This is the title of the web page
This is the title of the web page

Please assign a menu to the primary menu location under menu

Local News

ಮಾದಿಗ ಸಮಾಜದ ಜಾಗೃತಿಗಾಗಿ ಬ್ರಹತ್ ಬೈಕ್ ಜಾಥಾ 


ಬೆಳಗಾವಿ: ನಗರದ ಪ್ರವಾಸಿ ಮಂದಿರದಲ್ಲಿ ಇಂದು ಶುಕ್ರವಾರ ದಿನಾಂಕ 21 ರಂದು ಮಾದಿಗ ಸಮುದಾಯದ ಒಳಮೀಸಲಾತಿಗಾಗಿ ಹಾಗೂ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬ್ರಹತ್ ಜಾಥಾವನ್ನು ಹಮ್ಮಿಕೊಂಡು, ನಮ್ಮ ಬೇಡಿಕೆ ಸರ್ಕಾರದ ಮುಂದೆ ತರುತ್ತೇವೆ ಎಂದು ನಗರದ ಉದ್ಯಮಿ ಹಾಗೂ ಭಾರತ ವೈಭವ ಪತ್ರಿಕೆ ಸಂಪಾದಕರಾದ ಡಾ. ಎನ್ ಪ್ರಶಾಂತರಾವ್ ಐಹೊಳೆ ಹೇಳಿದ್ದಾರೆ.

ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿಗಾಗಿ ಮಾದಿಗ ಸಮುದಾಯದ ಎಲ್ಲ ವಕ್ಕೂಟ ಸಂಘಗಳ ಸದಸ್ಯರು ಸೇರಿ, ಸುಮಾರು 20 ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಬೈಕ್ ಜಾಥಾ ಇಟ್ಟುಕೊಂಡಿದ್ದೇವೆ, ಸುಮಾರು 2000 ಕೀ ಮೀ ವರೆಗೆ ಜಾಥಾ ಯಾತ್ರೆ ಇದ್ದು, ಉತ್ತರ ಕರ್ನಾಟಕದ 13 ಜಿಲ್ಲೆಗಳಿಂದಲೂ ಜನ ಬರುತ್ತಾರೆ, ಪ್ರತಿ ಗ್ರಾಮ ಹಾಗೂ ತಾಲೂಕಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇನ್ನು ಕರ್ನಾಟಕ ರಾಜ್ಯ ಮಾದಿಗ ಸಂಘದ ಅಧ್ಯಕ್ಷರಾದ ಮುತ್ತಣ್ಣ ಬೆನ್ನುರ ಮಾತನಾಡಿ, ಒಟ್ಟು ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಬೇಕು, ಹಿಂದುಳಿದ ವರ್ಗದಲ್ಲಿ ಇರುವ ಹಾಗೆ ಇಲ್ಲಿಯೂ ಕೂಡಾ ಒಳಮೀಸಲಾತಿ ಜಾರಿಯಾಗಲಿ, ಅದು ಬೆಳಗಾವಿಯಲ್ಲಿ ನಡೆಯುವ ಈ ಚಳಿಗಾಲದ ಅಧಿವೇಶನದಲ್ಲಿ ಆಗಬೇಕು, ಇಲ್ಲವಾದರೆ 14 ಡಿಸೆಂಬರ್ ರಂದು ನಡೆಯುವ ಧರಣಿ ನಿರಂತರವಾಗಿ ನಡೆಯುವಂತೆ ಆಗುತ್ತದೆ ಎಂದರು.

ಇನ್ನು ಡಿಎಸ್ಎಸ್ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದರೋಳಿ ಮಾತನಾಡಿ, ಈಗಾಗಲೇ ಈ ವಿಷಯದ ಕುರಿತಾಗಿ 2017 ರಲ್ಲೇ ಬ್ರಹತ ಪ್ರಮಾನದ ಹೋರಾಟ ಮಾಡಿದ್ದು, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡುತ್ತಾರೆ ಎಂಬ ಕನಸು ಇತ್ತು, ಕೊನೆ ಗಳಿಗೆಯಲ್ಲಿ ಅದು ಹುಸಿಯಾಯಿತು, ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಏನು ಮಾಡಬೇಕೋ ಅದನ್ನು ಆ ಚುನಾವಣೆಯಲ್ಲಿ ಮಾಡಿದ್ದೇವೆ, ಈ ಭಾರಿ ಬೈಕ್ ಜಾಥಾದಲ್ಲಿ ಹಾಗೂ ಅಧಿವೇಶನದ ಧರಣಿ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸದೇ ಇದ್ದರೇ, ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಈ ಸುದ್ದಿಗೋಷ್ಟಿಯಲ್ಲಿ ಮಾದಿಗ ಸಮುದಾಯದ ಇತರ ಪ್ರಮುಖರು, ಸಮಾಜದ ಸದಸ್ಯರು, ರಾಜ್ಯದ ವಿವಿಧ ಭಾಗಗಳಿಂದ ಬಂದಂತ ಪದಾಧಿಕಾರಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply