This is the title of the web page
This is the title of the web page

Please assign a menu to the primary menu location under menu

Local News

ಕಾಂಗ್ರೆ ಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ  ಬೆಳಗಾವಿಯಲ್ಲಿ ಬ್ರಹತ್ ಸಮಾವೇಶ ಮತ್ತು ಶಕ್ತಿ ಪ್ರದರ್ಶನ


ಬೆಳಗಾವಿ: ನಗರದ ಮರಾಠಾ ಮಂಗಳ ಕಾರ್ಯಾಲಯದಲ್ಲಿ ಬುಧವಾರ ದಿನಾಂಕ 25 ನಡೆದ ಪರಿಷತ್ ಚುನಾವಣಾ ಪ್ರಚಾರದ ಬ್ರಹತ್ ಸಮಾವೇಶದಲ್ಲಿ ಪಕ್ಷದ ಹಲವಾರು ನಾಯಕರು ಮಾತನಾಡಿದರು.

ಮೂಗಿಗೆ ತುಪ್ಪ ಹಚ್ಚಿಯೆ ಬಿಜೆಪಿಯವರು ಇಲ್ಲಿವರೆಗೂ ಜನರನ್ನ ದೇಶವನ್ನ ನಂಬಿಸಿ ಅಧಿಕಾರ ಪಡೆದು ದುರಾಡಳಿತ ನಡೆಸುತ್ತಿದ್ದಾರೆ,, ಈಗ ಯಡಿಯೂರಪ್ಪ ಅವರನ್ನೂ ಕೂಡಾ ಬಿಡದೆ ಅವರಿಗೂ ತುಪ್ಪ ಸವರಿ, ಅವರ ಮಗನಿಗೆ ಟಿಕೆಟ್ ಕೊಡದೆ ವಂಚಿಸಿದರು ಎಂದು ಕಾಂಗ್ರೆಸ್ ಮುಖಂಡ ಮುರುಗೊಡ ಮಲ್ಲಪ್ಪ ಮಾತನಾಡಿದರು.

ಇನ್ನು ಬೆಳಗಾವಿಯ ಮಾಜಿ ಶಾಸಕ ರಮೇಶ್ ಕುಡಚಿ ಮಾತನಾಡಿ, ಈ ಪ್ರಕಾಶ ಹುಕ್ಕೇರಿ ಅವರು ಮಾಡಿದ ಕೆಲಸದಿಂದ ಅವರು ಈಗಾಗಲೇ ಚುನಾಯಿತರು ಆದಂಗೆ. ಇನ್ನೂ ಮುಂದೆ ಶಿಕ್ಷಕರ ಮತ್ತು ಶಿಕ್ಷಣದ ಸುಧಾರಣೆ ಯಾವ ರೀತಿಯಾಗಿ ಆಗುತ್ತದೆ ಎಂದು ನೀವೇ ಮುಂದಿನ ದಿನದಲ್ಲಿ ಕಾಣುವಿರಿ  ಎಂದರು.

ಇನ್ನು ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಇದು ಅತ್ಯಂತ ಸೂಕ್ಷ್ಮ ಚುನಾವಣೆ,,, ನಮಗೆಲ್ಲ ಬುದ್ದಿ ಕಲಿಸಿದ ಬುದ್ದಿವಂತ ಮತದಾರರು ಇರುವ ಚುನಾವಣೆ, ಅವರಿಗೆ ಪ್ರಕಾಶಣ್ಣ ಹುಕ್ಕೇರಿ ಮತ್ತು ಸಂಜಯ ಸಂಕ ಅವರ ಬಗ್ಗೆ ಗೊತ್ತು, ನಮ್ಮ ಅಭ್ಯರ್ಥಿಗಳ ಕೆಲಸ ನೋಡಿ ಮತದಾರರು ನಮ್ಮನ್ನು ಗೆಲ್ಲಿಸುತ್ತಾರೆ ಎಂದರು.

ಬೆಳಗಾವಿ ಜಿಲ್ಲೆಗೆ ಪ್ರಕಾಶ ಹುಕ್ಕೇರಿ ಅವರ ಕೊಡುಗೆ ಅಪಾರ, ಇವತ್ತು ಬೆಳಗಾವಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಹುಕ್ಕೆರಿಯವರು, ಅದೇರೀತಿ ಜಿಲ್ಲೆಗೆ ಅನೇಕ ಹೊಸ ನೀರಾವರಿ ಯೋಜನೆಗಳನ್ನು ನೀಡಿದ್ದಾರೆ, ಅವರ ಕೊಡುಗೆ ಅಪಾರ ಎಂದರು.

ಈ ಸಮಾವೇಶದಲ್ಲಿ ಕಾಂಗ್ರೆಸ್ಸಿನ ಎಲ್ಲಾ ಪದಾಧಿಕಾರಿಗಳು ನೂರಾರು ಕಾರ್ಯಕರ್ತರು ಹಾಗೂ ಶಿಕ್ಷಕ, ಪದವಿದರ ಕ್ಷೇತ್ರದ ಅಭ್ಯರ್ಥಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply