This is the title of the web page
This is the title of the web page

Please assign a menu to the primary menu location under menu

Local News

ಬೈಲಹೊಂಗಲ ಗುತ್ತಿಗೆದಾರರ ಸಂಘದಿಂದ ಸಾಹಿತ್ಯಾ ಆಲದಕಟ್ಟಿಗೆ ಸನ್ಮಾನ


ಬೈಲಹೊಂಗಲ :- ಇಲ್ಲಿಯ ತಾಲೂಕಾ ಗುತ್ತಿಗೆದಾರರ ಸಂಘದ ವತಿಯಿಂದ ಆಯ್ ಎ ಎಸ್ ಪರೀಕ್ಷೆಯಲ್ಲಿ ಪಾಸಾಗಿರುವ ಸಾಹಿತ್ಯ ಆಲದಕಟ್ಟಿ ಅವರನ್ನು ಸನ್ಮಾನಿಸಲಾಯಿತು
ಪಟ್ಟಣದ ಹೊಸೂರ ರಸ್ತೆಯಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಸನ್ಮಾನ ಕಾರ್ಯಕ್ರಮದಲ್ಲಿ ಆಯ್ ಎ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಾಹಿತ್ಯಾ ಅವರನ್ನು ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸ ಮಾತನಾಡಿದ ಸಾಹಿತ್ಯಾ ಅವರು ನನ್ನ ಈ ಸಾಧನೆಗೆ ತಂದೆ ತಾಯಿಯ ಪ್ರೋತ್ಸಾಹವೇ ಕಾರಣ ನನ್ನ ಸೇವಾವಧಿಯಲ್ಲಿ ಜನರಿಗೆ ಸಮಾಜಕ್ಕೆ ಒಳ್ಳಯದಾಗುವಂತ ಕಾರ್ಯ ಮಾಡುವೆ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸಬೇಕೆಂದು ಹೇಳಿದರು
ಗುತ್ತಿಗೆದಾರರ ಸಂಘದ ಅದ್ಯಕ್ಷ ಶಿವಾನಂದ ಮಡಿವಾಳರ ಅದ್ಯಕ್ಷತೆ ವಹಿಸಿದ್ದರು, ಉಪಾದ್ಯಕ್ಷ ಉದಯ ಬೆಳಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು ತಾ, ಪಂ ಅಧಿಕಾರಿ ಸಭಾಸ ಸಂಪಗಾವಿ ಗುತ್ತಿಗೆದಾರರಾದ ಬಿ ಜಿ ಹಿರೇಮಠ, ಬಸವರಾಜ ಸುತಗಟ್ಟಿ, ಎ ಎಂ ಬಾಗವಾನ, ಸಿ ಬಿ ಮಠಪತಿ ಎ ಎಸ್ ಹೊಸೂರ, ಎಸ್ ಎ ಗಾಣಿಗೇರ, ಬಸವರಾಜ ನರೆಗಲ್ಲಿ, ಎಸ್ ಬಿ ಪಾಟೀಲ, ಪಿ ವಿ ಮಾಳೋದೆ, ಬಿ ಚಿ ಬಿಲ್ಲಶಿವನ್ನವರ, ಎಸ್ ಬಿ ಹೊನ್ನವರ, ಸಿ ವಾಯ್ ನಾಗನಗೌಡರ, ಎಲ್ ಬಿ ಬಂಡಿವಡ್ಡರ ಮಲ್ಲಿಕಾರ್ಜುನ ಆಲದಕಟ್ಟಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು


Gadi Kannadiga

Leave a Reply