This is the title of the web page
This is the title of the web page

Please assign a menu to the primary menu location under menu

Local News

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಮತಗಳಿಂದ ಗೆಲವು ಸಾಧಿಸಲಿದ್ದಾರೆ: ಎಂ.ಎಲ್.ಸಿ ಪುಟ್ಟಣ್ಣ


ಬೆಳಗಾವಿ: ವಿಧಾನ ಪರಿಷತ್ ಚುನಾವಣೆಗೆ ಶಿಕ್ಷಕ ಕ್ಷೇತ್ರದಿಂದ ಅರುಣ ಶಹಪುರ ಮತ್ತು ಪದವಿದರ ಕ್ಷೇತ್ರದಿಂದ ಹಣಮಂತ ನಿರಾಣಿ ಅವರು ಬಿಜೆಪಿಯಿಂದ ಸ್ಪರ್ದಿಸಿದ್ದು ಮತದಾರರು ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಎಂ.ಎಲ್.ಸಿ ಪುಟ್ಟಣ್ಣ ಅವರು ಹೇಳಿದರು.

ಸೋಮವಾರ ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಸುದದಿಗೋಷ್ಟಿಯಲ್ಲಿ ಅವರು ಮಾತನಾಡಿದರು.  ಶಿಕ್ಷಣ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಅರುಣ ಶಹಪುರ ಅವರು ಮೂರನೇ ಭಾರಿ ಬೆಳಗಾವಿ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ. ಶಿಕ್ಷಕರ ಸಮಸ್ಯೆ ಪರಿಹರಿಸಲು ಹಲವಾರು ಹೋರಾಟಗಳಮ್ಮು ಮಾಡಿದ್ದು ಸಿದ್ದರಾಮಯ್ಯ ಅವರ ಆಡಳಿತದಲ್ಲಿ ವಿಧಾನಸೌಧದ ಎದುರು ೧೧ದಿನ ಅಹೋರಾತ್ರಿ ಧರಣಿ ಮಾಡಿದ್ದೇವೆ. ಶಿಕ್ಷಕರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು.

ಶಿಕ್ಷಕರ ನಾಡಿಮಿಡಿತ ಅರಿತ ಅರುಣ ಶಹಪೂರ ಅವರು ಮೂರನೇ ಭಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಮತದಾರರು ಮತ್ತು ಅರುಣ ಶಹಪುರ ಅವರ ಮಧ್ಯ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅದ್ದರಿಂದ ಬಹುಮತಗಳ ಅಂತರದಲ್ಲಿ ಗೆಲವು ಸಾಧಿಸಲಿದ್ದಾರೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಹಣಮಂತ ನಿರಾಣಿ ಅವರು ಕೂಡ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಈ ಭಾರಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು ಅವರಿಗೆಲ್ಲ ಉನ್ನತ ಶಿಕ್ಷಣಕ್ಕೆ ಸೀಟು ಸಿಗುವಂತೆ ಕೆಲಸ ಮಾಡಬೇಕಿದೆ. ಎಂದರು.

ಬಳಿಕ ಶಿಕ್ಷಕ ಕ್ಷೇತ್ರದ ಅಭ್ಯರ್ಥಿ ಅರುಣ ಶಹಪುರ ಮಾತನಾಡಿ ೩೩ ವಿಧಾನ ಪರಿಷತ್ ಕ್ಷೇತ್ರದಲ್ಲಿಯೂ ಸಂಚರಿಸಿ ಕೆಲಸ ಮಾಡಿದ್ದೇನೆ ಬಿಜೆಪಿ ಎಲ್ಲ ಮುಖಂಡರು ನನ್ನ ಗೆಲುವಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಭಾರಿಯು ಬಿಜೆಪಿಯೇ ಗೆಲ್ಲಲಿದೆ. ಕಾಂಗ್ರೆಸ್ ಗೆಲ್ಲಲು ತಂತ್ರಗಾರಿಕೆ ಮಾಡುತ್ತಿದೆ ಅವರ ಕೆಲಸ ಅವರು ಮಾಡಲಿ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದರು

ಮಾಜಿ ಶಾಸಕ ಸಂಜಯ ಪಾಟೀಲ್ ಅವರು ಮಾತನಾಡಿ ಮೇ.೨೬ರಂದು ಬಿಜೆಪಿ ವಿಧಾನ ಪರಿಷತ್ ಅಭ್ಯರ್ಥಿಗಳಾದ ಅರುಣ ಶಹಪುರ ಮತ್ತು ಹಣಮಂತ ನಿರಾಣಿ ಅವರು ನಾಮಪತ್ರ ಸಲ್ಲಿಸಲಿದ್ದು ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ , ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸೇರಿದಂತೆ ಶಾಸಕರು ಮತ್ತು ಸಚೀವರು ಸೇರಿದಂತೆ ಎಲ್ಲ ಮುಖಂಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಕಾಂಗ್ರೆಸ್ ಪಕ್ಷ ಶಕ್ತಿಪ್ರದರ್ಶನ ಮಾಡುವುದು ಅವರ ಪಕ್ಷಕ್ಕೆ ಸಂಭಂಧಿಸಿದ ವಿಚಾರ ಚುನಾವಣೆ ಗೆಲ್ಲಲು ನಾವು ಅವರಂತೆ ಲ್ಯಾಪಟಾಪ್ ಹಂಚಿಕೆ ಮಾಡುತ್ತಿಲ್ಲ. ಅವರು ನಿಜವಾಗಲೂ ಇಳ್ಳೆಯವರಾಗಿದ್ದರೆ ಏನನ್ನೂ ಹಂಚುವ ಅವಶ್ಯಕತೆ ಇರಲಿಲ್ಲ ಮತದಾರರಿಗೆ ಹಂಚಿಕೆ ಮಾಡಿ ಗೆಲ್ಲುವುದು ನಿಜವಾದ ಗೆಲುವಲ್ಲ ಕೆಲಸ ಮಾಡಿ ಮತ ಪಡೆದು ಗೆಲ್ಲುವುದು ನಿಜವಾದ ಗೆಲುವು ಎಂದರು.

ಈ ಸಂದರ್ಭದಲ್ಲಿ ಮಹಾಂತೇಶ ಕವಟಗಿಮಠ , ಶಶಿಕಾಂತ ಪಾಟೀಲ, ದಾದಾಗೌಡ ಬಿರಾದರ ಸೇರಿದಂತರ ಇನ್ನಿತರರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು


Leave a Reply