This is the title of the web page
This is the title of the web page

Please assign a menu to the primary menu location under menu

Local News

ಲಂಚ ಸ್ವೀಕಾರ: ಅಧಿಕಾರಿ ಎಸಿಬಿ ಬಲೆಗೆ


ಬೆಳಗಾವಿ,ಆ.೦೫: ವಾರಸಾ ಪ್ರಮಾಣ ಪತ್ರ ಪಡೆಯಲು ಹಾಗೂ ಮೇಲಾಧಿಕಾರಿಯಿಂದ ದಾಖಲಾತಿಗಳಲ್ಲಿ ವಾರಸುದಾರರ ಹೆಸರುಗಳನ್ನು ನಮೂದಿಸಿ ಶಿಫಾರಸ್ಸು ವರದಿ ನೀಡಲು ಅಥಣಿ ತಾಲೂಕಿನ ಆಪಾದಿತರಾದ ಬಳಿಗೇರಿ ಗ್ರಾಮ ಲೆಕ್ಕಾಧಿಕಾರಿ ಉಮೇಶ ದನದಮನಿ ಮತ್ತು ಗ್ರಾಮ ಸಹಾಯಕ ಪ್ರಹ್ಲಾದ ಸನದಿ ಈ ಮೂದಲು ಫರ‍್ಯಾದಿಯಿಂದ ರೂ.೮,೦೦೦ಕ್ಕೆ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ರೂ.೩೦೦೦ ಲಂಚದ ಹಣವನ್ನು ಮುಂಗಡವಾಗಿ ಪಡೆದಿದ್ದು, ಕೊನೆಗೆ ರೂ.೧೦೫೦೦ ಗಳಿಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಆಗಸ್ಟ್ ೦೪ ನರಂದು ಫರ‍್ಯಾದಿಯಿಂದ ರೂ.೧೦೫೦೦ ಹಣವನ್ನು ಸ್ವೀಕರಿಸುವ ಸಂದರ್ಭದಲ್ಲಿ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ಇಬ್ಬರು ಆಪಾದಿತರನ್ನು ದಸ್ತಗೀರ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ಹಾಗೂ ಗ್ರಾಮ ಲೆಕ್ಕಾಧಿಕಾರಿಯವರ ಕಛೇರಿ, ಬಳಿಗೇರಿ ಇಲ್ಲಿ ಕಛೇರಿ ಹಚ್ಚುವರಿ ಶೋಧನೆ ನಡೆಸಲಾಗಿದೆ
ಕಛೇರಿಯಲ್ಲಿನ ಆಪಾದಿತ ಪ್ರಹ್ಲಾದ ಸನದಿ, ಗ್ರಾಮ ಸಹಾಯಕ ಬಳಿಗೇರಿ ಗ್ರಾಮ ತಾ: ಅಥಣಿ ಇವರನ್ನು ವಶಕ್ಕೆ ಪಡೆಯುವ ಕಾಲಕ್ಕೆ ರೂ.೧೯೦೦೦/-ಗಳು ಸಿಕ್ಕಿದ್ದು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ತನಿಖೆ ಮುಂದುವರಿಸಿರುತ್ತದೆ.
ಬಿ.ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳ, ಉತ್ತರ ವಲಯ, ಬೆಳಗಾವಿ ರವರ ಮಾರ್ಗದರ್ಶನದಲ್ಲಿ ಪಿರ್ಯಾದಿಯವರು ಈ ಬಗ್ಗೆ ನೀಡಿದ ದೂರನ್ನು ಜೆ.ಎಮ್. ಕರುಣಾಕರ ಶೆಟ್ಟಿ, ಪೊಲೀಸ್ ಉಪಾಧೀಕ್ಷಕರವರು ದಾಖಲಿಸಿಕೊಂಡಿರುತ್ತಾರೆ. ನಿರಂಜನ್ ಎಂ. ಪಾಟೀಲ ಪೊಲೀಸ ನಿರೀಕ್ಷಕರು, ಶ್ರೀ.ಎ.ಎಸ್.ಗೂದಿಗೊಪ್ಪ, ಪೊಲೀಸ್ ನಿರೀಕ್ಷಕರು ಹಾಗೂ ಬೆಳಗಾವಿ ಎಸಿಬಿ ಠಾಣೆಯ ಸಿಬ್ಬಂದಿಗಳು ಸದರಿ ಕಾರ್ಯಚರಣೆಯಲ್ಲಿ ತೊಡಗಿದ್ದರು.


Gadi Kannadiga

Leave a Reply