ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ಹಾಗೂ ಸರ್ಕಾರಿ ಕೆಲಸದಲ್ಲಿ 40% (ಪರ್ಶೆನಂಟೀಸ್) ಕಮಿಷನ್ ಪಡೆಯುವ ಜನದ್ರೋಯಿ ಬಿಜೆಪಿ ಆಡಳಿತದ ವಿರುದ್ಧ ಇಂದು ಬ್ರಹತ್ ಪ್ರತಿಭಟನೆ ನಡೆಯಿತು.
ರಾಜ್ಯ ಕಾಂಗ್ರೆಸ್ಸಿನ ಯುವ ಘಟಕದ ಅಧ್ಯಕ್ಷರಾದ ಮೊಹಮ್ಮದ್ ನಡಪಾಲ್ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಉಪಾಧ್ಯಕ್ಷರಾದ ಮೃಣಾಲ ಹೆಬ್ಬಾಳಕರ, ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಕಾರ್ತಿಕ್ ಪಾಟೀಲ್, ನಗರ ಅಧ್ಯಕ್ಷರಾದ ಸಿದ್ದೀಕ್ ಅಂಕಲಗಿ, ಜಿಲ್ಲಾ ಗ್ರಾಮೀಣ ಎಸ್ ಟಿ ಅಧ್ಯಕ್ಷರಾದ ಬಾಳೆಶ್ ದಾಸನಟ್ಟಿ, ಕಾರ್ಮಿಕ ಘಟಕದ ಅಧ್ಯಕ್ಷರಾದ ಮಂಜು ಕಾಂಬ್ಳೆ, ನೂರಾರು ಕಾಂಗ್ರೆಸ್ಸಿನ ಯುವಪಡೆ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿತ್ತು.
ಮೊದಲಿಗೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಿ, ಪ್ರತಿಭಟನೆಗೆ ಚಾಲನೆ ನೀಡಿದರು.
ಈ ವೇಳೆ ಪದಾಧಿಕಾರಿಗಳಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರೆಲ್ಲರು ಒಂದೇ ಘೋಷಣೆ ಕೂಗುತ್ತ ಸಾಗುತ್ತಿದ್ದರು, ಅದೇನಂದರೆ, 40 ಪರ್ಷೆಂಟೀಸ್ ಬಿಜೆಪಿ ಸರ್ಕಾರಕ್ಕೆ ದಿಕ್ಕಾರ, ಬೆಲೆ ಏರಿಕೆ ಮಾಡಿ, ಜನರನ್ನು ಕಂಗಾಲಾಗಿ ಮಾಡಿದ ಭ್ರಷ್ಟ ಬಿಜೆಪಿಗೆ ದಿಕ್ಕಾರ ಎಂದು ನೂರಾರು ಕಾರ್ಯಕರ್ತರು ಪದಾಧಿಕಾರಿಗಳು ಘೋಷಣೆ ಕೂಗುತ್ತ ಸರ್ಕಾರದ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೆರಳಿದರು.