This is the title of the web page
This is the title of the web page

Please assign a menu to the primary menu location under menu

Local News

 ಸರ್ಕಾರದ ವೈಫಲ್ಯ ಬಯಲಿಗೆಳೆಯಲು, ಬಿಜೆಪಿ ಹಟಾವೋ ಚಳವಳಿ:  ಕೆಪಿಸಿಸಿ ಉಪಾಧ್ಯಕ್ಷ ಬಸವರಾಜ ರಾಯರಡ್ಡಿ


 

ಬೆಳಗಾವಿ: “ಬೆಳಗಾವಿಯಲ್ಲಿ  ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನ ಸ್ಥಳದಿಂದ ಕಾಂಗ್ರೆಸ್‌ ಬಸ್‌ ಯಾತ್ರೆಗೆ ಜ. 11 ರಂದು ಚಾಲನೆ ನೀಡಲಾಗುವುದು” ಎಂದು ಕೆಪಿಸಿಸಿ ಉಪಾಧ್ಯಕ್ಷ ಬಸವರಾಜ ರಾಯರಡ್ಡಿ  ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌  ಭವನದಲ್ಲಿ  ಸುದ್ದಿಗೊಷ್ಠಿಯಲ್ಲಿ  ಮಾತನಾಡಿದ ಅವರು, ಬೆಳಗಾವಿಯಲ್ಲಿ  ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್‌ ಮಹಾ ಅಧಿವೇಶನವಾಗಿದೆ. ಹೀಗಾಗಿ ಬಿಜೆಪಿ ಹಟಾವೋ ಚಳವಳಿಯನ್ನು ಕಾಂಗ್ರೆಸ್ ಮಾಡಲಿದೆ. ಬಳಿಕ ಚಿಕ್ಕೋಡಿಯಲ್ಲಿ 11ಕ್ಕೆ ಸಾರ್ವಜನಿಕ ಸಭೆ, ಮಧ್ಯಾಹ್ನ ಅಂಜುಮನ್ ಸಭಾಂಗಣದಲ್ಲಿ ಬೆಳಗಾವಿಯಲ್ಲಿ ಸಾರ್ವಜನಿಕ ಸಭೆ ಮಾಡಲಿದ್ದೇವೆ ಎಂದರು.

 

ಬೆಳಗಾವಿ ಜಿಲ್ಲೆಯಲ್ಲಿ ಜಂಟಿ ಬಸ್ ಯಾತ್ರೆ ನಡೆಸಿದ ಬಳಿಕ ನಾಲ್ಕು ದಿನ ವಿಶ್ರಾಂತಿಪಡೆದು, ವಿಜಯನಗರ, ಕೊಪ್ಪಳ, ಬಾಗಲಕೋಟ, ಗದಗ, ಹಾವೇರಿಯಲ್ಲಿ ನಡೆಯುವ ಯಾತ್ರೆಯ‌ ಬಗ್ಗೆ ಹಾಗೂ ಉತ್ತರ ಕರ್ನಾಟಕದ ಭಾಗದ ಯಾತ್ರೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಬಸ್ ಯಾತ್ರೆ ಮುಗಿದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಉತ್ತರ ಕರ್ನಾಟಕದಲ್ಲಿ 112 ವಿಧಾನಸಭಾ ಮತಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ. 14 ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ನಡೆಸಲಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲ ನಾಯಕರು ಪ್ರವಾಸ ಮಾಡಲಿದ್ದಾರೆ. ಜ.30 ಅಥವಾ ಫೆ.2ಕ್ಕೆ ಬಸವಕಲ್ಯಾಣದಿಂದ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.

ಭ್ರಷ್ಟಾಚಾರ ಸರ್ಕಾರ ಕಿತ್ತು ಹಾಕುತ್ತೇವೆ: ಭಾರತ ಜೋಡೋ ಯಾತ್ರೆಗೆ ದೇಶಾದ್ಯಂತ ಉತ್ತಮ ಸ್ಪಂಧನೆ ದೊರತ್ತಿದೆ.  ಕಾಲ ಬದಲಾಗಿದೆ, ಬಿಜೆಪಿ ಆಡಳಿತವನ್ನು ಜನರು ಧಿಕ್ಕರಿಸಿ ಕಾಂಗ್ರೆಸ್ ನತ್ತ ಒಲುವು ತೋರುತ್ತಿದ್ದಾರೆ. ವಿಧಾನ ಸಭಾ ಚುನವಾಣೆಯಲ್ಲಿ  ಬಿಜೆಪಿ ತಕ್ಕ ಉತ್ತರ ನೀಡುತ್ತಾರೆ.  ಭ್ರಷ್ಟಾಚಾರ ಸರ್ಕಾರವನ್ನು ಕಿತ್ತು ಹಾಕಿ ಜನಪರ ಸರ್ಕಾರದ ತರುತ್ತೇವೆ ಎಂದು ವಾಗ್ದಾಳಿ ನಡೆಸಿದರು.

