ಯಮಕನಮರಡಿ :- ಭಾರತೀಯ ಜನತಾ ಪಕ್ಷವು ಈ ಸಲದ ವಿಧಾಸಭಾ ಚುನಾವಣೆಗೆ ಸ್ಪರ್ದಿಸಲು ಒಂದೆ ಕುಟುಂಬಕ್ಕೆ ಎರಡು ಟೀಕೇಟು £Ãಡಿ ಕತ್ತಿ ಕುಟುಂಬಕ್ಕೆ ಮನ್ನಣೆ £Ãಡಿದೆ ಎಂದು ಮಾಜಿ ಸಚಿವ ಶಶಿಕಾಂತ ಹೇಳಿದರು.
ಅವರು ದಿ. ೧೬ ರಂದು ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೆರ್ಪಡೆಯಾದ ನಂತರ ಪ್ರಪ್ರಥಮ ಬಾರಿಗೆ ಬಡಕುಂದ್ರಿ ಗ್ರಾಮದ ಶ್ರೀ ಹೊಳೆಮ್ಮಾದೇವಿ ದೇವಸ್ಥಾನಕ್ಕೆ ಆಗಮಿಸಿ ದೇವಿನ ದರ್ಶನ ಪಡೆದ ನಂತರ ನಾನು ಬಿಜೆಪಿಯಲ್ಲಿ ೨೫ ವರ್ಷಗಳ ಕಾಲ £ಷ್ಠಾವಂತರಾಗಿ ಕೆಲಸ ಮಾಡಿದ್ದು, ಕೇವಲ ೩೦ ತಿಂಗಳ ಸಚಿವನಾಗಿ ೧೧ ತಿಂಗಳ ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದೇನೆ. ಇತ್ತೀಚೆಗೆ ಬಿಜೆಪಿಯಲ್ಲಿ ವಲಸಿಗರನ್ನು ಹೆಚ್ಚಿನ ಮನ್ನಣೆ £Ãಡುತ್ತಿದ್ದು, ಮೂಲ ಬಿಜೆಪಿ ಕಟ್ಟಿ ಬೆಳಸಿದ £ಷ್ಠಾವಂತರನ್ನು ಕಡಗನನೆ ಮಾಡಲಾಗುತ್ತಿದೆ. ಕತ್ತಿ ಕುಟುಂಬದವರು ನನಗಷ್ಟೇ ಕಿರುಕುಳ ಕೊಟ್ಟಿದ್ದಲ್ಲದೇ ನನ್ನ ಬೆಂಬಲಿಗರಿಗೂ ಕೂಡಾ ತೊಂದರೆಯನ್ನು £Ãಡಿದ್ದಾರೆ. ಕತ್ತಿ ಕುಟುಂಬದವರಂತೆ ನಾನೇನು ಪಕ್ಷದಲ್ಲಿದ್ದುಕೊಂಡು ಬೇರೆ ಪಕ್ಷಕ್ಕೆ ಸಹಾಯ ಮಾಡುವನಲ್ಲ. ಬಿಜೆಪಿಯನ್ನು ತೊರೆದು ಕಾಂಗ್ರೇಸ ಪಕ್ಷಕ್ಕೆ ಸೇರ್ಪಡೆಯಾಗಿ ಕತ್ತಿ ಕುಟುಂಬದವರನ್ನು ವಿರೋದ ಮಾಡುತ್ತೇನೆಂದು ಮಾಜಿ ಸಚಿವ ಶಶಿಕಾಂತ ನಾಯಿಕ ಹೇಳಿದರು.
ಮಾಜಿ ಸಚಿವ, ಹುಕ್ಕೇರಿ ಮತಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಎ.ಬಿ.ಪಾಟೀಲ ಮಾತನಾಡಿ ಶಶಿಕಾಂತ ನಾಯಿಕರು ಒಬ್ಬ ಹುಟ್ಟು ಹೋರಾಟಗಾರರು £ಷ್ಠಾವಂತ ರಾಜಕಾರಣಿಗಳು ಅವರು ಎಂದೂ ಪಕ್ಷದಲ್ಲಿದ್ದುಕೊಂಡು ವಿರೋಧ ಮಾಡಿದ ವ್ಯಕ್ತಿಯಲ್ಲ ಬಾಗೇವಾಡಿ ಸಾಹುಕಾರರಿಂದ ತೊಂದರೆಯಾಗಿದ್ದರಿಂದ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೆರ್ಪಡೆಯಾಗಿದ್ದರಿಂದ ಕಾಂಗ್ರೇಸ್ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ. ಈ ಚುನಾವಣೆಯು ನನ್ನ ಕೊನೆಯ ಚುನಾವಣೆಯಾಗಿದ್ದು, ಎಲ್ಲ ಕಾರ್ಯಕರ್ತರ ಪಡೆಯೊಂದಿಗೆ ಹುಕ್ಕೇರಿ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ದ್ವಜವನ್ನು ಹಾರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಎಚ್. ಕರುಣಾಕರಶೆಟ್ಟಿ, ಗುರು ಪಾಟೀಲ, ಹುಕ್ಕೇರಿ ಕಾಂಗ್ರೇಸ ಘಟಕದ ಅಧ್ಯಕ್ಷ ವಿಜಯ ರವದಿ, ನ್ಯಾಯವಾದಿ ಗಂಗಾಧರ ಗೋಪಿ, ಜೆ.ಎಚ್. ಪೀರಜಾದೆ. ಚಂದ್ರಶೇಖರ ಗಂಗನ್ನವರ, ರೇಖಾ ಚಿಕ್ಕೋಡಿ, ಕಸ್ತೂರಿ ಮುದಗನ್ನವರ, £ಂಗಪ್ಪ ಗೌಡನವರ, ಶಿವಕುಮಾರ ನಾಯಿಕ, ಬಾಳಗೌಡ ನಾಯಿಕ, ಬಾಳಪ್ಪ ಅಕ್ಕತೆಂಗೇರಹಾಳ, ಭೀಮಣ್ಣಾ ರಾಮಗೋನಟ್ಟಿ, ಇದ್ದರು. ಹಿಡಕಲ್ ಡ್ಯಾಮ್ ಮತ್ತು ವಿವಿಧ ಹಳ್ಳಿಗಳಿಂದ ಯುವಕರಿಂದ ಬೈಕ ರ‍್ಯಾಲಿ ನಡೆಯಿತು. ಮಾಜಿ ಸಚಿವ ಶಶಿಕಾಂತ ನಾಯಿಕ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಹಿಡಕಲ್ ಡ್ಯಾಮದಿಂದ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಹಿರಿಯ ಕಾಂಗ್ರೇಸ್ ದುರೀಣ ಎಚ್. ಕರುಣಾಕರಶೆಟ್ಟಿ ನೇತ್ರತ್ವದಲ್ಲಿ ಬೈಕ ರ‍್ಯಾಲಿ ಮೂಲಕ ಬಡಕುಂದ್ರಿಯ ಶ್ರೀ ಹೊಳೆಮ್ಮಾದೇವಿ ದೇವಸ್ಥಾನಕ್ಕೆ ಆಗಮಿಸಿ ಕಾಂಗ್ರೇಸ್ ಮುಖಂಡ ಮಾಜಿ ಸಚಿವ ಶಶಿಕಾಂತ ನಾಯಿಕ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
Gadi Kannadiga > Local News > ಒಂದೇ ಕುಟುಂಬಕ್ಕೆ ೨ ಟಿಕೇಟು ಕತ್ತಿ ಕುಟುಂಬಕ್ಕೆ ಮನ್ನಣೆ £Ãಡಿದ ಬಿಜೆಪಿ : ಶಶಿಕಾಂತ ನಾಯಿಕ
ಒಂದೇ ಕುಟುಂಬಕ್ಕೆ ೨ ಟಿಕೇಟು ಕತ್ತಿ ಕುಟುಂಬಕ್ಕೆ ಮನ್ನಣೆ £Ãಡಿದ ಬಿಜೆಪಿ : ಶಶಿಕಾಂತ ನಾಯಿಕ
Suresh17/04/2023
posted on
