This is the title of the web page
This is the title of the web page

Please assign a menu to the primary menu location under menu

State

ಟಣಕನಕಲ್: ಶಿಶಿಕ್ಷು ತರಬೇತಿಗೆ ಮೇ ೨೨, ೨೩ರಂದು ಕ್ಯಾಂಪಸ್ ಸಂದರ್ಶನ


ಕೊಪ್ಪಳ ಮೇ ೧೮: ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಮೇ ೨೨ ಮತ್ತು ಮೇ ೨೩ರಂದು ಕುಷ್ಟಗಿ ರಸ್ತೆಯ ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾಗಿರುತ್ತದೆ ಎಂದು ಕೊಪ್ಪಳ ಸರ್ಕಾರಿ ಐಟಿಐ ಪ್ರಾಚಾರ್ಯರು ತಿಳಿಸಿದ್ದಾರೆ.
ಕ್ಯಾಂಪಸ್ ಸಂದರ್ಶನದಲ್ಲಿ ಪ್ರತಿಷ್ಠಿತ ಕಂಪನಿಯಾದ ಮೆ. ಟೋಯೋಟಾ ಕಿರ್ಲೋಸ್ಕರ್ ಮೋಟರ್ ಪ್ರೈ.ಲಿ ಬಿಡದಿ, ಬೆಂಗಳೂರು ರವರು ಆಗಮಿಸಲಿದ್ದು, ಐಟಿಐ ಪಾಸಾದ ಹಾಗೂ ಪ್ರಸ್ತುತ ಎರಡನೇಯ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಎಲೆಕ್ಟ್ರೀಷಿಯನ್, ಫಿಟ್ಟರ್, ಟರ್ನರ್, ಮೆಕಾನಿಕ್ ಮೋಟರ್ ವಹಿಕಲ್, ಮೆಕಾನಿಕ್ ಡಿಜೈಲ್, ಟೂಲ್ & ಡೈ ಮೇಕಿಂಗ್ & ವೇಲ್ಡರ್ ಹಾಗೂ ಮಷಿನಿಷ್ಟ ವೃತ್ತಿಗಳ ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿ (ಅಪ್ರೆಂಟಿಸ್‌ಶಿಪ್)ಗಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಅದರಂತೆ ಮೇ ೨೨ರಂದು ಲಿಖಿತ ಪರೀಕ್ಷೆ ಹಾಗೂ ಮೇ ೨೩ರಂದು ತಾಂತ್ರಿಕ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಆಸಕ್ತರು ತಮ್ಮ ಆಧಾರ್ ಕಾರ್ಡ, ಫೋಟೋ, ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಹಾಗೂ ೨ ಸೆಟ್ ಝೆರಾಕ್ಸ್ ಪ್ರತಿಗಳೊಂದಿಗೆ ಬೆಳಿಗ್ಗೆ ೯ಕ್ಕೆ ಸಂದರ್ಶನದಲ್ಲಿ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ (ಟಣಕನಕಲ್, ಕುಷ್ಟಗಿ ರಸ್ತೆ, ಕೊಪ್ಪಳ) ಹಾಗೂ ಮೊಬೈಲ್ ಸಂ: ೯೦೧೯೨೩೩೪೦೦, ೯೦೦೮೫೩೬೮೯೫, ೯೪೪೮೮೧೩೪೨೨, ೯೭೪೨೫೩೨೩೫೩, ೯೯೪೫೫೭೭೧೫೫, ಇವರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Leave a Reply