WhatsApp Group
        
        
             Join Now
        
    
ಬೆಳಗಾವಿ; 98ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಸಮಾರಂಭ ಜರುಗಿತು.
ಕಾರ್ಯಕ್ರಮದ ಸಾನಿಧ್ಯವನ್ನು ಅವರೊಳ್ಳಿ-ಬಿಳಿಕಿ  ರುದ್ರ ಸ್ವಾಮಿ ಮಠದ  ಪೀಠಾಧಿಪತಿಗಳಾದ
 ಶ್ರೀ ಚನ್ನಬಸವದೇವರು ವಹಿಸಿ ಗುರುವನ್ನು ಆರಾಧಿಸುವ ಪರಂಪರೆ ನಮ್ಮ ದೇಶದಲ್ಲಿ ಕಾಣಲಿಕ್ಕೆ ಮಾತ್ರ ಸಾಧ್ಯ ನಾವು ಶಿಕ್ಷಕರನ್ನು ಗುರುವಾಗಿ ಕಾಣುವ ದೃಷ್ಟಿ ನಮ್ಮದಾಗಬೇಕು. ವಿದೇಶದಲ್ಲಿ ವ್ಯವಹಾರ ದೃಷ್ಟಿಯಲ್ಲಿ ಶಿಕ್ಷಕರನ್ನು ಕಾಣುತ್ತಾರೆ ಎಂದು ಗುರುವಿನ ಮಹತ್ವವನ್ನು ತಿಳಿಸಿದರು. ಶ್ರೀ ಚಂದ್ರಶೇಖರ್ ಸಂಬರಗಿ ಅಧ್ಯಕ್ಷತೆಯನ್ನು ಮುಖ್ಯ ಅತಿಥಿಗಳಾಗಿ ಶ್ರೀ ಸುಭಾಷ್  ಗುಳಶೆಟ್ಟಿ, ಶ್ರೀ ಎಂ ಬಿ ಹೇರೂರು ಪ್ರಾಚಾರ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಗುರುಗಳನ್ನು ಸತ್ಕಾರ ಮೂಲಕ ಗುರುವಂದನೆಯನ್ನು  ಸಮರ್ಪಿಸಿದರು. ವಿದ್ಯಾರ್ಥಿನಿವೃತ್ತ ಯೋಧರನ್ನು, ಸಾಧಕರನ್ನು ಸನ್ಮಾನಿಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀ ಶ್ರವಣ್ ಕುಮಾರ್ ಹುಡೇದ ಸ್ವಾಗತಿಸಿದರು ಶ್ರೀ ಅಭಿನಂದನ ಪಾಟೀಲ್ ವಂದಿಸಿದರು. ಸವಿತಾ ಚವಲಗಿ ಕಾರ್ಯಕ್ರಮವನ್ನು ನಿರೂಪಿಸಿದರು.


 
		 
		 
		
