ಗದಗ ಜನೆವರಿ ೨೩ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ನಾಲ್ಕು ನಿಗಮ/ಸಂಸ್ಥೆಯ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸದಸ್ಯರು ಜನೆವರಿ ೨೪ ರಂದು ಬೆ ೧೧: ಗಂಟೆಯಿಂದ ಸಂಜೆ ೫:೩೦ ರ ವೆರೆಗೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ವಿಭಾಗೀಯ ಕಛೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ಕರೆ ನೀಡಿರುತ್ತಾರೆ.
ಆದರೆ ಈ ಸಂಭಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬಸ್ಸುಗಳ ಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವದಿಲ್ಲ ಹಾಗೂ ಎಂದಿನಂತೆ ಯಾಥಾಸ್ಥಿತಿಯಲ್ಲಿ ಬಸ್ಸುಗಳು ಕಾರ್ಯಾಚರಣೆಯಾಗಲಿವೆ, ಆದ್ದರಿಂದ ಸಾರ್ವಜನಿಕ ಪ್ರಯಾಣಿಕರು ಎಂದಿನಂತೆ ನಿರಾತಂಕವಾಗಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ ಎಂದು ವಾ.ಕ.ರ.ಸಾ.ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Gadi Kannadiga > State > ಎಂದಿನಂತೆ ಬಸ್ಸ ಸಂಚಾರ ಕಾರ್ಯಾಚರಣೆ
ಎಂದಿನಂತೆ ಬಸ್ಸ ಸಂಚಾರ ಕಾರ್ಯಾಚರಣೆ
Suresh23/01/2023
posted on