This is the title of the web page
This is the title of the web page

Please assign a menu to the primary menu location under menu

Local News

ಹಿಂದು ಯುವಕನ ಶಿರಚ್ಚೇದ ಖಂಡಿಸಿ ಬಿಜೆಪಿ ಪ್ರತಿಭಟನೆ


ಹುಬ್ಬಳ್ಳಿ:ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಯುವಕನ ಶಿರಚ್ಛೇದ ಘಟನೆಯನ್ನು ಖಂಡಿಸಿ ಬಿಜೆಪಿ ಹು-ಧಾ ಮಹಾನಗರದ ಜಿಲ್ಲಾ ಯುವ ಮೋರ್ಚಾ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರು ಇಸ್ಲಾಂ ಭಯೋತ್ಪಾದಕರಿಗೆ ದಿಕ್ಕಾರ, ಕೋಲು ಗಲಭೆಗೆ ಪ್ರಚೋದನೆ ನೀಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕಾರ, ಕೋಮುಗಲಭೆಗೆ ಬೆಂಬಲ ನೀಡುತ್ತಿರುವ ರಾಜಸ್ತಾನದ ಮುಖ್ಯಮಂತ್ರಿಗೆ ದಿಕ್ಕಾರ, ಜಿಹಾದಿ ಹೆಡಿಗಳಿಗೆ ದಿಕ್ಕಾರ, ಹಿಂದೂ ಅಮಾಯಕನ ಕೊಲೆಗೈದು ಅಟ್ಟಹಾಸ ಮೆರೆದ ಜಿಹಾದಿ ರಾಕ್ಷಸರಿಗೆ ದಿಕ್ಕಾರ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ‌ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಇಸ್ಲಾಂ ಮೂಲಭೂತವಾದಿಗಳೆಂದು ಟೇಲರ್ ಕನ್ನಯ್ಯ ಲಾಲ್ ಅವರನ್ನು ಹತ್ಯೆ ಮಾಡಿರುವ ರೀತಿ, ಯಾವ ಭಯೋತ್ಪಾದನೆಗಿಂತ ಕಡಿಮೆ ಇಲ್ಲ. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕತ್ತು ಸೀಳುವುದಾಗಿ ಹೇಳಿಕೆ ಕೊಡುತ್ತಾರೆ. ನೀವು ಏನಾದರೂ ಅಂತಹ ಕೆಲಸಕ್ಕೆ ಮುಂದಾದರೇ ಭಾರತದ 125 ಕೋಟಿ ಜನರ ಕತ್ತು ಸಿಳಿ ಮುಂದೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನರೇಂದ್ರ ಮೋದಿ ಅವರ ಸರ್ಕಾರ ಪಾಕಿಸ್ತಾನದ ಭಯೋತ್ಪಾದಕನ್ನು ನಿಯಂತ್ರಣ ಮಾಡಿದೆ. ಆದರೆ ಪಾಕಿಸ್ತಾನದಲ್ಲೊ ತರಭೇತಿ ತೆಗೆದುಕೊಂಡು ಬಂದ ಇಬ್ಬರು ಈ ಕೃತ್ಯ ಎಸಗಿದ್ದಾರೆ. ಇದನ್ನು ನೋಡಿದ ದೇಶದ ಹಿಂದೂಗಳು ಕಣ್ಣುಮುಚ್ಚಿ ಕುಳಿತುಕೊಳ್ಳುವುದಿಲ್ಲ. ನೂಪುರ ಶರ್ಮಾ ಎಂಬ ಹೇಳಿಕೆ ಮೇಲೆ ದೇಶದಾದ್ಯಂತ ಗಲಭೆ ಎಬ್ಬಿಸುವ ಕೆಲಸ ಮಾಡಲಾಗಿದೆ ಇದು ಖಂಡನೀಯ. ಈಗಾಗಲೇ ರಾಜಸ್ಥಾನ ಸರ್ಕಾರ ಆರೋಪಿಗಳ ಬಂಧನ ಮಾಡಿದೆ ಅವರಿಗೆ ಬಂಧನ ಮಾಡದೇ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟ್ಕರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೀತಮ್ ನಾಯಕ, ದತ್ತಮೂರ್ತಿ ಕುಲಕರ್ಣಿ,ಅಶೋಕ ಕಾಟವೆ,ನಾರಾಯಣ ಜರತಾರಘರ, ಪ್ರಭು ನವಲಗುಂದಮಠ, ರಂಗಾ ಬದ್ದಿ, ರವಿ ನಾಯಕ, ವಿನಯ ಸಜ್ಜನರ, ಪ್ರಕಾಶ ಶೃಗೇರಿ,ರೇಣುಕಾ ಇಳಕಲ್ಲ ಸೇರಿದಂತೆ ಮುಂತಾದವರು ಇದ್ದರು.


Gadi Kannadiga

Leave a Reply