This is the title of the web page
This is the title of the web page

Please assign a menu to the primary menu location under menu

State

ಸೆ. ೨೯ ರಂದು ರಕ್ತದಾನ ಜಾಗೃತಿ ನಡಿಗೆ


ಕೊಪ್ಪಳ : ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ನಿಮಿತ್ಯ ಕೊಪ್ಪಳ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜಂಟಿಯಾಗಿ ನಮ್ಮ ನಡಿಗೆ ರಕ್ತದಾನದ ಕಡೆಗೆ ಎನ್ನುವ ಸ್ಲೋಗನ್‌ನೊಂದಿಗೆ ಸೆ. ೨೯ ರಂದು ರಕ್ತದಾನ ಜಾಗೃತಿ ನಡಿಗೆಯನ್ನು ಹಮ್ಮಿಕೊಂಡಿದೆ.
ಬೆಳಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿರುವ ರಕ್ತದಾನ ಜಾಗೃತಿ ನಡಿಗೆಗೆ ಗವಿಮಠ ಆವರಣದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ.
ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ನಿಮಿತ್ಯ ಸೆ. ೧ ರಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬೆಳಗ್ಗೆ ೧೦ ಗಂಟೆಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಕಿಮ್ಸ್ ನಿರ್ದೇಶದ ಡಾ. ವಿಜಯನಾಥ ಇಟಗಿ ಅವರು ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವೇಣಗೋಪಾಲ ಅವರು ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಈಶ್ವರ ಸವಡಿ, ಕೀಮ್ಸ್ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಬಾಬು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರಮನ್ ಸೋಮರಡ್ಡಿ ಅಳವಂಡಿ, ಉಪ ಚೇರಮನ್ ಡಾ. ಗವಿಸಿದ್ದನಗೌಡ ಪಾಟೀಲ್, ಡಾ. ಅನಿವೃದ್ದ ವಸಂತ, ಶ್ರೀ ರಾಮುಲು, ಡಾ. ವಿನಯಕುಮಾರ, ಡಾ. ಶ್ರೀನಿವಾಸ ಹ್ಯಾಟಿ ಅವರು ಭಾಗವಹಿಸುವರು.


Gadi Kannadiga

Leave a Reply