ಬೆಳಗಾವಿ: 42 ನೇ ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನವನ್ನು ಬೆಳಗಾವಿಯಲ್ಲಿ ರ್ಯಾಲಿ ಮಾಡುವುದರ ಮೂಲಕ ಡಾ || ಬಿ.ಆರ್ . ಅಂಬೇಡ್ಕರ ಉದ್ಯಾನವನದಲ್ಲಿ ಬಿಜೆಪಿ ಕಾರ್ಯಕರ್ತರು ಆಚರಣೆ ಮಾಡಿದರು.
ತೆಲೆಗೆ ಪೇಟ್ವನ್ನು ಸುತ್ತಿಕೊಂಡು ಸಂಭ್ರಮಿಸಿದ ಕಾರ್ಯಕರ್ತರು ನಂತರ ಡಾ || ಬಿ.ಆರ್ . ಅಂಬೇಡ್ಕರ ಗಾರ್ಡನಿಂದ ರ್ಯಾಲಿಯನ್ನು ಪ್ರಾರಂಭಿಸಿ ಸಿಎಲ್ ರೋಡ ಮಾರ್ಗದಿಂದ ಬೆಳಗಾವಿ ಮಹಾನಗರ ಕಾರ್ಯಾಲಯಕ್ಕೆ ತಲುಪಿತು . ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಸ್ಥಾಪನಾ ದಿನದ ಬಗ್ಗೆ ಹಾಗೂ ಪಕ್ಷ ಬೆಳೆದು ಬಂದ ಹಾದಿ ಮತ್ತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಬೆಳಗಾವಿ ಮಹಾನಗರ ಕಾರ್ಯಾಲಯ ಮುಂದಿರುವ ಮೈದಾನದಲ್ಲಿ ದೊಡ್ಡ ಪರದೆಯಲ್ಲಿ ನೇರ ಪ್ರಸಾರ ಮಾಡುವುದರ ಮೂಲಕ ವೀಕ್ಷಿಸಲಾಯಿತು .
ಈ ಸಂದರ್ಭದಲ್ಲಿ ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ , ಬೆಳಗಾವಿ ಸಹ ಸಂಘಟನಾ ಕಾರ್ಯದರ್ಶಿ ಜಯ್ ಪ್ರಕಾಶ ಎಮ್.ಸಿ. , ರಾಜ್ಯ ಕಾರ್ಯದರ್ಶಿಕುಮಾರಿ , ಉಜ್ವಲಾ ಬಡವನಾಚ , ಬೆಳಗಾವಿ ನಗರ ಪ್ರಭಾರಿ ರಮೇಶ ದೇಶಪಾಂಡೆ , ರಾಜ್ಯ ವಕ್ತಾರರಾದ ಎಂ.ಬಿ. ಝರಲಿ , ಬೆಳಗಾವಿ ಬೂಡಾ ಅಧ್ಯಕ್ಷ ಸಂಜಯ್ ಬೆಳಗಾಂವಕರ , ನಿರ್ದೇಶಕರು , ಕರ್ನಾಟಕ ಒಳಚರಂಡಿ ನೀರು ಸರಬರಾಜು ನಿಗಮ, ದೀಪಾ ಕುಡಚಿ , ಮಹಾನಗರ ಪ್ರಧಾನ ಕಾರ್ಯದರ್ಶಿಗ ಮುರಗೇಂದ್ರಗೌಡ ಪಾಟೀಲ ಮತ್ತು ದಾದಾಗೌಡ ಬಿರಾದಾರ , ಮಹಾನಗರ ಮಾಧ್ಯಮ ಪ್ರಮುಖಶರದ ಪಾಟೀಲ , ಸಹ ಪ್ರಮುಖರಾದ. ಪ್ರಜ್ವಲ ಅಥಣಿಮಠ ಬೆಳಗಾವಿ ಮಹಾನಗರ ವಕ್ತಾರಾದ ಪ್ರಭು ಹೂಗಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.