This is the title of the web page
This is the title of the web page

Please assign a menu to the primary menu location under menu

Local News

ಹಿಂದೂ ದೇವಾಲಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸದೆ ಇರುವುದು ಬಿಜೆಪಿ ಪಕ್ಷದ ಅಜೆಂಡಾ: ಸತೀಶ್ ಜಾರಕಿಹೊಳಿ


ಹಿಂದೂ ದೇವಾಲಯದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸದೆ ಇರುವುದು ಬಿಜೆಪಿ ಪಕ್ಷದ ಅಜೆಂಡಾದಲ್ಲಿ ಒಂದಾಗಿದೆ ಅವರು  ಒಂದೊಂದಾಗಿ ಜಾರಿ ಮಾಡಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕಳೆದ ಎರಡೂ ತಿಂಗಳಲ್ಲಿ ಶಿವಮೊಗ್ಗ ಘಟನೆ, ಹಿಜಾಬ್ ಘಟನೆ ಮಾಡಿದರು. ಈಗ ಹೊಸ ಅಜೆಂಡಾ ತೆಗೆದಿದ್ದಾರೆ. ಹಿಂದು ಮುಸ್ಲಿಂ ಅನ್ನೋನ್ಯವಾಗಿ ಬದುಕುತ್ತಿರುವಾಗ ಇಂಥ ಘಟನೆ ನಡೆಯುವುದು ದುರ್ದೈವದ ಸಂಗತಿ ಎಂದರು.

ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಾಗೂ ಪದವಿದರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ತಲಾ ಮೂವರು ಆಕಾಂಕ್ಷೆಗಳು ಇದ್ದಾರೆ. ಹೈಕಮಾಂಡ್ ತೀರ್ಮಾನವೆ ಅಂತಿಮ ಎಂದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಮುಖಂಡ ಸುನೀಲ್ ಹನುಮಣ್ಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 


Leave a Reply