 

ವಾಮ ಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ: ಬಿಜೆಪಿ ಸ್ವಂತ ಬಲದಿಂದ ಬೆಳೆದಿಲ್ಲ, ವಾಮ ಮಾರ್ಗದ ಮೂಲಕ 2018ರಲ್ಲಿ ಅಧಿಕಾರ ಹಿಡಿದಿದೆ.  ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಿದಲ್ಲಿದೆ. ಅವರ ಸಾಧನೆ ಏನು.. ಎಂಬುವುದು ಜನರಿಗೆ ಅರಿವಾಗಿದೆ ಎಂದರು.

ದಿನಸಿ ಬೆಲೆ ವಿಪರೀತ ಏರಿಕೆ:  ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ  ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ.  ವಿದೇಶಿಯ ಮಾರುಕಟ್ಟೆ ಪ್ರಕಾರ 1 ಡಾಲರ್ ಗೆ,  ಭಾರತದ  82.77 ರೂ. ಏರಿಕೆಯಾಗಿದೆ.  ಬಿಜೆಪಿ ಸರ್ಕಾರ ಆರ್ಥಿಕ ವಿಫಲದಿಂದ ಬೆಲೆಗಳು ಗಗನಕ್ಕೇ ಕಂಡು,  ಭಾರತ ಸರ್ಕಾರ ವಿಪರೀತ  ಸಾಲ ಮಾಡಿದೆ ಎಂದು ಆರೋಪಿಸಿದ ಅವರು, ಇದೇ ಮಾರ್ಚ , 25-26 ರಲ್ಲಿ ವಿಧಾನ ಸಭಾ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಹೀಗಾಗಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕಾಗಿದೆ. ಜನರ ಧ್ವನಿ,  ಜನರಿಗೆ ಒಳ್ಳೆಯ ಅಧಿಕಾರ ನೀಡುವ ನಿಟ್ಟಿನಲ್ಲಿ ಬೃಹತ್ ಬಸ್ ಯಾತ್ರೆ  ನಡೆಸಲಾಗುತ್ತಿದೆ ಎಂದರು.

ಕಾಟಾಚಾರಕ್ಕೆ ನಡೆದ ಬಿಜೆಪಿ ಅಧಿವೇಶನ: ಉ.ಕ ಆಶೋತ್ತರಿಗಳಿಗೆ ಧ್ವನಿಯಾಗಬೇಕಿರುವ ಅಧಿವೇಶನದಲ್ಲಿ ಎಳ್ಳಷ್ಟುಈ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತಿಲ್ಲ.  ಇದರ ಬಗ್ಗೆ ನಾವೇ ಆತ್ಮಾಲೋಕನ ಮಾಡಿಕೊಳ್ಳಬೇಕಿದೆ.  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೇ  ಕಲ್ಯಾಣ , ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಹೆಚ್ಚು ಮಹತ್ವದ  ನೀಡುತ್ತೆವೆ. ಉ.ಕ ಶಕ್ತಿ ಕೇಂದ್ರವಾಗಿರುವ ಸುವರ್ಣಸೌಧ, ಬೆಳಗಾವಿಯಲ್ಲಿ  ಅತೀ ಹೆಚ್ಚು ಅಧಿವೇಶನ ನಡೆಲಾಗುವುದು ಎಂದು ಹೇಳಿದರು.

ಬಿಜೆಪಿಯಲ್ಲಿದೆ ಕುಟುಂಬ ರಾಜಕಾರಣ:  ಈಗಾಗಲೇ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ  ವೇಳಾಪಟ್ಟಿಯನ್ನು ಹೈಕಮಾಂಡಗೆ ಕಳಿಸಲಾಗಿದೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಾರೆ.  ಕಾಂಗ್ರೆಸ್‌ ನಲ್ಲಿ ಕುಟುಂಬದ ರಾಜಕಾರಣದ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಲ್ಲಿ ಅತಿ ಹೆಚ್ಚು ಕುಟುಂಬದ ರಾಜಕಾರಣ ಇದೆ. ಎಲ್ಲಾ ಪಕ್ಷದಲ್ಲಿ ಆ ರಗಳೆ ಇದದ್ದೆ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಕಾಂಗ್ರೆಸ್ ‌ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಬೆಳಗಾವಿ ನಗರ ಘಟಕದ ಜಿಲ್ಲಾಧ್ಯಕ್ಷ ರಾಜು ಸೇಠ್, ಅನಂತ ಬ್ಯಾಕೂಡ, ಪರಶುರಾಮ ವಗ್ಗನವರ, ಗಜು ಧರನಾಯಕ ಸೇರಿದಂತೆ ಇನ್ನಿತರರು ಇದ್ದರು.


Gadi Kannadiga

Leave a Reply