This is the title of the web page
This is the title of the web page

Please assign a menu to the primary menu location under menu

State

ಲಂಚ ಪ್ರಕರಣ : ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಇಇ ಲೋಕಾಯುಕ್ತ ಬಲೆಗೆ


ಕೊಪ್ಪಳ ಫೆಬ್ರವರಿ ೨೮ : ಕೊಪ್ಪಳ ಪಂಚಾಯತ ರಾಜ್ ಎಂಜಿನಿಯರಿಂಗ್ ವಿಭಾಗ ಕಛೇರಿಯ ಕಾರ್ಯನಿರ್ವಾಹಕ ಅಭಿಯಂತರರಾದ ಸೈಯ್ಯದ್ ಫಜಲ್ ಅವರು ತಮ್ಮ ಕಚೇರಿಯ ಕೊಠಡಿಯಲ್ಲಿ ಲಂಚದ ಹಣ ೧೫,೦೦೦ ಪಡೆದುಕೊಂಡು ಲೋಕಾಯುಕ್ತ ಟ್ರ‍್ಯಾಪ್‌ಗೆ ಒಳಪಟ್ಟಿರುತ್ತಾರೆ.
ಕುಕನೂರು ತಾಲೂಕ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಂಪೌಂಡ್ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ ರೂ. ೫,೦೦,೦೦೦ ಹಾಗೂ ಮಂಗಳೂರ ದಿಂದ ಬೇವೂರ ರಸ್ತೆಯ ಸುಧಾರಣೆ (ಕಿ.ಮೀ. ೦ ದಿಂದ ಕಿ.ಮೀ ೨.೨೫) ಕಾಮಗಾರಿ ಅಂದಾಜು ಮೊತ್ತ ರೂ ೪,೫೦,೦೦೦ ತುಂಡುಗುತ್ತಿಗೆ ಕಾಮಗಾರಿ ಬಿಲ್ಲು ಮಂಜೂರಾತಿ ಮಾಡಲು ಗುತ್ತಿಗೆದಾರರಿಗೆ ೨೫,೦೦೦ ಸಾವಿರ ರೂ.ಗಳಿಗೆ ಲಂಚದ ಬೇಡಿಕೆ ಇಟ್ಟಿದ್ದು, ಪರ‍್ಯಾಧಿದಾರರು ಚೌಕಾಸಿ ಮಾಡಲಾಗಿ ೧೫,೦೦೦ ರೂಪಾಯಿ ಕೊಡು ಅಂತ ಲಂಚ ಹಣಕ್ಕೆ ಒತ್ತಾಯಿಸಿದ ಬಗ್ಗೆ ನೀಡಿದ ದೂರಿನ ಸಾರಾಂಶದ ಮೇರೆಗೆ ಕೊಪ್ಪಳ ಲೋಕಾಯುಕ್ತ ಠಾಣೆ ಗುನೆ ನಂ: ೦೨/೨೦೨೩ ಕಲಂ: ೭(ಎ) ಭ್ರಷ್ಟಾಚಾರ, ಪ್ರತಿಬಂಧಕ ಕಾಯ್ದೆ ೧೯೮೮ (ತಿದ್ದುಪಡಿ ಕಾಯ್ದೆ ೨೦೧೮) .ರೀತ್ಯ ಪಿ.ಐ ಗಿರೀಶ ರೋಡಕರ ಅವರು ಪ್ರಕರಣ ದಾಖಲಿಸಿ, ಟ್ರಾö್ಯಪ್ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಅದರಂತೆ ಫೆ.೨೭ರ ಸಾಯಂಕಾಲ ೪:೨೦ ಗಂಟೆ ಸುಮಾರಿಗೆ ದೂರುದಾರರಿಂದ ಆಪಾದಿತ ಅಧಿಕಾರಿ ಸೈಯ್ಯದ್ ಫಾಜಲ್ ಅವರು ಹಣ ಪಡೆಯುವಾಗ ಟ್ರ‍್ಯಾಪ್‌ಗೆ ಒಳಗಾಗಿದ್ದು, ಅಪಾದಿತ ಅಧಿಕಾರಿಯಿಂದ ಲಂಚದ ಹಣ ಜಫ್ತು ಮಾಡಿಕೊಂಡು ತನಿಖೆಯನ್ನು ಮುಂದುವರೆಸಲಾಗಿರುತ್ತದೆ.
ಲೋಕಾಯುಕ್ತ ಕೊಪ್ಪಳ ಪೊಲೀಸ್ ಉಪಾಧೀಕ್ಷಕರಾದ ಸಲೀಂಪಾಷಾ ಅವರ ನೇತೃತ್ವದಲ್ಲಿ ಪಿ.ಐ ಗಿರೀಶ ರೋಡ್ಕರ್, ಪಿ.ಐ ಚಂದ್ರಪ್ಪ ಈಟಿ., ಪಿ.ಐ ಸಂತೋಷ ರಾಠೋಡ, ಸಿಹೆಚ್‌ಸಿ ಸಿದ್ದಯ್ಯ, ಸಿಹೆಚ್‌ಸಿ ರಾಮಣ್ಣ, ಸಿಹೆಚ್‌ಸಿ ಬಸವರಾಜ, ಸಿಪಿಸಿ ರಂಗನಾಥ, ಸಿಪಿಸಿ ನಾಗಪ್ಪ, ಮಪಿಸಿ ತಾರಾಮತಿ, ಮಪಿಸಿ ಶೈಲಜಾ,, ಎಪಿಸಿ ಆನಂದಕುಮಾರ, ಎಪಿಸಿ ಗುರು ದೇಶಪಾಂಡೆ, ಎಹೆಚ್‌ಸಿ ರಾಜು ಅವರು ದಾಳಿ ನಡೆಸಿದ್ದರು ಎಂದು ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.


Leave a Reply