ಗದಗ ಜುಲೈ ೨೫: ರಾಜ್ಯ ಸರ್ಕಾರವು ೨೦೨೩-೨೪ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲು ವಿವಿಧ ತೋಟಗಾರಿಕೆ ಬೆಳೆಗಳಿಗೆ ಮಂಜೂರಾತಿ ನೀಡಿದೆ. ಈ ಯೋಜನೆಯಡಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳಿಗೆ ಮಾವು, ಪಪ್ಪಾಯ ಹಾಗೂ ದಾಳಿಂಬೆ ಅಧಿಸೂಚಿತ ತೋಟಗಾರಿಕೆ ಬೆಳೆಗಳಾಗಿವೆ.
ಗ್ರಾಮ ಹಾಗೂ ಬೆಳೆಗಳ ವಿವರ ಇಂತಿದೆ :ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ, ಕೊಗನೂರ,ಮಾಚೇನಹಳ್ಳಿ, ಶಿರಹಟ್ಟಿ( ಯು.ಎಲ್.ಬಿ)ಗಳಿಗೆ ಮಾವು; ಕಡಕೋಳ, ಮಜ್ಜೂರ ಗ್ರಾಮಗಳಿಗೆ ಮಾವು ಮತ್ತು ದಾಳಿಂಬೆ ; ಮಾಗಡಿ ಗ್ರಾಮಕ್ಕೆ ಮಾವು ಪ್ಪಾಯ, ವಡವಿ ಗ್ರಾಮಕ್ಕೆ ಪಪ್ಪಾಯ ಮತ್ತು ದಾಳಿಂಬೆ ಬೆಳೆಗಳು ಅಧಿಸೂಚಿತ ಬೆಳೆಗಳಾಗಿವೆ.
ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ, ಬಾಲೆಹೊಸೂರ,ಗೊಜನೂರ,ರಾಮಗೇರಿ, ಸೂರಣಗಿ, ಹುಲ್ಲೂರ, ಲಕ್ಷ್ಮೇಶ್ವರ (ಯು.ಎಲ್.ಬಿ)ಗಳಿಗೆ ಮಾವು ; ಅಡ್ರಕಟ್ಟಿ ಗ್ರಾಮಕ್ಕೆ ಮಾವು ಮತ್ತು ದಾಳಿಂಬೆ; ದೊಡ್ಡೂರ, ಶಿಗ್ಲಿ, ಗೋವನಾಳಗ್ರಾಮಗಳಿಗೆ ಮಾವು ಮತ್ತು ಪಪ್ಪಾಯ ಬೆಳೆಗಳು ಅಧಿಸೂಚಿತ ಬೆಳೆಗಳಾಗಿವೆ.
ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ.ರೈತರು ವಿಮಾ ಕಂತು ಪಾವತಿಗೆ ಪಾಲ್ಗೊಳ್ಳಲು ಜುಲೈ ೩೧ ಕೊನೆಯ ದಿನವಾಗಿದೆ. ಜಿಲ್ಲೆಗೆ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಇವರು ಜಿಲ್ಲೆಯ ವಿಮಾ ಸಂಸ್ಥೆಯಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ, ಕಂದಾಯ ಇಲಾಖೆ, ರೈತ ಸಂಪರ್ಕ ಕೇಂದ್ರ ಹಾಗೂ ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಲು ಶಿರಹಟ್ಟಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸುರೇಶ ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.