ಬೆಳಗಾವಿ: ಇಂದಿನ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮವೂ ಸಮಾಜಕ್ಕೆ ಓರಿಯಾನ್ ಹೈಡ್ರಾಲಿಕ್ಸನ ಒಂದು ಕೊಡುಗೆೆ ಎಂದು ಓರಿಯಾನ್ ಹೈಡ್ರಾಲಿಕ್ಸ ನ ಮಾಲೀಕರಾದ ಶ್ರೀ ಕೇತ್ ಮಚಾಡೊ ಅವರು ಮಾತನಾಡುತ್ತಿದ್ದರು. ಅವರು ಇಂದು ಬಾಮನವಾಡಿಯ ತಮ್ಮ ಓರಿಯಾನ್ ಹೈಡ್ರಾಲಿಕ್ಸ್ ನ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಅಂಗವಾಗಿ ಮಾತನಾಡುತ್ತಿದ್ದರು. ರಕ್ತದಾನವು ಅತ್ಯಂತ ಶ್ರೇಷ್ಟದಾನವಾಗಿದೆ. ನನ್ನ ಜನ್ಮದಿನದಂದು ತಾವೆಲ್ಲರೂ ರಕ್ತದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಇದು ಒಬ್ಬ ವ್ಯಕ್ತಿಗೆ ಸಲ್ಲುವ ಅಭೂತಪೂರ್ವ ಗೌರವವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಕಾರ್ಯಕ್ರಮz ಉಸ್ತುವಾರಿ ವಹಿಸಿದ್ದ ಕೆ ಎಲ್ ಇ ಶvಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ರಕ್ತ ¨sಂಡಾರದ ಅಧಿಕಾರಿ ಡಾ. ಅಶೋಕ ಅಲತಗಿ ಅವರು ಮಾತನಾಡಿ ದಾನಗಳಲ್ಲಿ ಶ್ರೇಷ್ಠವಾದುದು ರಕ್ತದಾನ, ಅದರಲ್ಲಿಯೂ ವೈದ್ಯಕೀಯರಂಗ ಎಷ್ಟೇ ಪ್ರಗತಿ ಹೊಂದಿದ್ದರೂ ರಕ್ತಕ್ಕೆ ರ‍್ಯಾಯವಾÀದುದು ಬೇರೊಂದಿಲ್ಲ ಆದ್ದರಿಂದ ೧೮ ವರ್ಷದ ಮೇಲಿನ ವಯಸ್ಕರು, ೫೦ ಕಿಲೊಗ್ರಾಂ ಗಿಂತ ಅಧಿಕ ತೂಕ ಹೊಂದಿರುವ ಎಲ್ಲ ಆರೋಗ್ಯವಂತರೂ ರಕ್ತದಾನವನ್ನು ಮಾಡಬಹುದಾಗಿದೆ. ಇದರಿಂದ ಭವಿಷ್ಯದಲ್ಲಿ ಹೃದಯಕ್ಕೆ ಸಂಭಂದಿಸಿದ ರೋಗಗಳು, ರಕ್ತದೊತ್ತಡದ ಸಮಸ್ಯೆಗಳು, ನರಮಂಡಲಕ್ಕೆ ಸಂಬಂದಿಸಿದ ಖಾಯಿಲೆಗಳಿಂದ ದೂರವಿರಬಹುದಾಗಿದೆ ಎಂದು ತಿಳುವಳಿಕೆ ನೀಡಿದರು.
ಶಿಬಿರದಲ್ಲಿ ಓರಿಯಾನ್ ಹೈಡ್ರಾಲಿಕ್ಸ ನ ೯೦ ಜನ ಕಾರ್ಮಿಕ ಭಂದುಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಓರಿಯಾನ್ ಹೈಡ್ರಾಲಿಕ್ಸ ನ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ಪ್ರವೀನ ವಾಘಮಾರೆ ಹಾಗೂ ಅವರ ಸಿಬ್ಬಂದಿ, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರಜ್ವಲ ಅವರು, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಅರುಣ ನಾಗಣ್ಣವರ, ರಕ್ತಭಂಡಾರದ ಸಿಬ್ಬಂದಿಯಾದ ಶ್ರೀ ಮಹಾದೇವ ವಾಲಿಶೆಟ್ಟಿ, ಶ್ರೀ ಸ್ಟೀಫನ ಅಮಟಿ ಸೇರಿದಂತೆ ಹಲವಾರು ಸಿಬ್ಬಂದಿ ಭಾಗವಹಿಸಿದ್ದರು.
ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು, ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಹಾಗೂ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಓರಿಯಾನ್ ಹೈಡ್ರಾಲಿಕ್ಸ್ನ ಮಾಲಿಕರಾದ ಶ್ರೀ ಕೇತ ಮಚಾಡೊ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಅವರ ಕಾರ್ಮಿಕ ವರ್ಗಕ್ಕೆ ಅಭಿನಂದಿಸಿದ್ದಾರೆ.
Gadi Kannadiga > Local News > ಓರಿಯಾನ ಹೈಡ್ರಾಲಿಕ್ಸ ಕಂಪನಿಯಲ್ಲಿ ರಕ್ತದಾನ ಶಿಬಿರ
ಓರಿಯಾನ ಹೈಡ್ರಾಲಿಕ್ಸ ಕಂಪನಿಯಲ್ಲಿ ರಕ್ತದಾನ ಶಿಬಿರ
Suresh18/07/2023
posted on
