ಯಮಕನಮರಡಿ: ಭಾರತೀಯ ಜನತಾ ಪಕ್ಷವು ವ್ಯಕ್ತಿಪೂಜೆಯ ಪಕ್ಷವಲ್ಲ ದೇಶ ಪೂಜೆಯ ಪಕ್ಷವಾಗಿದೆ ಇಂದು ದೇಶದ ಸುರಕ್ಷತೆಗೆ ಬಿಜೆಪಿ ಸರ್ಕಾರ ಅವಶ್ಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಅವರು ಗುರುವಾರ ದಿ. ೦೪ ರಂದು ಹೆಬ್ಬಾಳ ಗ್ರಾಮದಲ್ಲಿ ಯಮಕನಮರಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಯವರ ಪರ ಮತಯಾಚಿಸಿ ಮಾತನಾಡಿದರು. ಕಾಂಗ್ರೇಸನ ಪ್ರಣಾಳಿಕೆಯಲ್ಲಿ ಬಜರಂಗ ದಳ £ಷೇದದ ಪ್ರಸ್ತಾವಣೆ ಮಾಡಿದ್ದು, ಇದರಿಂದ ಕಾಂಗ್ರೇಸಿನಲ್ಲಿ ಹಿಂದುತ್ವ ಧ್ವೇಷ ಭಾವನೆ ಎದ್ದು ಕಾಣುತ್ತಿದೆ. ಇಂದು ನಮ್ಮ ನಮ್ಮ ಧರ್ಮಗಳ ರಕ್ಷಣೆ ಮಾಡಬೇಕಾಗಿದೆ. ಬಿಜೆಪಿ ಪಕ್ಷವನ್ನು ಸಂಘಟಿಸಿದ ಮಾರುತಿ ಅಷ್ಟಗಿಯವರು ಟಿಕೇಟು ಸಿಗಲಿಲ್ಲ ಎಂಬ ಕಾರಣಕ್ಕಾಗಿ ಜೆಡಿಎಸ್ ಪಕ್ಷದಿಂದ ಚುನಾಣೆಗೆ ಸ್ಪರ್ದಿಸಿದ್ದಾರೆ. ಬಿಜೆಪಿ ಆಂತರಿಕ ಮತಗಳು ಒಡೆದು ಹೋಗದಂತೆ ಬಿಜೆಪಿ ಕಾರ್ಯಕರ್ತರು £ಗಾವಹಿಸಿಕೊಂಡು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿಯವರನ್ನು ಗೆಲ್ಲಿಸಬೇಕೆಂದು ರಮೇಶ ಕತ್ತಿ ಹೇಳಿದರು.
ಯಮಕನಮರಡಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಮಾತನಾಡಿ ಹುಕ್ಕೇರಿ ತಾಲೂಕಾ ಅಭಿವೃದ್ದಿಗೆ ಕತ್ತಿ ಕುಟುಂಬದವರು ಅಪಾರ ಕೊಡುಗೆ £Ãಡಿದ್ದು, ದಿ. ಉಮೇಶ ಕತ್ತಿಯವರು ಯಮಕನಮರಡಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಆಶೆಯ ಹೊಂದಿದ್ದರು. ಆದರೆ ಅವರ ಅಗಲಿಕೆಯಿಂದ ನಮಗೆ ನೋವಾಗಿದ್ದು, ದಿ. ಉಮೇಶ ಕತ್ತಿಯವರ ಆಶಯ ಈಡೇರಿಕೆಯಾಗಬೇಕಾದರೆ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಈ ಚುನಾವಣೆಯಲ್ಲಿ ಶ್ರಮಿಸಿ ನನ್ನನ್ನು ಗೆಲ್ಲಿಸಬೇಕು ನಾನು ಯಮಕನಮರಡಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ. ಇಲ್ಲಿಯ ಶಾಸಕರು ಕ್ಷೇತ್ರದ ಅಭಿವೃದ್ದಿ ಮಾಡದೇ ತಮ್ಮ ಸ್ವಂತಿಕೆಯನ್ನು ಅಭಿವೃದ್ದಿ ಮಾಡಿಕೊಳ್ಳುತ್ತಿದ್ದಾರೆ. £Ãರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಬಸವರಾಜ ಹುಂದ್ರಿ ಹೇಳೀದರು.
ಅಪ್ಪಾಸಾಹೇಬ ಸಂಕನ್ನವರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಶಶಿಕಾಂತ ಮಠಪತಿ, ಜಯಪಾಲ ಹೊನ್ನನವರ, ರವಿ ಹಂಜಿ, ಅಜೀತ ಮುನ್ನೂಳಿ, ಚನ್ನಬಸು ಖೋತ, ಹಣಮಂತ ಇನಾಮದಾರ, ಕೃಷ್ಣಾ ಎಮ್. ಭಟ್, ನ್ಯಾಯವಾದಿ ಆರ್.ಎಸ್. ಮುತಾಲಿಕ, ಮತ್ತು ಗ್ರಾಮದ ಶಿವಾನಂದ ಬಿಲಕಾರಿ, ರವಿ ಬಾಳಿಕಾಯಿ, ವಿಶ್ವನಾಥ ಕಮತೆ, ಸಮಸ್ತ ಬಿಜೆಪಿ ಕಾರ್ಯಕರ್ತರು ಇದ್ದರು. ಉಳ್ಳಾಗಡ್ಡಿ ಖಾನಾಪೂರ, ಹಂಚಿನಾಳ, ಯಮಕನಮರಡಿ, ದಡ್ಡಿ, ಇಸ್ಲಾಂಪೂರ, ಪಾಶ್ಚಾಪೂರ ಮಾವನೂರ ಗ್ರಾಮಗಳಿಗೆ ರಮೇಶ ಕತ್ತಿಯವರು ಬೇಟಿ ಬಸವರಾಜ ಹುಂದ್ರಿ ಪರ ಮತಯಾಚಿಸಿದರು.
Gadi Kannadiga > Local News > ದೇಶದ ಸುರಕ್ಷತೆಗೆ ಬಿಜೆಪಿ ಸರ್ಕಾರದ ಅವಶ್ಯ : ರಮೇಶ ಕತ್ತಿ
ದೇಶದ ಸುರಕ್ಷತೆಗೆ ಬಿಜೆಪಿ ಸರ್ಕಾರದ ಅವಶ್ಯ : ರಮೇಶ ಕತ್ತಿ
Suresh04/05/2023
posted on
