ಬೆಳಗಾವಿ: ಬೈಲಹೊಂಗಲ ಪುರಸಭೆಗೆ ಸಂದಾಯ ಮಾಡಬೇಕಾದ 2022-23ನೇ ಸಾಲಿನ ವಾಸ, ವಾಣಿಜ್ಯ, ಖಾಲಿ ನಿವೇಶನಗಳ ಆಸ್ತಿ ತೆರಿಗೆಯನ್ನು ಶೇ5 ರಷ್ಟು ರಿಯಾಯಿತಿಯಲ್ಲಿ ಏಪ್ರಿಲ್ 30ರೊಳಗೆ ತುಂಬಬೇಕು ಎಂದು ಸೂಚಿಸಲಾಗಿದೆ.
ಏಪ್ರಿಲ್ 1 ರಿಂದ ಜೂನ್ 30ರವರೆಗೆ ರಿಯಾಯಿತಿ ಹಾಗೂ ದಂಡ ಶುಲ್ಕವಿಲ್ಲದೇ ತುಂಬುವುದಕ್ಕೆ ಅವಕಾಶ ಇರುತ್ತದೆ. ನಿಗದಿತ ಅಧಿಯಲ್ಲಿ ತೆರಿಗೆ ನೀಡದಿದ್ದರೇ ಜುಲೈ 2022ರ ರಿಂದ ಪ್ರತಿ ತಿಂಗಳು ಶೇ 2ರಷ್ಟು ದಂಡ ತುಂಬಬೇಕಾಗುತ್ತದೆ. ಹೀಗಾಗಿ ಏಪ್ರಿಲ್ 30ರೊಳಗಾಗಿ ನೀರಿನ ಕರ ಟ್ರೇಡ್ ಲೈಸನ್ಸ್, ಮಳಿಗೆ ಬಾಡಿಗೆಯನ್ನು ಪುರಸಭೆಗೆ ಸಂದಾಯ ಮಾಡಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.