This is the title of the web page
This is the title of the web page

Please assign a menu to the primary menu location under menu

State

ಬುದ್ದಿಮಾಂದ್ಯ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ.. ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಶ್ಲಾಘನೆ


ಗಂಗಾವತಿ.:ಪತ್ರಕರ್ತ ರವಿಕುಮಾರ ಅವರ ಪುತ್ರ ೩ನೇ ತರಗತಿಯ ಬಾಲಕ ಪ್ರಣವಕುಮಾರ ಡಿ ತನ್ನ ಹುಟ್ಟುಹಬ್ಬವನ್ನು ಬುದ್ದಿಮಾಂದ್ಯ ಮಕ್ಕಳಿಗೆ ಸಿಹಿ ವಿತರಿಸಿ ಅವರೊಂದಿಗೆ ಸಂಭ್ರಮಾಚರಣೆ ಮಾಡಿಕೊಂಡಿರುವುದಕ್ಕೆ ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಶ್ಲಾಘಿಸಿದರು.
ಕಳೆದ ದಿನ ನಗರದ ಲಯನ್ಸ್ ಬುದ್ದಿಮಾಂದ್ಯ ವಸತಿ ಶಾಲೆಗೆ ತಮ್ಮ ಪುತ್ರ ಮತ್ತು ಕುಟುಂಬ ಸಮೇತ ತೆರಳಿ ಪತ್ರಕರ್ತ ರವಿಕುಮಾರ ಪುತ್ರನ ಹುಟ್ಟುಹಬ್ಬವನ್ನು ಬುದ್ದಿಮಾಂಧ್ಯ ವಿದ್ಯಾರ್ಥಿಗಳೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಬುದ್ದಿಮಾಂದ್ಯ ವಿದ್ಯಾರ್ಥಿಯೊಂದಿಗೆ ಕೆಕ್ ಕತ್ತರಿಸಿ ಮಾತನಾಡಿ, ಇತ್ತೀಚಿಗೆ ಹುಟ್ಟುಹಬ್ಬ ಪ್ರತಿ ಮನೆಯಲ್ಲೂ ಆಚರಿಸಲಾಗುತ್ತದೆ. ಮಕ್ಕಳು ಕೆಕ್ ಕತ್ತರಿಸಿ ವಿವಿಧ ರೀತಿಯ ಸಂಭ್ರಮಾಚರಣೆ ಮಾಡುವುದು ವಾಡಿಕೆಯಾಗಿದೆ. ಆದರೆ ಪತ್ರಕರ್ತ ರವಿಕುಮಾರ ತನ್ನ ಮಗನ ಹುಟ್ಟುಹಬ್ಬವನ್ನು ವಿಶೇಷ ಚೇತನ ಮಕ್ಕಳೊಂದಿಗೆ ಆಚರಿಸಿ ಅವರಿಗೆ ಸಿಹಿ ವಿತರಿಸಿ ಕುಟುಂಬ ಸಮೇತ ಸಂಭ್ರಮಿಸಿರುವುದು ಅತ್ಯಂತ ಮಹತ್ವವಾಗಿದೆ. ವಿಶೇಷ ಚೇತನ ಮಕ್ಕಳಲ್ಲೂ ಅಗಾಧ ರೀತಿಯ ಬುದ್ದಿ ಕೌಶಲ್ಯವಿರುತ್ತದೆ. ಅಂತಹ ಮಕ್ಕಳೊಂದಿಗೆ ನಾವು ಬೆರೆತಾಗ ಅವರಿಗೆ ಹೊಸ ಹುಮ್ಮಸ್ಸು ಬರುತ್ತದೆ. ಹುಟ್ಟುಹಬ್ಬವನ್ನು ಅನವಶ್ಯಕವಾಗಿ ಖರ್ಚು ಮಾಡಿ ಸಂಭ್ರಮಿಸುವುದಕ್ಕಿಂತ ಇಂತಹ ವಿಶೇಷ ಚೇತನ ಮಕ್ಕಳೊಂದಿಗೆ ಬೆರೆತು ಆಚರಿಸಿಕೊಂಡರೆ ಹುಟ್ಟುಹಬ್ಬಕ್ಕೆ ವಿಶೇಷ ಅರ್ಥ ಬರುತ್ತದೆ. ಜೊತೆಗೆ ಮಕ್ಕಳಿಗೂ ಸಾಮಾಜಿಕ ಜವಬ್ದಾರಿ ಹೆಚ್ಚುತ್ತದೆ.
ಪತ್ರಕರ್ತ ರವಿಕುಮಾರ ತನ್ನ ಮಗನಿಗೆ ಈ ರೀತಿಯ ಹುಟ್ಟುಹಬ್ಬ ಆಚರಿಸುವ ಪದ್ಧತಿ ಕಲಿಸಿಕೊಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಉಪನ್ಯಾಸಕಿ ಹಾಗೂ ಸಾಹಿತಿ ಸೋಮಕ್ಕ, ಪತ್ರಕರ್ತ ಕೆ.ನಿಂಗಜ್ಜ, ಮೆಚ್ಚುಗೆ ವ್ಯಕ್ತಪಡಿಸಿದರು. ಉಪನ್ಯಾಸಕಿ ಶ್ರೀದೇವಿ ಕೃಷ್ಣಪ್ಪ, ಅಶೋಕಗೌಡ ಮತ್ತಿತರು ಪತ್ರಕರ್ತ ರವಿಕುಮಾರ ಕುಟುಂಬ ಮತ್ತಿತರು ಇದ್ದರು.


Gadi Kannadiga

Leave a Reply