This is the title of the web page
This is the title of the web page

Please assign a menu to the primary menu location under menu

Local News

ಡಿ.ಕೆ. ಸುರೇಶ ಕುಮಾರ ವಿರುದ್ಧ ರಸ್ತೆಗಿಳಿದ ಬಿಜೆಪಿ ಕಾರ್ಯಕರ್ತರು


ಹುಬ್ಬಳ್ಳಿ: ಬೆಂಗಳೂರು ಗ್ರಾಮಾಂತರ ರಾಮನಗರದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ ಅವರು ಸಚಿವ ಅಶ್ವಥ್ ನಾರಾಯಣ ಅವರ ಜೊತೆಗೆ ಕೈ ಕೈ ಮೀಲಾಯಿಸಿದನ್ನು ಖಂಡಿಸಿ, ಡಿ.ಕೆ. ಸುರೇಶ ಅವರ ಭಾವಚಿತ್ರ ದಹನ ಮಾಡಿ ಹು-ಧಾ ಮಹಾನಗರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಸಂಸದ ಡಿ.ಕೆ.ಸುರೇಶ ಹಾಗೂ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಗೂಂಡಾಗಿರಿ ಪ್ರವೃತ್ತಿಯನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದಮಠ, ರವಿ ನಾಯಕ, ಚಂದ್ರಶೇಖರ ಗೋಕಾಕ್, ರಂಗಾ ಬದ್ದಿ, ಸಿದ್ದು ಮೊಗಲಿಶೆಟ್ಟರ, ಶಿವಾನಂದ ಮುತ್ತಣ್ಣವರ, ಸುಭಾಷ ಅಂಕಲಕೋಟಿ,ಈಶ್ವರಗೌಡ ಪಾಟೀಲ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


Leave a Reply