This is the title of the web page
This is the title of the web page

Please assign a menu to the primary menu location under menu

Local News

ಬಿಜೆಪಿ ಕಾರ್ಯಕರ್ತರಿಂದ ಆನಂದ ಮಾಮನಿ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿ ವಿಶೇಷ ಪೂಜೆ


ಯರಗಟ್ಟಿ : ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿ ಬೆನಕಟ್ಟಿ, ಮುಗಳಿಹಾಳ ಗ್ರಾಮದ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.
ಪಾದಯಾತ್ರೆ ಮೂಲಕ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದೀರ್ಘದಂಡ ನಮಸ್ಕಾರದೊಂದಿಗೆ ಉರುಳು ಸೇವೆ ಮಾಡಿದ ಅಭಿಮಾನಿಗಳು ಮಾಮನಿ ಅವರ ಹೆಸರಿನಲ್ಲಿ ದೇವಿಗೆ ವಿಶೇಷ ಕುಂಕುಮಾರ್ಚನೆ ಪೂಜೆ ಸಲ್ಲಿಸಿದರು.
ಸವದತ್ತಿ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಪುಂಡಲೀಕ ಮೇಟಿ, ಬೀರಪ್ಪ ಕುರಿ, ಅಡಿವೆಪ್ಪ ಶಿರಸಂಗಿ, ಕರೆಪ್ಪ ಪೂಜೇರ, ಅಶೋಕ ಯರಝರ್ವಿ, ಪಂಚಪ್ಪ ಮಾತಾರಿ, ಅಶೋಕ ಪಟ್ಟಣಶೆಟ್ಟಿ, ನಾಗಪ್ಪ ಮುಂಜಿ, ಫಕೀರಪ್ಪ ಟಪಾಲ, ಕಾಡಪ್ಪ ವೀರಶೆಟ್ಟಿ, ರಾಜು ಗಯ್ಯಾಳಿ ಸೇರಿದಂತೆ ಅನೇಕರು ಇದ್ದರು.ಅಲ್ಲದೆ ಸವದತ್ತಿ ತಾಲೂಕಿನ ಇನಾಂದೊಂಗಲ ಗ್ರಾಮದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಅವರು ಶೀಘ್ರ ಆನಂದ ಮಾಮನಿ ಗುಣಮುಖರಾಗಲೆಂದು ಅಭಿಮಾನಿಗಳು ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗ ನಡೆಸಿದರು.
ಆನಂದ ಮಾಮನಿಯವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಹಿನ್ನೆಲೆಯಲ್ಲಿ ಅವರ ಚೇತರಿಕೆಗೆ ಪ್ರಾರ್ಥಿಸಿ ಇನಾಂದೊಂಗಲ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಕಮಿಟಿಯ ಸದಸ್ಯರು, ಗ್ರಾಮದ ಹಿರಿಯರು, ಬಿಜೆಪಿ ಕಾರ್ಯಕರ್ತರು ಅವರ ದೇವಸ್ಥಾನದಲ್ಲಿ
ಮಹಾರುದ್ರಯಾಗ ಕೈಗೊಂಡರು.


Gadi Kannadiga

Leave a Reply