ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಅತ್ಯಂತ ಪ್ರಬಲ ಮತ್ತು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಅವರು ತಿಳಿಸಿದರು.
ಕಾರವಾರದಲ್ಲಿ ಇಂದು ನಡೆದ ಒಬಿಸಿ ಮೋರ್ಚಾ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂತ್ರಾಲಯದಲ್ಲಿ ಈ ಹಿಂದೆ ಪದಾಧಿಕಾರಿಗಳÀ ಸಭೆ ನಡೆದಿತ್ತು. ಪಕ್ಷವು ನೀಡಿದ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಶೇ 65ಕ್ಕೂ ಹೆಚ್ಚು ಮತದಾರರು ಒಬಿಸಿ ವರ್ಗದಡಿ ಬರುತ್ತದೆ. ಮೋರ್ಚಾವು ಒಬಿಸಿಯ ಎಲ್ಲ ಜನಾಂಗವನ್ನು ತಲುಪಬೇಕೆಂಬ ಸಂಕಲ್ಪ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರದು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಗುರಿಯನ್ನು ತಲುಪಲು ಮೋರ್ಚಾ ಮುಂದಾಗಿದೆ ಎಂದರು.
70 ವರ್ಷ ದೇಶದ ಆಡಳಿತ ನಡೆಸಿದ ಪಕ್ಷವು ಒಬಿಸಿ ಸಮುದಾಯದ ಎಲ್ಲರ ಅಭ್ಯುದಯಕ್ಕೆ ಪ್ರಯತ್ನಿಸಲಿಲ್ಲ. ಆದರೆ, ಪ್ರಧಾನಿ ಮೋದಿಯವರು ಈ ವರ್ಗಕ್ಕೆ ಮೀಸಲಾತಿ ನೀಡಿದರು. ತಮ್ಮ ಸಚಿವಸಂಪುಟದಲ್ಲಿ ಸುಮಾರು 27 ಜನರಿಗೆ ಅವಕಾಶ ಮಾಡಿಕೊಟ್ಟರು ಎಂದು ಮೆಚ್ಚುಗೆ ಸೂಚಿಸಿದರು. ಒಬಿಸಿಗೆ ಸಂಬಂಧಿಸಿದ ನಿರ್ಧಾರವನ್ನು ರಾಜ್ಯ ಸರಕಾರವೇ ತೆಗೆದುಕೊಳ್ಳಲು ಅಧಿಕಾರ ಮತ್ತು ಅವಕಾಶ ಮಾಡಿಕೊಟ್ಟರು ಎಂದರು.
ಒಬಿಸಿ ವಿಭಾಗದ ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾಗಿ ಹೆಚ್ಚಿನ ಅನುದಾನವನ್ನು ಪ್ರಧಾನಿಯವರು ನೀಡಿದ್ದು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಉನ್ನತಿಗೆ ಇದು ಪೂರಕ ಎಂದು ನುಡಿದರು. ರಾಜ್ಯ ಸರಕಾರದಲ್ಲೂ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ ಈ ವರ್ಗಕ್ಕಾಗಿ ಹತ್ತು ಹಲವು ಯೋಜನೆಗಳು ಹರಿದುಬರುತ್ತಿವೆ ಎಂದು ತಿಳಿಸಿದರು.
ಮೋರ್ಚಾಕ್ಕಾಗಿ ಪ್ರವಾಸ, ಜನರನ್ನು ತಲುಪಿದ ಕುರಿತು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು. ಸಮುದಾಯದ ಸಮಸ್ಯೆಗಳ ಪಟ್ಟಿ ಮಾಡಬೇಕು. ಸಮಸ್ಯೆಗಳಿದ್ದರೆ ಅವುಗಳ ಪರಿಹಾರದತ್ತ ಗಮನ ಕೊಡಬೇಕು ಎಂದು ಸೂಚಿಸಿದರು.
ಹೇಗೆ ಸಾವಿಲ್ಲದ ಮನೆ ಇಲ್ಲವೋ ಹಾಗೇ ನರೇಂದ್ರ ಮೋದಿಯವರ ಯೋಜನೆಗಳು ತಲುಪದ ಮನೆಗಳಿಲ್ಲ ಎಂದು ತಿಳಿಸಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಗರೀಬ್ ಅನ್ನ ಕಲ್ಯಾಣ ಯೋಜನೆಯಡಿ 2 ವರ್ಷಗಳಿಂದ 80 ಕೋಟಿ ಜನರಿಗೆ ಪಡಿತರ ನೀಡುತ್ತಿರುವ ಕುರಿತು ಗಮನ ಸೆಳೆದರು. ನಮ್ಮ ದೇಶದ ನೇತೃತ್ವ ಗಟ್ಟಿ ಇದೆ. ವಿಶ್ವದ ಎಲ್ಲರ ನಾಯಕರಾಗಿ ಮೋದಿಯವರು ಹೊರಹೊಮ್ಮುತ್ತಿದ್ದಾರೆ ಎಂದು ತಿಳಿಸಿದರು.
ನಾವು ಚುನಾವಣೆಯ ಹೊಸ್ತಿಲಲ್ಲಿದ್ದೇವೆ. ಮುಂದಿನ ವರ್ಷ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಶಾಸಕರೊಂದಿಗೆ ಬಿಜೆಪಿ ಅಧಿಕಾರ ಪಡೆಯಲು ಸಂಕಲ್ಪ ಮಾಡಿದೆ. ಅದು ಸಾಕಾರಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅದಕ್ಕಾಗಿ ನಮ್ಮೆಲ್ಲ ಪದಾಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು. ಮೋರ್ಚಾ ಸೇರಿ ಕೆಲಸ ಮಾಡಲು ಜನ ಕ್ಯೂನಲ್ಲಿದ್ದಾರೆ. ಪಕ್ಷ ಮತ್ತು ಮೋರ್ಚಾಕ್ಕಾಗಿ ಕೆಲಸ ಮಾಡಲು ಆಗದವರು ಆ ಬಗ್ಗೆ ತಿಳಿಸಿ ಪದಾಧಿಕಾರಿ ಸ್ಥಾನವನ್ನು ಬಿಟ್ಟುಕೊಡಬಹುದು ಎಂದು ಸೂಚಿಸಿದರು. ಆತ್ಮವಂಚನೆ ಇಲ್ಲದೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ನೆ.ಲ.ನರೇಂದ್ರಬಾಬು, ಶಾಸಕರಾದ ಶ್ರೀಮತಿ ರೂಪಾಲಿ ನಾಯ್ಕ್ ಮತ್ತು ಪಕ್ಷದ ಮುಖಂಡರು, ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
Gadi Kannadiga > State > ಬಿಜೆಪಿ ಒಬಿಸಿ ಮೋರ್ಚಾ ಅತ್ಯಂತ ಪ್ರಬಲ, ಸಕ್ರಿಯ- ಸಿದ್ದರಾಜು
More important news
ರೈತ ಬಾಂಧವರ ಗಮನಕ್ಕೆ
07/02/2023
ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನ
07/02/2023
ಐತಿಹಾಸಿಕ ಲಕ್ಕುಂಡಿ ಉತ್ಸವ : ಮಹಿಳಾ ಗೋಷ್ಟಿ
07/02/2023