This is the title of the web page
This is the title of the web page

Please assign a menu to the primary menu location under menu

State

ಉದ್ದಿಮೆ ಪರವಾನಿಗೆ ಕಡ್ಡಾಯ


ಗದಗ ಸೆಪ್ಟೆಂಬರ್ ೧೧: ಸಮಸ್ತ ಅಂಗಡಿ, ವ್ಯಾಪಾರ, ಉದ್ದಿಮೆ ಹಾಗೂ ಇತರೆ ವಹಿವಾಟು ನಡೆಸುವ ಮಾಲೀಕರುಗಳಿಗೆ ತಿಳಿಯಪಡಿಸುವುದೇನೆಂದರೆ ೧೯೬೪ನೇ ಕರ್ನಾಟಕ ಪೌರಸಭೆಗಳ ಅಧಿನಿಯಮದ ಕಲಂ ೨೫೬ರ ಅಡಿಯಲ್ಲಿ ೧೩ನೇ ಅನುಸೂಚಿಯಲ್ಲಿ ಸೂಚಿಸುವಂತಹ ಯಾವುದೇ ಅಂಗಡಿ ವ್ಯಾಪಾರ, ಉದ್ದಿಮೆ ಹಾಗೂ ಇತರೆ ವಹಿವಾಟು ನಡೆಸುತ್ತಿದ್ದಲ್ಲಿ ನಗರಸಭೆಯಿಂದ ಪ್ರಸ್ತುತ ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಈಗಾಗಲೇ ಲೈಸನ್ಸ ಪಡೆದವರು ಸನ್ ೨೦೨೨-೨೩ನೇ ಸಾಲಿನ ಚಾಲ್ತಿ ಅವಧಿ ಮುಗಿದಿದ್ದು ಇರುತ್ತದೆ. ಆದರೆ ವ್ಯಾಪಾರಸ್ಥರು ತಮ್ಮ ಲೈಸನ್ಸ್ಗಳನ್ನು ಇನ್ನೂವರೆಗೂ ನವೀಕರಿಸಿಕೊಂಡಿರುವುದಿಲ್ಲ ಮತ್ತು ೨೦೨೩-೨೪ ನೇ ಸಾಲಿನ ಅವಧಿಯು ದಿನಾಂಕ:೩೧-೦೩-೨೦೨೪ ರಂದು ಮುಗಿಯಲಿದ್ದು, ಲೈಸನ್ಸಗಳನ್ನು ನವೀಕರಿಸಿಕೊಳ್ಳಬೇಕು. ಅನಧಿಕೃತವಾಗಿ ವ್ಯಾಪಾರ ಹಾಗೂ ಉದ್ದೀಮೆ ಮತ್ತು ಇತರೆ ವಹಿವಾಟು ಮಾಡುವ ವ್ಯಾಪಾರಸ್ತರು ಲೈಸನ್ಸ್ ಪಡೆಯದೇ ಇದ್ದವರು ಸೂಕ್ತ ದಾಖಲೆಗಳಾದ ಉತಾರ ೨೦೨೩-೨೪ರ ಕಂದಾಯ ತುಂಬಿದ ರಶೀದಿ, ಆಧಾರ ಕಾರ್ಡ ಅಥವಾ ಗುರುತಿನ ಚೀಟಿ, ಭಾಡಿಗೆ ಕರಾರು ಪತ್ರ, ಝರಾಕ್ಸ್ ಪ್ರತಿಗಳು ಹಾಗೂ ಪಾಸ್ ಪೊರ್ಟ ಸೈಜ್ ಫೋಟೋ, ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ದಿನಾಂಕ:೩೧-೦೩-೨೦೨೪ರ ರೊಳಗಾಗಿ ವ್ಯಾಪಾರ ವಹಿವಾಟು ಮಾಡಲು ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿಯುಳ್ಳ ಉದ್ದಿಮೆ ಪರವಾನಿಗೆ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಂಡು ವ್ಯಾಪಾರವನ್ನು ಮಾಡಲು ಈ ಮೂಲಕ ವಿನಂತಿಸಿದೆ. ಇದಕ್ಕೆ ತಪ್ಪಿದಲ್ಲಿ ಕರ್ನಾಟಕ ಪೌರಸಭಾ ಅಧಿನಿಯಮದ ಅನ್ವಯ ದಂಡ ವಿಧಿಸುವುದಲ್ಲದೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಲಾಗುವುದು.
ಇಂತಹ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸದೆ ಸಮಸ್ತ ಅಂಗಡಿ, ವ್ಯಾಪಾರ, ಉದ್ದಿಮೆ ಹಾಗೂ ಇತರೆ ಪರವಾನಿಗೆಯನ್ನು ೨೦೨೩-೨೪ನೇ ಸಾಲಿನ ವರೆಗೆ ನವೀಕರಿಸಿಕೊಳ್ಳಬೇಕು. ಅನಧಿಕೃತವಾಗಿ ವ್ಯಾಪಾರ ಹಾಗೂ ಉದ್ದೀಮೆ ಮತ್ತು ಇತರೆ ವಹಿವಾಟು ಮಾಡುವ ವ್ಯಾಪಾರಸ್ತರು ಲೈಸನ್ಸ್ ಪಡೆದು ವ್ಯಾಪಾರ ಮಾಡಿಕೊಳ್ಳಬೇಕು ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply