This is the title of the web page
This is the title of the web page

Please assign a menu to the primary menu location under menu

State

ಬಿಳೇಕಲ್ ಗ್ರಾಮ : ಹೊಸ ನ್ಯಾಯಬೆಲೆ ಅಂಗಡಿ ಮಂಜೂರಿಗೆ ಅರ್ಜಿ ಆಹ್ವಾನ


ಕೊಪ್ಪಳ ಡಿಸೆಂಬರ್ ೧೪ : ಕುಷ್ಟಗಿ ತಾಲ್ಲೂಕಿನ ಬಿಳೇಕಲ್ ಗ್ರಾಮದಲ್ಲಿ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಹೊಸ ನ್ಯಾಯಬೆಲೆ ಅಂಗಡಿ ಪ್ರಾಧಿಕಾರ ಮಂಜೂರು ಅವಶ್ಯವಿದ್ದ ಪ್ರಯುಕ್ತ ಕರ್ನಾಟಕ ಅವಶ್ಯಕ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ(ನಿಯಂತ್ರಣ) ತಿದ್ದುಪಡಿ ಆದೇಶ-೨೦೧೮ರ ಕ್ಲಾಸ್೬(ಬಿ) ರ ಪ್ರಕಾರ ಪ್ರಾಧಾನ್ಯತೆ ಅನುಸಾರ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಅರ್ಜಿಗಳು ಬಾರದೆ ಇರುವ ಕಾರಣ ಗ್ರಾಮಸ್ಥರ ಕೋರಿಕೆಯನ್ವಯ ಮತ್ತೊಮ್ಮೆ ಅಧಿಸೂಚನೆ ಹೊರಡಿಸಲಾಗಿದೆ.
ಬಿಳೇಕಲ್ ಗ್ರಾಮದಲ್ಲಿ ೬೦ ಅಂತ್ಯೋದಯ, ೪೪೫ ಬಿಪಿಎಲ್, ೩೦ ಎಪಿಎಲ್ ಸೇರಿದಂತೆ ಒಟ್ಟು ೫೩೫ ಪಡಿತರ ಚೀಟಿಗಳಿಗೆ ಹೊಸ ನ್ಯಾಯಬೆಲೆ ಅಂಗಡಿಯನ್ನು ಮಂಜೂರಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.
ರಾಜ್ಯ ಸರ್ಕಾರ ಸ್ವಾಮ್ಯದ ನಿಗಮಗಳು, ಕಂಪನಿಗಳು, ಗ್ರಾಮ ಪಂಚಾಯತ್‌ಗಳು, ನಗರ ಸ್ಥಳೀಯ ಸಂಸ್ಥೆಗಳು, ಸಂಘಗಳು(ಸೊಸೈಟಿಗಳು), ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ನಿ), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ, ತೋಟಗಾರಿಕೆಯ ಉತ್ಪಾದಕರ ಸಹಕಾರ ಮಾರ್ಕೆಟಿಂಗ್ ಮತ್ತು ಸಂಸ್ಕರಣೆ ಸಂಘ ನಿಯಮಿತ, ನೋಂದಾಯಿತ ಸಹಕಾರಿ ಸಂಘಗಳು, ನೋಂದಾಯಿತ ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘ, ಎಲ್‌ಎಎಂಪಿಎಸ್(ಬೃಹತ್ ಗ್ರಾಹಕ ಆದಿವಾಸಿ ವಿವಿಧೋದ್ದೇಶ ಸಂಘ), ನೋಂದಾಯಿತ ನೇಕಾರರ ಸಹಕಾರಿ ಸಂಘ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ, ನೋಂದಾಯಿತ ವಿವಿಧೋದ್ದೇಶ ಸಹಕಾರಿ ಸಂಘ, ಅಂಗವಿಕಲ ಕಲ್ಯಾಣ ಸಹಕಾರಿ ಸಂಘ, ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕ್‌ಗಳಿಂದ ನಡೆಸಲ್ಪಡುತ್ತಿರುವ ಬ್ಯಾಂಕ್‌ಗಳು ಅರ್ಜಿ ಸಲ್ಲಿಸಬಹುದು. ವೈಯಕ್ತಿಕವಾಗಿ ವಿಕಲಚೇತನರು ಹಾಗೂ ತೃತೀಯ ಲಿಂಗಿಗಳು ಅರ್ಜಿ ಸಲ್ಲಿಸಬಹುದು.
ಸಹಕಾರಿ ಸಂಘಗಳ ಅರ್ಹತೆಯ ಗುಣಮಟ್ಟ ನಿರ್ಧರಿಸಲು ಸಂಘಗಳಿಗೆ ನೀಡಲಾದ ಆಡಿಟ್ ಗ್ರೇಡ್ ಎ, ಬಿ, ಸಿ ಯನ್ನು ಪರಿಗಣಿಸಲಾಗುವುದು. ಸಹಕಾರಿ ಸಂಘವು ಕನಿಷ್ಠ ೩ ವರ್ಷದಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ೨ ವರ್ಷಗಳಲ್ಲಿ ಕನಿಷ್ಠ ರೂ. ೨ ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
ಅರ್ಜಿ ನಮೂನೆ ಹಾಗೂ ಸಂಬಂಧಿಸಿದ ಮಾಹಿತಿಯನ್ನು ಕುಷ್ಟಗಿ ತಹಶೀಲ್ದಾರ ಕಚೇರಿ(ಆಹಾರ ಶಾಖೆ)ಯಿಂದ ಪಡೆಯಬೇಕು. ಅರ್ಜಿಯನ್ನು ಸಲ್ಲಿಸಲು ಡಿಸೆಂಬರ್ ೧೯ ಕೊನೆಯ ದಿನವಾಗಿದ್ದು, ನಿಗದಿತ ನಮೂನೆ-ಎ ಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕುಷ್ಟಗಿ ತಹಶೀಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply