ಬೆಳಗಾವಿ: ಬಿಜೆಪಿ ನಾಯಕರು ರಾಜ್ಯಾದ್ಯಂತ ಮೂರು ತಂಡಗಳಾಗಿ ಪ್ರವಾಸ ಕೈಗೊಂಡಿದ್ದು ರಾಜ್ಯಾದ್ಯಂತ ಸಂಘಟನೆಯ ದೃಷ್ಟಿಕೋಣದಿಂದ ಹತ್ತು ವಿಭಾಗಗಳನ್ನಾಗಿ ಮಾಡಲಾಗಿದೆ. ಅದರಲ್ಲಿ ಬೆಳಗಾವಿ ವಿಭಾಗದ ತಂಡವು ಏಪ್ರಿಲ್ 12 ಮತ್ತು 13ಕ್ಕೆ ಬೆಳಗಾವಿಗೆ ಆಗಮಿಸಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಬಿ ಜಿರ್ಲಿ ಅವರು ಹೇಳಿದರು.
ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿದ್ದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿ ಬಿಜೆಪಿ ನಾಯಕರ ತಂಡವು ಏ.12 ಮತ್ತು 13ಕ್ಕೆ ಬೇಟಿ ನೀಡಲಿದ್ದು ಮಾಜಿ ಸಿಎಂ ಬಿಎಸ್ವೈ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ಸಿಂಗ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ, ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವಾರು ನಾಯಕರು ಆಗಮಿಸಲಿದ್ದಾರೆ ರಾಜ್ಯನಾಯಕ ನೇತೃತ್ವದಲ್ಲಿ ಸಂಘಟನಾತ್ಮಕ ಚಿಂತನೆ ಮತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಎರಡು ದಿನಗಳ ಕಾಲ ಕೋರ್ ಕಮೀಟಿ ಸದಸ್ಯರು, ಹಾಲಿ ಮತ್ತು ಮಾಜಿ ಶಾಸಕರು ನಾಯಕರುಗಳು ಸೇರಿ ಎರಡು ದಿನ ಖಾಸಗಿ ಹೊಟೇಲನಲ್ಲಿ ಚರ್ಚೆ ಮಾಡಲಿದ್ಧಾರೆ. ಏ.13 ರಂದು ಸಾಯಂಕಾಲ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಭೂತ ಮಟ್ಟದ ಸಭೆಯನ್ನು ನಡೆಸಲಾಗುತ್ತದೆ ಎಂದರು.
ಈ ವೇಳೆ ಸಂಸದೆ ಮಂಗಳಾ ಅಂಗಡಿ, ಶಾಸಕ ಅನೀಲ್ ಬೆನಕೆ, ಮಾಜಿ ಮಂತ್ರಿ ಶಶಿಕಾಂತ ನಾಯಕ ಬೆಳಗಾವಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ, ಬೆಳಗಾವಿ ಮಹಾನಗರ ವಕ್ತಾರ ಪ್ರಭು ಹೂಗಾರ ಸೇರಿದಂತೆ ಇನ್ನಿತರರು ಸುದ್ದೀಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು