ಬೈಲಹೊಂಗಲ : ೨೩ – ಕ್ರೀಡೆಯಿಂದ ದೈಹಿಕವಾಗಿ ಮಾನಸಿಕವಾಗಿ ಸದೃಡರಾಗಿ ಉತ್ತಮ ಶರೀರ ಸಂಪತ್ತು ಹೊಂದಲು ಸಾಧ್ಯವೆಂದು ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಬಿರಾದಾರ ಹೇಳಿದರು
ಸಂಸ್ಥೆಯ ನೇತಾಜಿ ಸುಭಾಷ ಚಂದ್ರ ಬೋಸ ಕನ್ನಡ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಗಳ ಕಡೆ ಆಸಕ್ತಿ ವಹಿಸಿ, ಉತ್ತಮ ಕ್ರೀಡಾಪಟುಗಳ ಆಗಬೇಕು ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಗಳಲ್ಲಿ ಭಾಗವಹಿಸುವುದೆ ಬಹು ಮುಖ್ಯ ಕ್ರೀಡಾ ಆಸಕ್ತಿಯನ್ನು ಎಲ್ಲರೂ ಬಳಸಿಕೊಳ್ಳಬೇಕೆಂದು ನುಡಿದರು
ಶಿಕ್ಷಣ ಸಂಯೋಜಿಕ ಪ್ರಕಾಶ್ ಮಾಸ್ತಿ ಹೊಳಿ ಮಾತನಾಡಿ ಸದೃಡ ಆರೋಗ್ಯ ಹೊಂದಲು ಕ್ರೀಡೆ ಅವಶ್ಯ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸ್ನೇಹ ಪ್ರೀತಿ ಬೆಳೆಯುತ್ತದೆ ಅಲ್ಲದೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಆದ್ದರಿಂದ ಎಲ್ಲರೂ ಕ್ರೀಡಾ ಮನೋಭಾವನೆ ಹೊಂದಿ ಕ್ರೀಡೆಗಳಲ್ಲಿ ಭಾಗವಹಿಸಿ ನಾಡಿನಲ್ಲಿ ಒಳ್ಳೆಯ ಕ್ರೀಡಾಪಟುಗಳಾಗಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಹೇಳಿದರು
ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್ ಜಿ ಹೊರಟ್ಟಿ ಹಾಗೂ ಉಪನ್ಯಾಸಕ ಗಜಾನನ ಸೂರ್ಯವಂಶಿ ಅವರು ಮಾತನಾಡಿ ಕ್ರೀಡೆ ಎಲ್ಲರಿಗೂ ಅವಶ್ಯವಾಗಿದ್ದು ಪ್ರತಿದಿನ ಎಲ್ಲರೂ ವ್ಯಾಯಾಮ ಮಾಡಿ ಉತ್ತಮ ಶರೀರ ಹೊಂದಿ ಒಳ್ಳೆಯ ಆರೋಗ್ಯ ಹೊಂದಬೇಕೆಂದರು ಹಿರಿಯ ಪತ್ರಕರ್ತ ಮಹಾಂತೇಶ ರೇಶ್ಮಿ ಅತಿಥಿಯಾಗಿ ಆಗಮಿಸಿದ್ದರು ಮುಖ್ಯಶಿಕ್ಷಕಿ ವೀಣಾ ಜೋಶಿ ವೇದಿಕೆ ಮೇಲೆ ಇದ್ದರು
ಅತಿಥಿಗಳು ಸಸಿಗೆ £Ãರು ಹಾಕುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು ನಂತರ ಕ್ರೀಡಾ ದ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಂಡರು ಹಾಗೂ ಪಾರಿವಾಳಗಳನ್ನು ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ £Ãಡಲಾಯಿತು ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು ಶಿಕ್ಷಕ ವಿ ಪಿ ನಂದೇನವರ ಸ್ವಾಗತಿಸಿದರು ಶಿಕ್ಷಕ ಎಸ್ ವಾಯ್ ಕರಡಿಗುಡ್ಡ £ರೂಪಿಸಿದರು ದೈಹಿಕ ಶಿಕ್ಷಕ ಜಿ ಎಂ ಗಾಡದ ಪ್ರಮಾಣ ವಚನ ಬೋಧಿಸಿದರು ಶಿಕ್ಷಕ ಪ್ರಕಾಶ ಕಂಠಿ ವಂದಿಸಿದರು ದೈಹಿಕ ಶಿಕ್ಷಕ ಕುಮಾರ ಬೋರಕನವರ ಕ್ರೀಡಾಕೂಟಕಾರ್ಯ ನೆಡೆಸಿಕೊಟ್ಟರು
Gadi Kannadiga > Local News > ಕ್ರೀಡೆಯಿಂದ ಉತ್ತಮ ಶರೀರ ಸಂಪತ್ತು ಹೊಂದಲು ಸಾಧ್ಯ ಬಿರಾದಾರ