This is the title of the web page
This is the title of the web page

Please assign a menu to the primary menu location under menu

Local News

ಚುನಾವಣಾ ಮತಗಟ್ಟೆಗೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಭೇಟಿ


ಹುಬ್ಬಳ್ಳಿ: ಪಶ್ಚಿಮ‌ ಶಿಕ್ಷಕರ ಚುನಾವಣೆ ಹಿನ್ನಲೆ ಮತಗಟ್ಟೆಗಳಿಗೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಭೇಟಿ ನೀಡಿದರು. ಎನ್ ಆರ್ ದೇಸಾಯಿ ರೋಟರಿ ಸ್ಕೂಲ್ ಗೆ ಭೇಟಿ ನೀಡಿದ್ದಾರೆ.

ಮತಗಟ್ಟೆ ಭೇಟಿಯ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಕಡೆ ಓಡಾಡಿದೀನಿ, ಮೊದಲು ಲೀಡರ್ಸ್ ಓಟ್ ಹಾಕ್ತಾಯಿದ್ದಾರೆ. ಎಲ್ಲಾ ಕಡೆ ಎರಡೆರಡು ಟೀಮ್ ಮಾಡಿದೀವಿ ಎಲ್ಲರಿಗೂ ಹತ್ತು ಗಂಟೆಯೊಳಗೆ ಮತ ಹಾಕಲಿಕ್ಕೆ ಹೇಳಲಾಗಿದೆ. ಹತ್ತು ಗಂಟೆಯ ನಂತರ ಬರದೇ ಇರೋರನ್ನ ಕರೆಸುವ ಯತ್ನ ಮಾಡ್ತೇವೆ ಎಂದರು.

ಹೊರಟ್ಟಿ ಮೇಲೆ ಭ್ರಷ್ಟಾಚಾರ ಆರೊಪ ವಿಚಾರಕ್ಕೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪಗಳ ಬಗ್ಗೆ ಕಾನೂನು ಪ್ರಕಾರ ಉತ್ತರ ಕೊಡುತ್ತೇನೆ ಭ್ರಷ್ಟಾಚಾರದ ವಿಚಾರ ನಾನು ಮೊದಲೇ ಹೇಳಿದಿನಿ ಭ್ರಷ್ಟಾಚಾರದ ಸಾಕ್ಷಿ ಕೊಟ್ಟರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದೆ ಒಬ್ಬರೂ ಬಂದಿಲ್ಲ ಕೇವಲ ಚುನಾವಣೆ ಬಂದಾಗ ಆರೋಪ ಮಾಡ್ತಾರೆ. 42 ವರ್ಷ ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಒಂದು ವಾರದಿಂದ ಕೇವಲ ಆರೋಪ ಮಾಡ್ತಾಯಿದ್ದಾರೆ. ಮತದಾನದ ಒಟ್ಟು ಮತಗಳಲ್ಲಿ 70 % ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.


Gadi Kannadiga

Leave a Reply