This is the title of the web page
This is the title of the web page

Please assign a menu to the primary menu location under menu

State

ಸಡಗರ ಸಂಭ್ರಮದಿ0ದ ಜರುಗಿದ ಹಣಮಂತ ದೇವರ ಓಕುಳಿ


ಮೂಡಲಗಿ: ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ಸ್ಥಗಿತಗೊಂಡಿದ ಪಟ್ಟಣದ ಗಾಂಧೀ ಚೌಕದಲ್ಲಿನ À ಶ್ರೀ ಹನಮಂತ ದೇವರ ಓಕಳಿಯು ಈ ವರ್ಷದ ಪ್ರಥಮ ದಿನದ ಓಕಳಿಯು ಶುಕ್ರವಾರದಂದು ಸಡಗರ ಸಂಭ್ರಮದಿAದ ಮೂಡಲಗಿಯ ಶ್ರೀ ಶಿವಬೋಧರಂಗ ಸಿದ್ಧ ಸಂಸ್ಥಾನಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿ ಮತ್ತು ಶ್ರಿ ಶ್ರೀಧರಬೋಧ ಸ್ವಾಮೀಜಿಗಳ ಸಾನಿಧ್ಯದಲ್ಲಿ ಜರುಗಿತು.
ಓಕುಳಿ ನಿಮಿತ್ಯಯ ಶ್ರೀ ಹನಮಂತ ದೇವರ ದೇವಸ್ಥಾನದಲ್ಲಿ ಶ್ರೀ ಹನಮಂತ ದೇವರ ಮೂರ್ತಿಗೆ ವಿಷೇಶ ಪೂಜೆ ಮತ್ತು ಅಲಂಕಾರವನ್ನು ದೇವಸ್ಥಾನದ ಅರ್ಚಕ ಮಾರುತಿ ಪೂಜೇರಿ ನೆರವೇರಿಸಿದರು.
ಸಾಯಂಕಾಲ ಶ್ರೀ ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದಿಂದ ಶ್ರೀ ದತ್ತಾತ್ರೇಯಬೋಧ ಸ್ವಾಮಿ ಮತ್ತು ಶ್ರಿ ಶ್ರೀಧರಬೋಧ ಸ್ವಾಮೀಜಿಗಳನ್ನು ವಾದ್ಯಮೇಳದೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಂಡ ನಂತರ ಯುವಕರು ಪ್ರಥಮ ದಿನದ ನೀರೋಕುಳಿಯನ್ನು ಉತ್ಸಾಹದಿಂದ ಆಚರಿಸಿದರು. ನೀರೋಕಳಿ ಆಟವಾಡಿದ ಯುವಕರು ಹನಮಂತ ದೇವರ ದ್ವಾರ ಬಾಗಿಲಕ್ಕೆ ನೀರು ಹಾಕಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಈ ಸಂಧರ್ಭದಲ್ಲಿ ಎಮ್.ಎಸ್.ಹಿರೇಮಠ, ಆದಮ್ ತಾಂಬೋಳಿ, ಬಿ.ಬಿ.ಹೊಸಕೋಟಿ, ಬಸವರಾಜ ಬಡಗನ್ನವರ, ಸುಧಾಕರ ಪತ್ತಾರ, ಸತೀಶ ವಾಲಿ, ಬಸು ರಂಗಾಪೂರ, ಬಸವರಾಜ ತಳವಾರ, ಬಸಪ್ಪ ಹಾಲೋಳ್ಳಿ, ಈರಪ್ಪ ಬಡಿಗೇರ, ಮಹಾಲಿಂಗಯ್ಯಾ ಹಿರೇಮಠ, ಹೋಳೆಪ್ಪ ಶಿವಾಪೂರ, ಚನ್ನಬಸು ನೀಡಗುಂದಿ, ವಿಜಯ ಜರಾಳೆ, ನಿಂಗಪ್ಪ ಗಸ್ತಿ, ಹನಮಂತ ಪುಜೇರಿ ಮತ್ತಿತರು ಇದ್ದರು.


Gadi Kannadiga

Leave a Reply