This is the title of the web page
This is the title of the web page

Please assign a menu to the primary menu location under menu

State

ಮತದಾನದ ಜಾಗೃತಿಗಾಗಿ ಬೆಟಗೇರಿಯ ವಿವಿಧ ಭಾಗಗಳಲ್ಲಿ ಕ್ಯಾಂಡೆಲ್ ಲೈಟ ನಡಿಗೆ


ಗದಗ ಎ.೧೧: ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-೨೦೨೩ಕ್ಕೆ ದಿನಾಂಕ ಘೊಷಣೆಯಾಗಿದ್ದು ಮೇ.೧೦ ರಂದು ಜರುಗಲಿರುವ ಮತದಾನ ದಿನದಂದು ಪ್ರತಿಯೊಬ್ಬ ಅರ್ಹ ಮತದಾರನು ಕಡ್ಡಾಯವಾಗಿ ಮತ ಚಲಾಯಿಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ ಸಮಿತಿ ವತಿಯಿಂದ ಸೋಮವಾರ ಸಾಯಂಕಾಲ ದಂದು ಬೆಟಗೇರಿಯ ವಿವಿಧ ಭಾಗಗಳಲ್ಲಿ ಸೋಮವಾರದಂದು ಕ್ಯಾಂಡಲ್ ಲೈಟ ನಡಿಗೆಯನ್ನು ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರು ಬೆಟಗೇರಿಯ ಹೊಸಪೇಟೆ ಚೌಕನ ಮತಗಟ್ಟೆ ೨೧, ೨೪ರಲ್ಲಿ ಕ್ಯಾಂಡೆಲ ಲೈಟ ನಡಿಗೆಯ ಮುಂದಾಳತ್ವ ವಹಿಸಿ ಮತದಾರರು ಸ್ವಯಂ ಪ್ರೇರಿತರಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ£ರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ ಅವರ ಮುಂದಾಳತ್ವದಲ್ಲಿ ಹೊರಟ ಬೆಳಕಿನ ನಡಿಗೆಯು ಗಾಂಧಿನಗರದ ಮತಗಟ್ಟೆ ಸಂಖ್ಯೆ ೧೭, ೧೮ರಲ್ಲಿ ಸಾಗುತ್ತಾ ಮತದಾನದ ಮಹತ್ವದ ಘೋಷಣೆ ಹಾಗೂ ಬೀದಿ ನಾಟಕ ಕಲಾ ತಂಡಗಳಿಂದ ಮತದಾನದ ಅರಿವು ಮೂಡಿಸಲಾಯಿತು.
ಬೆಟಗೇರಿಯ ಹುಯಿಲಗೋಲ ರಸ್ತೆಯ ಮತಗಟ್ಟೆ ಸಂಖ್ಯೆ ೨೨,೨೩ರಲ್ಲಿ ಜರುಗಿದ ಕ್ಯಾಂಡೆಲ ಲೈಟ ನಡಿಗೆಯಲ್ಲಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಭಾಗವಹಿಸಿ ಮತದಾನದ ಮಹತ್ವದ ಕುರಿತು ಜಾಗೃತಿಯನ್ನು ಮೂಡಿಸಿದರು.
ಬೆಟಗೇರಿಯ ಬಸ £ಲ್ದಾಣ ಹಾಗೂ ಅಂಬೇಡ್ಕರ್ ನಗರಗಳಿಂದ ಪ್ರತ್ಯೇಕವಾಗಿ ಹೊರಟ ಕ್ಯಾಂಡೆಲ್ ಲೈಟ ನಡಿಗೆಯು ತಾರಾಲಯಕ್ಕೆ ಬಂದು ಸಮ್ಮಿಳನಗೊಂಡವು. ನಡಿಗೆಯಲ್ಲಿ ಬೀದಿ ನಾಟಕಗಳ ಮೂಲಕ ಮತದಾನ ಮಹತ್ವದ ಕುರಿತು ಸಾರ್ವಜ£ಕರಲ್ಲಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಅನ್ನಪೂರ್ಣ, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ ನುಚ್ಚಿನ, ಕ್ರೀಡಾಧಿಕಾರಿ ವಿಠ್ಠಲ ಜಾಬಗೌಡರ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಾರುತಿ ಬ್ಯಾಕೋಡ, ಡಿ.ಡಿ.ಪಿ.ಆಯ್ ಬಸವಲಿಂಗಪ್ಪ ಎನ್, ಜಿ.ಪಂ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿ ವಾಗೀಶ, ಬಿ.ಸಿ.ಎಂ ಜಿಲ್ಲಾ ಅಧಿಕಾರಿ ಮೆಹಬೂಬ ತುಂಬರಮಟ್ಟಿ, ತಹಶೀಲ್ದಾರ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಪೌರ ಕಾರ್ಮಿಕರು,ಪೋಲಿಸ್ ಅಧಿಕಾರಿ ಸಿಬ್ಬಂದಿ ಹಾಗೂ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.


Leave a Reply