This is the title of the web page
This is the title of the web page

Please assign a menu to the primary menu location under menu

Local News

ವಧುವಿನ ಅಲಂಕಾರ ಭಾರತೀಯ ವೈವಿಧ್ಯತೆಯ ಸಂಸ್ಕೃತಿಯನ್ನು ಬಿಂಬಿಸುತ್ತದೆ: ಡಾ.ಎಂ ಪಿ ಚಂದ್ರಿಕಾ


ಬಾಗಲಕೋಟೆ : ಸೌಂದರ್ಯ ಎನ್ನುವುದು ಎಲ್ಲರಲ್ಲಿಯೂ ಇರುತ್ತದೆ ಆದರೆ ನೋಡುವ ರೀತಿ ಮಾತ್ರ ಬೇರೆಯಾಗಿರುತ್ತದೆ ಎಂದು ಬಾಗಲಕೋಟೆಯ ಎಸ್.ಸಿ ನಂದಿಮಠ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೇ ಡಾ. ಎಂ.ಪಿ ಚಂದ್ರಿಕಾ ಹೇಳಿದರು.

ನಗರದ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಕಾಲೇಜಿನ ಸಭಾಭವನದಲ್ಲಿ ಮಂಗಳವಾರ ಮಹಿಳಾ ಸಬಲೀಕರಣ ವಿಭಾಗದ ವತಿಯಿಂದ ಭಾರತೀಯ ವಧುಗಳ ಅಲಂಕಾರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೆಣ್ಣು ಮಕ್ಕಳು ಚಿಕ್ಕವಯಸ್ಸಿನಿಂದ ಅಮ್ಮನ ಸೀರೆ ಉಟ್ಟು ಮದುಮಗಳಾಗಿ ಕಾಣುವ ಕನಸನ್ನು ಕಾಣುತ್ತಿರುತ್ತಾರೆ. ನಿಜವಾಗಿಯೂ ಮದುಮಗಳಾಗುವ ದಿನ ಬಂದಾಗ ಬಹಳ ಸಂತೋಷದಿಂದ ಇರುತ್ತಾರೆ. ಆದರೆ ಬೇರೆ ದಿನ ಅಷ್ಟು ಅಂದವಾಗಿ ಕಾಣಿಸದೆ ಮದುವೆ ದಿನದಂದು ಚೆಂದವಾಗಿ ಕಾಣಿಸುತ್ತಾರೆ. ಏಕೆಂದರೆ ಆ ದಿನ ಎಲ್ಲರ ಗಮನವು ವದುವಿನ ಮೇಲೆ ಇರುತ್ತದೆ. ಇವತ್ತಿನ ವಧುಗಳ ರೀತಿಯ ಅಲಂಕಾರ ಭಾರತೀಯ ವೈವಿಧ್ಯತೆಯ ಸಂಸ್ಕೃತಿಯನ್ನು ಮೆರೆದಿದೆ. ಮದುವೆಯ ದಿನ ಆಯಾ ಪ್ರದೇಶದ ಸಂಪ್ರದಾಯಕ್ಕೆ ತಕ್ಕಂತೆ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಮತ್ತು ಹೆಚ್ಚಾಗಿ ಹೆಣ್ಣಿನ ಮನಸ್ಸು ಭಾರತೀಯರು ಎನ್ನುವ ಭಾವನೆ ಬಂದಾಗ ಮಾತ್ರ ಮದುಮಗಳು ಎನ್ನುವ ಕಳೆ ಕಾಣಿಸುತ್ತದೆ. ಮದುವೆ ಮಾಡಿಕೊಳ್ಳುವುದು ಮತ್ತು ಅದಕ್ಕೆ ಪೂರ್ವ ಸಿದ್ಧತೆ ನಡೆಸುವುದು ಹೆಣ್ಣು ಮಕ್ಕಳ ಜೀವನದ ಮುಖ್ಯವಾದ ಘಟ್ಟ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಜಗತ್ತಿನ ಅತಿ ಸುಂದರವಾದ ಹೆಣ್ಣು ಮಗಳು ಎಂದರೆ ತಾಯಿ. ಕೇವಲ ಉಡುಗೆ ಮಾತ್ರ ಬಣ್ಣವಾಗಿದ್ದರೆ ಸಾಲದು ಉತ್ಸಾಹ, ಆಸಕ್ತಿ, ಅಭಿರುಚಿ ಕೂಡ ಹಾಗೆ ಇರಬೇಕು. ಸೌಂದರ್ಯ ಎನ್ನುವುದು ಎಲ್ಲಿ ಇರುತ್ತದೆ ಎಂದು ಮೊದಲು ತಿಳಿದುಕೊಳ್ಳಬೇಕು. ಇಂತಹ ವೇದಿಕೆ ಮಕ್ಕಳಿಗೆ ಪ್ರತಿಭೆ ಹೊರ ಹಾಕಲು ಹೆಚ್ಚು ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಘಟಕದ ಸಂಯೋಜಕ ಡಾ. ಅಪ್ಪು ರಾಠೋಡ, ಪ್ರೊ. ಐ. ಬಿ ಚಿಕ್ಕಮಠ, ಡಾ. ಪ್ರಹಲ್ಲಾದ್, ಪ್ರೊ. ಶೈಲಜಾ, ವಿದ್ಯಾರ್ಥಿನಿ ಪ್ರತಿನಿಧಿ ಪ್ರೀತಿ ಬಿರಾದರ ಮುಂತಾದವರು ಉಪಸ್ಥಿತರಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಮಹಿಳಾ ಸಬಲೀಕರಣ ಘಟಕದ ಸಂಯೋಜಕಿ ಡಾ. ಲಲಿತಾ ಚೌಡಿ ಸ್ವಾಗತಿಸಿದರು, ವಿದ್ಯಾರ್ಥಿನಿ ಶ್ರುತಿ ನಿರೂಪಿಸಿದರು, ಡಾ. ಮಂಜುಳಾ ಚೌಹಾಣ ವಂದಿಸಿದರು.


Gadi Kannadiga

Leave a Reply