This is the title of the web page
This is the title of the web page

Please assign a menu to the primary menu location under menu

Local News

ಸವದತ್ತಿ ಮಂಡಳದ ಬಿಜೆಪಿ ಕಾರ್ಯಕಾರಿಣಿ ಸಭೆ


ಸವದತ್ತಿ ೧೪ : ನಮ್ಮ ಬಾರತೀಯ ಜನತಾಪಕ್ಷ ನಿರಂತರವಾಗಿ ಸಮಾಜ ಸೇವೆ ಮಾಡುತ್ತ ಬಂದಿರುವ ನಮ್ಮ ಪಕ್ಷ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ವಲ್ಲ ನಿರಂತರವಾಗಿ ಕಾರ್ಯಕರ್ತರ ಸಂಪರ್ಕದಲ್ಲಿ ಉಳಿದು ಸಮಾಜ ಸೇವೆಯನ್ನು ಯಾವರಿತಿ ಮಾಡಬೇಕು ಮತ್ತು ಅಭಿವೃದ್ದಿ ಕಾರ್ಯಗಳನ್ನು ಮಾಡುವಲ್ಲಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಮಾಡುವ ಪಕ್ಷ, ನಮ್ಮ ಪಕ್ಷ ತನ್ನದೇಯಾದ ವಿಚಾರ ದಾರೆಯಲ್ಲಿ ಕೇಲಸ ಮಾಡುವ ಪಕ್ಷ ಆನಿಟ್ಟಿನಲ್ಲಿ ಕಾರ್ಯಕಾರಿಣಿ ಸಭೆಗಳನ್ನು ಮಾಡಿ ಕಾರ್ಯಕರ್ತರ ಸಹಬಾಗಿತ್ವದಲ್ಲಿ ನಮ್ಮ ಪಕ್ಷ ಸೇವೆಸಲ್ಲಿಸುತ್ತಿದೆ ಇನ್ನು ತಾಲೂಕಿನಲ್ಲಿ ಚುನಾವಣೆಗೆ ಯಾರೇ ಸ್ಪರ್ದಿಸಿದರೂ ಏನೆ ಮಾಡಿದರೂ ನಮ್ಮ ಗೆಲುವು ಮಾತ್ರ ನಿಶ್ಚೀತ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾದ್ಯಕ್ಷ ಆನಂದ ಮಾಮನಿಯವರು ಮಾತನಾಡಿದರು
ಅವರು ಸ್ಥಳಿಯ ಮಾಮನಿ ಕಲ್ಯಾಣಮಂಟಪದಲ್ಲಿ ಬಾರತೀಯ ಜನತಾ ಪಕ್ಷದ ಸವದತ್ತಿ ಮಂಡಳದ ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ನನಗೆ ನಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಮತ್ತು ಪ್ರಜ್ಞಾವಂತ ಮತದಾರರು ನನ್ನಹಿಂದೆ ಮತ್ತು ಅವರ ಹಿಂದೆ ನಾನಿರುವಾಗ ಯಾರೂ ಈ ಬಗ್ಗೆ ಚಿಂತಿಸುವ ವಿಚಾರ ಮಾಡಬಾರದು ಎಂದು ಮಾತನಾಡಿದರು
ಸಭೆಯ ಪ್ರಾರಂಭದಲ್ಲಿ ಮಲ್ಲೇಶ ಸುಳೇಭಾವಿ ಪ್ರಾರ್ಥನಾಗಿತೆ ಯೊಂದಿಗೆ ಸಬೆ ಪ್ರಾರಂಭವಾಯಿತು
ನಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆಯವರು ಮಾತನಾಡಿ ಈ ಹಿಂದೆಯೇ ಮಾಡಬೇಕಾಗಿತ್ತು ಆದರೆ ಚುನಾವಣೆ ಬಂದಕಾರಣ ಈಗ ನಮ್ಮಪಕ್ಷವು ಹಂತ ಹಂತವಾಗಿ ಕಾರ್ಯಕಾರಿಣಿ ಸಭೆಗಳನ್ನು ಮಾಡಿ ಆ ಸಭೆಗಳಲ್ಲಿ ಅನೇಕ ವಿಷಯಗಳನ್ನ ಚರ್ಚಿಸುವ ಮತ್ತು ನಿರ್ಣಯಿಸುವ ಸಬೆಗಳನ್ನು ಮಾಡಿ ಪಕ್ಷ ಬಲವರ್ದನೆ ಮತ್ತು ಯಾವರಿತಿ ಕಾರ್ಯಕರ್ತರು ಕೇಲಸಮಾಡಬೇಕು ಎಂಬುವುದನ್ನು ನಿರ್ಣಯಿಸಲಾಗುವುದು ಸಂಘಟನಾತ್ಮಕ ವಿಷಯಗಳನ್ನು ಕೊಡಾಚಚಿಸಲಾಗುವುದು ನಮ್ಮ ದೇಶದ ಲಾಂಛನದಬಗ್ಗೆ ಯಾರಿಗೂ ಕಲ್ಪನೆ ಇಲ್ಲ ದಿರುವಾಗ ಮುಚ್ಚಿದ ಬಾಯಿಯ ಸಿಂಹವಾಗಿತ್ತು ಅಶೋಕ ಚಕ್ರವರ್ತಿ ಯಾವರಿತಿ ನಮ್ಮೇಲ್ಲರಿಗೂ ಕೊಟ್ಟಿದ್ದರೋ ಅದು ಯಾವರಿತಿ ಇತ್ತು ಎಂಬುವುದನ್ನ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಆಡಳಿತಕ್ಕೆ ಬಂದ ನಂತರ ತೊರಿಸಿ ಕಾಯಕಲ್ಪ ತರುವಲ್ಲಿ ಶ್ರಮಿಸಿದವರು ಎಂದು ಹೇಳಿದರು
ಸಬೆಯಲ್ಲಿ ಪಕ್ಷದ ಮುಖಂಡರಾದ ಈರಣ್ಣ ಚಂದರಗಿ, ವಿಬಾಗೀಯ ಸಹ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ ಅಜೀತಕುಮಾರ ದೇಸಾಯಿ ವಿನಯಕುಮಾರ ದೇಸಾಯಿ, ಬಿ ಆಯ್ ಹಿರೇಮಟ, ಮಹಿಳಾ ಮೋರ್ಚಾ ಅದ್ಯಕ್ಷೇ ಡಾಕ್ಟರ ನಯನಾ ಭಸ್ಮೇ, ಜಗದೀಶ ಶಿಂತ್ರಿ, ದೀಪಕ ಜಾನ್ವೇಕರ, ಮಲ್ಲೇಶ ಸುಳೇಬಾವಿ, ಜಗದೀಶ ಕೌಜಗೇರಿ,ಉಪಸ್ಥಿತರಿದ್ದರು ಮಹಾಂತೇಶ ಪಂಚೇನವರ ಸ್ವಾಗತಿಸಿದರು


Gadi Kannadiga

Leave a Reply