ಬೆಳಗಾವಿ ೩೧: ದಿನಾಂಕ ೩೧.೦೩.೨೦೨೨ ರಂದು ಶಾಸಕ ಅನಿಲ ಬೆನಕೆರವರು ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಕಾರ್ಯಾಲಯದಲ್ಲಿ ಬುಡಾ ಆಯುಕ್ತರೊಂದಿಗೆ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃಧ್ದಿ ಕಾಮಗಾರಿಗಳ ಕುರಿತು ಹಾಗೂ ಮುಂದೆ ಆಗಬೇಕಾದ ಕಾಮಗಾರಿಗಳ ಕುರಿತು ಸಭೆ ನಡೆಸಿದರು. ಸಭೆಯಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳ ಅಭಿವೃಧ್ದಿ ಹಾಗೂ ರಸ್ತೆಗಳ ನಿರ್ಮಾಣದ ಕುರಿತು ಚರ್ಚಿಸಿದರಲ್ಲದೆ ಬೇಸಿಗೆ ಕಾಲವಿರುವುದರಿಂದ ಉತ್ತರ ಮತಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಅವಶ್ಯಕ ಪ್ರದೇಶಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯುವ ಕುರಿತು ಚರ್ಚಿಸಿ ಮಾಹಿತಿಯನ್ನು ಪಡೆದುಕೊಂಡರು. ಮುಂಬರುವ ದಿನಗಳಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದಿಂದ ಕೈಗೊಳ್ಳಬೇಕಾದ ಅಭಿವೃದ್ದಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಬೆಳಗಾವಿ ನಗರಾಬಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಬೆಳಗಾಂವಕರ, ಆಯುಕ್ತರಾದ ಪ್ರೀಥಮ ನಸಲಾಪೂರೆ, ಬುಡಾ ನಿರ್ದೇಶಕರಾದ ಮಲ್ಲಿಕಾರ್ಜುನ ಸತ್ತಿಗೇರಿ, ಎಇಇ ಹಿರೇಮಠ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Gadi Kannadiga > Local News > ಶಾಸಕ ಅನಿಲ ಬೆನಕೆಯವರಿಂದ ಬುಡಾ ಪ್ರಗತಿ ಪರಿಶೀಲನೆ ಸಭೆ