This is the title of the web page
This is the title of the web page

Please assign a menu to the primary menu location under menu

Local News

 ಜನಪ್ರತಿನಿಧಿಗಳನ್ನು ಖರೀದಿಸಲು ಕಮಿಷನ್ ಮೂಲಕ ಬಿಜೆಪಿಯು ಹಣ ಸಂಗ್ರಹಿಸುತ್ತಿದೆ: ಸತೀಶ್ ಜಾರಕಿಹೊಳಿ


ಬೆಳಗಾವಿ: ಬಿಜೆಪಿ ಆಡಳಿತದಲ್ಲಿ  ಬೆಲೆಗಳು ಗಗನಕ್ಕೆರಿದೆ, ಭ್ರಷ್ಟಾಚಾರ 50% ದಾಟಿದೆ, ಚುನಾವಣೆ ಸಮಯದಲ್ಲಿ 100% ಆದರೂ ಆಶ್ಚರ್ಯ ಇಲ್ಲ, ಯಾಕಂದ್ರೆ ಚುನಾವಣೆಯಲ್ಲಿ ಸೀಟ್ ಕಡಿಮೆ ಆದರೆ 30 ಕೋಟಿ ಕೊಟ್ಟು ಖರೀದಿ ಮಾಡಲಿಕ್ಕೆ ಹಣ ಬೇಕಲ್ಲ ಅದಕ್ಕೆ ಈಗಲೇ ಕಮಿಷನ್ ರೂಪದಲ್ಲಿ ಸಂಗ್ರಹ ಮಾಡ್ತಾರೆ ಎಂದು ಪಕ್ಷದ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರು ಬಿಜೆಪಿ ವಿರುದ್ಧ ವ್ಯಂಗ್ಯವಾಗಿ ಹೇಳಿದರು.

ಬೆಳಗಾವಿ ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಕಾಂಗ್ರೆಸ್ಸಿನ ವಿಧಾನ ಪರಿಷತ್ ಚುನಾವಣಾ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.  ವಾಯುವ್ಯ ಮತಕ್ಷೇತ್ರದ ಪದವಿ ಹಾಗೂ ಶಿಕ್ಷರರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಇಬ್ಬರು ಅಭ್ಯರ್ಥಿಗಳು ಗೆದ್ದೇ ಗೆಲ್ಲುವರು,     ಅವರನ್ನು ಗೆಲ್ಲಿಸುವಂತ ಜವಾಬ್ದಾರಿ ನಮ್ಮ ಎಲ್ಲಾ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಾದ ನಮ್ಮ ಮೇಲೆ ಇದೆ, ಆ ನಿಟ್ಟಿನಲ್ಲಿ ನಾವು ಇವತ್ತೇ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಮಟ್ಟದಲ್ಲಿ, ತಾಲೂಕು, ಹಾಗೂ ಬ್ಲಾಕ್ ಮಟ್ಟದಲ್ಲಿ, ಶಾಸಕರು, ಮಾಜಿಗಳು,  ಎಲ್ಲರೂ ಜವಾಬ್ದಾರಿಯಿಂದ ಸಂಘಟಿತರಾಗಿ ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತಾ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.

ಇನ್ನು ಆಡಳಿತ ಪಕ್ಷದವರು ತಮ್ಮ ಅಭ್ಯರ್ಥಿ ಬಗ್ಗೆ ಮಾಡುವ ಟೀಕೆಗಳಿಗೆ ಉತ್ತರಿಸಿದ ಅವರು, ಜನರೇ ನಮಗೆ ಸರ್ಟಿಫಿಕೇಟ್ ಕೊಟ್ಟಾಗ ಇನ್ನೂ ಆ ಬೋರ್ಡು, ಈ ಬೋರ್ಡು, ಯೂನಿವರ್ಸಿಟಿ ಸರ್ಟಿಫಿಕೇಟ್ ಅವಶ್ಯ ಇಲ್ಲ ಎಂದರು,,  ಸುಮಾರು ಎಂಟು ಸಲ ಎಂಎಲ್ಎ, ಎಂಪಿ, ಎಂಎಲ್ಸಿ, ಆಗಿ ಸಾಕಷ್ಟು ಜನಪರವಾದ ಕೆಲಸ ಮಾಡಿ, ಜನರಿಂದ ಸಾಕಷ್ಟು ಸರ್ಟಿಫಿಕೇಟ್ ಪಡೆದಿದ್ದಾರೆ,,  ಅವರ ಜನಪರವಾದ ಕೆಲಸಗಳೇ ಅವರಿಗೆ ಪದವಿ ಸರ್ಟಿಫಿಕೇಟ್ ಎಂದರು.

ಬಿಜೆಪಿಯವರಿಗೆ ಮಾತನಾಡಲು ವಿಷಯವಿಲ್ಲ, ಅವರದೇ ಸರ್ಕಾರ ಇದೆ ಬೇಕಾದರೆ ಮುಂದಿನ ಸಲ  ಕಾನೂನು ಮಾಡಲಿ, ಎಂ ಎ, ಪಿಎಚ್ಡಿ, ಲಂಡನ್ ನಲ್ಲಿ ಓದಿದವರೆ ಚುನಾವಣೆಗೆ ನಿಲ್ಲಬೇಕು ಅಂತಾ,, ಆದರೆ ಈಗ ಮಾತ್ರ ವೋಟ್ ಹಾಕೋಕೆ ಪದವಿ ಬೇಕೆ ವಿನಃ ನಿಲ್ಲಲು ಅಲ್ಲಾ ಅಂತಾ ಮಾತಿನ ಚಾಟಿ ಬೀಸಿದರು,,

ಬಿಜೆಪಿ ಅವರ ಬೆಲೆಯೇರಿಕೆ ಗಗನಕ್ಕೆರಿದೆ, ಭ್ರಷ್ಟಾಚಾರ 50% ದಾಟಿದೆ, ಚುನಾವಣೆ ಸಮಯದಲ್ಲಿ 100% ಆದರೂ ಆಶ್ಚರ್ಯ ಇಲ್ಲ, ಯಾಕಂದ್ರೆ 6, 7 ಸೀಟ್ ಕಡಿಮೆ ಆದರೆ ಅವರನ್ನ 30 ಕೋಟಿ ಕೊಟ್ಟುಖರೀದಿ ಮಾಡಲಿಕ್ಕೆ ಹಣ ಬೇಕಲ್ಲ ಅದಕ್ಕೆ ಈಗಲೇ ಕಮಿಷನ್ ರೂಪದಲ್ಲಿ ಸಂಗ್ರಹ ಮಾಡ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ಅಂತಹ ಬಿಜೆಪಿಯವರ ಮಾತಿಗೆ ನಾವು ತಲೆಕೆಡಿಸಿಕೊಳ್ಳದೆ, ಎಲ್ಲಾ ಪಾಧಾಡಿಕಾರಿಗಳು, ಕಾರ್ಯಕರ್ತರು, ಎಲ್ಲಾ ವಲಯದ ನಾಯಕರು ಸೇರಿ, ವೈಯಕ್ತಿಕವಾಗಿ ಪ್ರತಿ ಶಿಕ್ಷಕ, ಪದವಿದರರನ್ನು ಬೇಟಿ ಆಗಿ ನಮ್ಮ ಪಕ್ಷಕ್ಕೆ ಮತ ನೀಡುವಂತೆ ಮನವಲಿಸಬೇಕಾಗಿದೆ, ಆ ಕಾರ್ಯದಲ್ಲಿ ನಾವೆಲ್ಲರೂ ಮುನ್ನಡೆಯೋಣ  ಎಂದರು.

ಈ ಕಾರ್ಯಕ್ರಮದಲ್ಲಿ ವಾಯುವ್ಯ  ಶಿಕ್ಷಕ ಕ್ಷೇತ್ರದ ಅಭ್ಯರ್ಥಿಯಾದ ಪ್ರಕಾಶ ಹುಕ್ಕೇರಿ, ಪದವಿದರ ಕ್ಷೇತ್ರದ ಅಭ್ಯರ್ಥಿಯಾದ ಸಂಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಜಿಲ್ಲೆಯ ಹಾಲಿ ಮಾಜಿ ಶಾಸಕರು, ಮಾಜಿ ಎಂಎಲ್ಸಿ, ಎಂಪಿ ಗಳು, ನಗರ ಹಾಗೂ ಗ್ರಾಮೀಣ  ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು, ಇನ್ನುಳಿದ ಪಕ್ಷದ ಪದಾಧಿಕಾರಿಗಳು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply