ಗದಗ ಸೆಪ್ಟೆಂಬರ ೮: ಸಮಸ್ತ ಅಂಗಡಿ, ವ್ಯಾಪಾರ, ಉದ್ದಿಮೆ ಹಾಗೂ ಇತರ ವಹಿವಾಟು ನಡೆಸುವ ಮಾಲೀಕರುಗಳಿಗೆ ತಿಳಿಯಪಡಿಸುವುದೇನೆಂದರೆಕರ್ನಾಟಕ ಪೌರಸಭೆಗಳ ಅಧಿನಿಯಮದ ಅಡಿಯಲ್ಲಿ ಯಾವುದೇ ಅಂಗಡಿ ವ್ಯಾಪಾರ, ಉದ್ದಿಮೆ ಹಾಗೂ ಇತರೆ ವಹಿವಾಟು ನಡೆಸುತ್ತಿದ್ದಲ್ಲಿ ನಗರಸಭೆಯಿಂದ ಪ್ರಸ್ತುತ ಪರವಾನಗಿ ಪಡೆಯುವುದು ಕಡ್ಡಾಯವಾಗ್ತಿದೆ. ಲೈಸನ್ಸ್ ಪಡೆದವರು ೨೦೨೨-೨೩ನೇ ಸಾಲಿನ ಚಾಲ್ತಿ ಅವಧಿ ಮುಗಿದಿರುತ್ತದೆ. ಆದರೂ ವ್ಯಾಪಾರಸ್ಥರು ತಮ್ಮ ಲೈಸನ್ಸ್ಗಳನ್ನು ಇನ್ನೂವರೆಗೂ ನವೀಕರಿಸಿಕೊಂಡಿರುವುದಿಲ್ಲ ೨೦೨೩-೨೪ನೇ ಚಾಲ್ತಿ ಸಾಲಿನ ವರ್ಷವು ಅವಧಿಯು ದಿ:೩೧-೦೩-೨೦೨೪ ರಂದು ಮುಗಿಯಲಿದ್ದು, ನವೀಕರಿಸಿಕೊಳ್ಳಬೇಕು. ಅನಧಿಕೃತವಾಗಿ ವ್ಯಾಪಾರ ಹಾಗೂ ಉದ್ದೀಮೆ ಮತ್ತು ಇತರೆ ವಹಿವಾಟು ಮಾಡುವ ವ್ಯಾಪಾರಸ್ತರು ಲೈಸೆನ್ಸ್ ಪಡೆಯದೇ ಇದ್ದವರು ಸೂಕ್ತ ದಾಖಲೆಗಳಾದ ಉತಾರ ಸನ್ ೨೦೨೩-೨೪ರ ಕಂದಾಯ ತುಂಬಿದ ರಶೀದಿ, ಆಧಾರ ಕಾರ್ಡ ಅಥವಾ ಗುರುತಿನ ಚೀಟಿ, ಭಾಡಿಗೆ ಕರಾರು ಪತ್ರ, ಝರಾಕ್ಸ್ ಪ್ರತಿಗಳು ಹಾಗೂ ಪಾಸ್ ಪೋರ್ಟ್ ಸೈಜ್ ಫೋಟೋ, ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ದಿನಾಂಕ:೩೧-೦೩-೨೦೨೪ರ ರೊಳಗಾಗಿ ವ್ಯಾಪಾರ ವಹಿವಾಟು ಮಾಡಲು ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿಯುಳ್ಳ ಉದ್ದಿಮೆ ಪರವಾನಿಗೆ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಂಡು ವ್ಯಾಪಾರವನ್ನು ಮಾಡಬಹುದಾಗಿದೆ. ತಪ್ಪಿದಲ್ಲಿ ಕರ್ನಾಟಕ ಪೌರಸಭಾ ಅಧಿನಿಯಮದನ್ವಯ ದಂಡ ವಿಧಿಸುವುದಲ್ಲದೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಲಾಗುವುದು.
ಇಂತಹ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸದೆ ಸಮಸ್ತ ಅಂಗಡಿ, ವ್ಯಾಪಾರ, ಉದ್ದಿಮೆ ಹಾಗೂ ಇತರೆ ಪರವಾನಿಗೆಯನ್ನು ೨೦೨೩-೨೪ನೇ ಸಾಲಿನವರೆಗೆ ನವೀಕರಿಸಿಕೊಳ್ಳಬೇಕು. ಅನಧಿಕೃತವಾಗಿ ವ್ಯಾಪಾರ ಹಾಗೂ ಉದ್ದಿಮೆ ಮತ್ತು ಇತರೆ ವಹಿವಾಟು ಮಾಡುವ ವ್ಯಾಪಾರಸ್ತರು, ಲೈಸೆನ್ಸ್ ಪಡೆದು ವ್ಯಾಪಾರ ಮಾಡಿಕೊಳ್ಳಬೇಕು ಎಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಉದ್ದಿಮೆ ಪರವಾನಿಗೆ ಕಡ್ಡಾಯ
ಉದ್ದಿಮೆ ಪರವಾನಿಗೆ ಕಡ್ಡಾಯ
Suresh08/09/2023
posted on
More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023
ದನಗಳ ಮಾಲೀಕರ ಗಮನಕ್ಕೆ
22/09/2023
ನೇರ ಸಂದರ್ಶನ.
22/09/2023