This is the title of the web page
This is the title of the web page

Please assign a menu to the primary menu location under menu

Local News

ಬಿಲ್ಲವ ಸಮಾಜವು ಸಮಾಜ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು : ಜಗದೀಶ ಐ. ಎಚ್.


ಬೆಳಗಾವಿ:ಮೇ೨೩:. “ಬಿಲ್ಲವ ಸಮಾಜವು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ಬಿಲ್ಲವರ ಅಸೋಸಿಯೇಷನ್ ಮತ್ತು ಶಿವಗಿರಿ ಸೊಸೈಟಿ ಇವು ಜಂಟಿಯಾಗಿ ಸಮಾಜದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಾಯ ನೀಡುತ್ತಿರುವುದು ಶ್ಲಾಘನೀಯ ಕಾರ್ಯ” ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಗಳಾದ ಜಗದೀಶ ಐ. ಎಚ್. ಅಭಿಪ್ರಾಯ ಪಟ್ಟರು.
ಬಿಲ್ಲವರ ಅಸೋಸಿಯೇಷನ್ ಮತ್ತು ಶಿವಗಿರಿ ಸೊಸೈಟಿ ಇವುಗಳ ಜಂಟಿ ಆಶ್ರಯದಲ್ಲಿ ‘ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, “ನಮ್ಮ ದೇಶದ ಸಂವಿಧಾನಾತ್ಮಕ ಸವಲತ್ತುಗಳು ನಮ್ಮ ಸಮಾಜದ ಕಟ್ಟ ಕಡೆಯ ಕುಟುಂಬಕ್ಕೆ ತಲುಪಬೇಕು. ಅದರ ಕುರಿತು ಜಾಗೃತಿ ಮೂಡಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸೊಸೈಟಿಯ ಅಧ್ಯಕ್ಷ ಸುಜನಕುಮಾರ ಮಾತನಾಡಿ, “ವಿದ್ಯಾರ್ಥಿಗಳು ಸಂಘದ ಸದುಪಯೋಗ ಪಡೆದುಕೊಂಡು, ಉನ್ನತ ಶಿಕ್ಷಣ ಪಡೆದು, ಸಮಾಜಕ್ಕೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಒಂದನೇ ತರಗತಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ನೋಟ್-ಬುಕ್ ವಿತರಿಸಲಾಯಿತು. ವೇದಿಕೆಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಸುಂದರ ಎಸ್. ಕೋಟ್ಯಾನ್, ಸೊಸೈಟಿಯ ಕಟ್ಟಡ ಮಾಲೀಕ ಸುನಿಲ ನಾಯ್ಕರವರು ಉಪಸ್ಥಿತರಿದ್ದರು.
ಸೊಸೈಟಿಯ ನಿರ್ದೇಶಕ ಮಂಡಳಿಯವರು, ಸಂಘದ ಪದಾಧಿಕಾರಿಗಳು,ಮಹಿಳಾ ಮಂಡಳಿಯಯವರು ಸೊಸೈಟಿಯ ಸಿಬ್ಬಂದಿ ವರ್ಗದವರು, ಪಿಗ್ಮಿ ಸಂಗ್ರಹಕರು ಹಾಜರಿದ್ದರು. ಮುಖ್ಯ ಕಾರ್ಯ ನಿರ್ವಾಹಕ ಸೋಮನಾಥ ಕಡಕೋಳ ಸ್ವಾಗತಿಸಿದರು. ಚಂದ್ರ ಎಚ್. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.


Gadi Kannadiga

Leave a Reply