This is the title of the web page
This is the title of the web page

Please assign a menu to the primary menu location under menu

Local News

ಲೇಖಕಿಯರಿಗಾಗಿ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ


ಬೆಳಗಾವಿ ೧೫- ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ವಿವಿಧ ದತ್ತಿ ಪ್ರಶಸ್ತಿಗಳಿಗಾಗಿ ಬೇರೆ ಬೇರೆ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಗಳಿಗಾಗಿ ಲೇಖಕಿಯರು ೨೦೨೨ ರಲ್ಲಿ ಪ್ರಕಟಗೊಂಡ ಕೃತಿಗಳ ತಲಾ ಎರಡು ಪ್ರತಿಗಳನ್ನು ದಿನಾಂಕ ೩೦ ಮಾರ್ಚ ೨೦೨೩ರ ಒಳಗೆ ಕಳುಹಿಸಿ ಕೊಡಬೇಕು ಆಮೇಲೆ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
ಶ್ರೀಮತಿ ಜ್ಯೋತಿ ಬದಾಮಿ ದತ್ತಿ ಪ್ರಶಸ್ತಿ (ಗದ್ಯ ಪ್ರಕಾರದ ಯಾವುದೇ ಕೃತಿ) ಶ್ರೀಮತಿ ಸುಧಾ ಪಾಟೀಲ ದತ್ತಿ ಪ್ರಶಸ್ತಿ (ಕವನ ಸಂಕಲನ), ಶ್ರೀಮತಿ ವಿದ್ಯಾ ಹುಂಡೇಕರ ದತ್ತಿ ಪ್ರಶಸ್ತಿ (ಮಹಿಳೆ ಅಥವಾ ಮಕ್ಕಳ ಕೃತಿ), ಶ್ರೀಮತಿ ಪ್ರಭಾ ಪಾಟೀಲ ದತ್ತಿ ಪ್ರಶಸ್ತಿ (ಕಥಾ ಸಂಕಲನ), ಶ್ರೀಮತಿ ಇಂದಿರಾ ಮೋಟೆಬೆನ್ನೂರ ದತ್ತಿ ಪ್ರಶಸ್ತಿ (ಕಥಾ ಸಂಕಲನ), ಶ್ರೀಮತಿ ರೋಹಿಣಿ ಯಾದವಾಡ ದತ್ತಿ ಪ್ರಶಸ್ತಿ (ಪ್ರಥಮ ಕವನ ಸಂಕಲನ) ಈ ಪ್ರಶಸ್ತಿಗಳನ್ನು ಬೆಳಗಾವಿ ಜಿಲ್ಲಾ ಲೇಖಕಿಯರಿಂದ ಮಾತ್ರ ಆಹ್ವಾನಿಸಲಾಗಿದೆ
ಡಾ ಹೇಮಾವತಿ ಸೊನೊಳ್ಳಿ ದತ್ತಿ ಪ್ರಶಸ್ತಿ ರಾಜ್ಯ ಮಟ್ಟದ್ದಾಗಿದ್ದು ೨೦೨೨ರಲ್ಲಿ ಪ್ರಕಟಗೊಂಡ ಯಾವುದೇ ಪ್ರಕಾರದ ತಲಾ ಎರಡು ಪ್ರತಿಗಳನ್ನು (ಲೇಖಕಿಯರು ಮಾತ್ರ) ಕಳುಹಿಸಿಕೊಡಿ
ಶ್ರೀಮತಿ ಜಯಶೀಲಾ ಬ್ಯಾಕೋಡ ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಶ್ರೀನಗರ ಮನೆ ನo ೬೩೪ ಡಬಲ್ ರೋಡ್, ೫ ನೆ ಸೆಕ್ಟರ್ ಎಮ್ ಎಮ್ ಎಕ್ಸಟೆನ್ಶನ್ ಬೆಳಗಾವಿ ಈ ವಿಳಾಸಕ್ಕೆ ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೭೪೧೦೨೭೫೭೦ ಗೆ ಸಂಪರ್ಕಿಸಿ.


Gadi Kannadiga

Leave a Reply