

ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಪೋಟೋ ಅಳವಡಿಸುವಂತೆ ಆಗ್ರಹಿಸಿ ಹಣಬರ ಯಾದವ್ ಸಮಾಜದಿಂದ ಬೈಕ್ ರ್ಯಾಲಿ


ಬೆಳಗಾವಿ: ವೀರರಾಣಿ ಚೆನ್ನಮ್ಮನ ಬಲಗೈ ಬಂಟ ಅಮಟೂರು ಬಾಳಪ್ಪನ ಜಯಂತಿ ಆಚರಣೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಶ್ರೀಕೃಷ್ಣನ ಪೋಟೋ ಕಡ್ಡಾಯವಾಗಿ ಅಳವಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಣಬರ ಯಾದವ್ ಸಂಘದ ನೇತೃತ್ವದಲ್ಲಿ ಬೈಲಹೊಂಗಲ ತಾಲೂಕಿನ ಅಮಟೂರನಿಂದ ಬೆಳಗಾವಿಯವರಿಗೆ ಬೈಕ್ ರ್ಯಾಲಿ ನಡೆಸಲಾಯಿತು.

75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ದೇಶದಲ್ಲಿ ಅಮೃತೋತ್ಸವ ಆಚರಣೆ ಮಾಡಲಾಗುತ್ತಿದೆ. ದೇಶದಲ್ಲಿ ಸ್ವತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಮೊದಲು ಹೋರಾಟ ಮಾಡಿದ ಕಿತ್ತೂರಿನ ರಾಣಿ ಚೆನ್ನಮ್ಮಳ ಬಲಗೈ ಬಂಟನಾಗಿದ್ದ ಅಮಟೂರು ಬಾಳಪ್ಪನನ್ನು ಇತಿಹಾಸದಲ್ಲಿ ಮರೆಯಲಾಗಿದೆ.

ಹೀಗಾಗಿ ಅಮಟೂರು ಬಾಳಪ್ಪನ ಜಯಂತಿ ಆಚರಣೆ ಮಾಡಬೇಕು. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಶ್ರೀ ಕೃಷ್ಣನ ಪೋಟೋ ಕಡ್ಡಾಯವಾಗಿ ಅಳವಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಹಣಬರ ಯಾದವ ಸಂಘದ ನೇತೃತ್ವದಲ್ಲಿ ಅಮಟೂರನಿಂದ ಬೆಳಗಾವಿಯವರಿಗೆ ಬೈಕ್ ರ್ಯಾಲಿ ನಡೆಸಲಾಯಿತು.

ರ್ಯಾಲಿಯಲ್ಲಿ 200ಕ್ಕೂ ಬೈಕ್ ಆಗಮಿಸಿದ ಜನರು ಅಮಟೂರು ಬಾಳಪ್ಪ, ಶ್ರೀಕೃಷ್ಣನ ಪರ ಘೋಷಣೆ ಹಾಕಿದರು. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಜನರು ಪಾಲ್ಗೊಂಡಿದ್ದರು.

ನಂತರ ಬಸವನ ಕುಡಚಿಯ ಸಭಾಭವನದಲ್ಲಿ ಸಮಾವೇಶ ನಡೆಸಿದರು. ಇದೆ ವೇಳೆ ನಾಗರಾಜ್ ಹಣಬರ ಅಮಟೂರು ಬಾಳಪ್ಪ ಅವರ ಬಗ್ಗೆ ರಚಿಸಿದ ಆಲ್ಬಮ್ ಸಾಂಗ್ ಸಮಾಜದ ಮುಖಂಡರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಕಿತ್ತೂರು ಇತಿಹಾಸದಲ್ಲಿ ಅಮಟೂರು ಬಾಳಪ್ಪ ಹೆಸರು ಅಜಾರಾಮರವಾಗಿದೆ.

ಬ್ರಿಟಿಷ್ ಅಧಿಕಾರಿ ತ್ಯಾಕರೆಗೆ ಗುಂಡು ಹಾಕಿದ್ದು ಅಮಟೂರು ಬಾಳಪ್ಪ. ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಬಾಳಪ್ಪ ಹೋರಾಟ ಅವಿಸ್ಮರಣೀಯ. ಕೃಷ್ಣ ಜನ್ಮಾಷ್ಠಮಿಯಂದು ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಆಚರಣೆ ಮಾಡಬೇಕು.

ಅಮಟೂರು ಬಾಳಪ್ಪ ಸಕಲ ಗೌರವ ಸಲ್ಲಬೇಕು ಎಂದು ಕರ್ನಾಟಕ ರಾಜ್ಯ ಹಣಬರ ಯಾದವ್ ಸಂಘದ ಮುಖಂಡರ ಆಗ್ರಹಿಸಿದರು.
ನಾಗರಾಜ ಹಣಬರ, ಪ್ರಶಾಂತ ಕೌಲಗಿ,ಸಂತೋಷ್ ಖೋತ, ನಾಗಪ್ಪ ಕಳಸನ್ನವರ್, ಬಸವರಾಜ್ ಶಿಂತ್ರೆ, ರಾಘವ್ ಹನಬರ್, ಸಮಾಜದದ ಅನೇಕ ಮುಖಂಡರು ಪಾಲ್ಗೊಂಡಿದ್ದರು.


Gadi Kannadiga

Leave a Reply