This is the title of the web page
This is the title of the web page

Please assign a menu to the primary menu location under menu

Local News

ಸ್ವಾತಂತ್ರö್ಯದ ಅಮೃತ ಮಹೋತ್ಸವ : ಕುಂದಾನಗರಿಯಲ್ಲಿ ಬಿಜೆಪಿ ಯುವಾ ಮೋರ್ಚಾ ತಿರಂಗಾ ರ‍್ಯಾಲಿಗೆ ಚಾಲನೆ


ಬೆಳಗಾವಿ ೧೦ :ಭಾರತವು ಸ್ವಾಂತಂತ್ರö್ಯ ಹೊಂದಿ ಆಗಸ್ಟ ೧೫ ಕ್ಕೆ ೭೫ ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇನ್ನು ಬೆಳಗಾವಿಯಲ್ಲಿ ಇಂದು ಬಿಜೆಪಿ ಯುವಾ ಮೋರ್ಚಾ ವತಿಯಿಂದ ತಿರಂಗಾ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು.
ಬೆಳಗಾವಿಯ ಅಶೋಕ ಸರ್ಕಲ್‌ನಲ್ಲಿ ತಿರಂಗಾ ರ‍್ಯಾಲಿಗೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹಾಗೂ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ ಜಿ ಅವರು ರಾಷ್ಟ್ರದ್ವಜವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಗಳಾದ ರಾಜೇಶ ಜಿ ಅವರು ೭೫ನೇ ವರ್ಷದ ಅಮೃತ ಘಳಿಗೆಯಲ್ಲಿ ನಾವೆಲ್ಲ ಇದ್ದು, ಇದನ್ನು ನೋಡುವ ಸೌಭಾಗ್ಯ ನಮ್ಮದಾಗಿದೆ. ಭಾರತಕ್ಕೆ ಸ್ವಾತಂತ್ರö್ಯ ತಂದು ಕೊಟ್ಟ ಲಕ್ಷಾಂತರ ಹುತಾತ್ಮರನ್ನು ಸ್ಮರಣೆ ಮಾಡಿಕೊಳ್ಳುವ ಮೂಲಕ ಸ್ವಾತಂತ್ರö್ಯದ ಅಮೃತ ಮಹೋತ್ಸವವನ್ನು ಮಾಡುವ ಉದ್ದೇಶ ನಮ್ಮೆಲ್ಲರದ್ದಾಗಿದೆ ಎಂದರು. ತಮ್ಮ ಜೀವನ, ಯೌವನ ಮತ್ತು ಬದುಕನ್ನು ನಮ್ಮ ಇಂದಿನ ಸುಂದರ ದಿನಗಳಿಗೆ ಸಮರ್ಪಣೆ ಮಾಡಿದ ಎಲ್ಲ ಸ್ವಾತಂತ್ರö್ಯಸೇನಾನಿಗಳಿಗೆ ನವiನ ಸಲ್ಲಿಸುತ್ತೇವೆ ಎಂದರು.
ನಂತರದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆರವರು ಕರ್ನಾಟಕ ರಾಜ್ಯದಲ್ಲಿಯೇ ಬೆಳಗಾವಿಯಲ್ಲಿ ಮೊದಲ ತಿರಂಗಾ ಬೈಕ್ ರ‍್ಯಾಲಿಯನ್ನು ಇಂದಿನಿಂದ ಆರಂಭಿಸಲಾಗಿದೆ. ಬೈಕ್ ರ‍್ಯಾಲಿಯು ಅಶೋಕ ಸರ್ಕಲ್, ಚೆನ್ನಮ್ಮಾ ವೃತ್ತ, ಧರ್ಮವೀರ ವೃತ್ತ ಸೇರಿ ನಗರದ ಎಲ್ಲ ಕಡೆ ಬೈಕಗಳಲ್ಲಿ ಸಂಚರಿಸಿ ಸ್ವಾತಂತ್ರö್ಯದ ಅಮೃತ ಮಹೋತ್ಸವ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುವಂತೆ ಕರೆ ನೀಡಿದರು.
ಅಶೋಕ ಸರ್ಕಲ್‌ನಿಂದ ಆರಂಭವಾದ ಈ ಬೈಕ್ ರ‍್ಯಾಲಿಯು ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚೆನ್ನಮ್ಮ ವೃತ್ತ, ಶ್ರೀ. ಕೃಷ್ಣ ದೇವರಾಯ ವೃತ್ತ ಮಾರ್ಗವಾಗಿ ಸಂಚರಿಸಿ ಅಶೋಕ ನಗರದ ಕಿಲ್ಲಾ ಧ್ವಜ ಸ್ತಂಭದ ಹತ್ತಿರದಲ್ಲಿ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹಾಗೂ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ ಜಿ, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಈರಣ್ಣ ಅಂಗಡಿ, ಬೆಳಗಾವಿ ಜಿಲ್ಲಾ ಯುವಾ ಮೋರ್ಚಾ ಮಹಾನಗರ ಪ್ರಭಾರಿ ರಾಜಣ್ಣ ಮಠಪತಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೇಯಸ ನಾಕಾಡಿ, ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲಾ ಅಧ್ಯಕ್ಷ ಪ್ರಸಾದ ದೇವರಮನಿ, ಬೆಳಗಾವಿ ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ಸದಾನಂದ ಗುಂಟೆಪ್ಪನ್ನವರ ಹಾಗೂ ಬಿಜೆಪಿ ಕಾರ್ಯಕರ್ತರು ಬೈಕ ರ‍್ಯಾಲಿಯಲ್ಲಿ ಉಪಸ್ಥಿತರಿದ್ದರು.


Gadi Kannadiga

Leave a Reply