This is the title of the web page
This is the title of the web page

Please assign a menu to the primary menu location under menu

Local News

ಸಾವಿಗೆ ಕಾರಣ  ರೋಗಲ್ಲ ಆಯುಷ್ಯ : ಡಾ. ಅನ್ನಪೂರ್ಣ


 

ಬೆಳಗಾವಿ 15-  ಆಯುಷ್ಯ ಮುಗಿದರೆ ರೋಗ ಬರುತ್ತದೆ. ಸಾವಿಗೆ ರೋಗ ಕಾರಣವಲ್ಲ ಸಾವಿಗೆ ಕಾರಣವಾದದ್ದು ಆಯುಷ್ಯ ಎಂದು ಡಾ. ಅನ್ನಪೂರ್ಣ ಇಂದಿಲ್ಲಿ ಹೇಳಿದರು.

 

ನಗರದ ಜಾಗತಿಕ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವ ಸೇನೆ ವತಿಯಿಂದ ಇದೇ ದಿ. 14 ರಂದು ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಈ ಮೇಲಿನಂತೆ ಡಾ. ಅನ್ನಪೂರ್ಣ ಅವರು ಮೇಲಿನಂತೆ ಹೇಳಿದರು.

 

ಮುಂದೆ ಮಾತನಾಡುತ್ತ ಅವರು ಸಾವನ್ನು ಗೆಲ್ಲಲು ನಾವು ಬಸವಾ ಎಂದರೆ ಸಾಕು ಈ ನಾಮದಲ್ಲಿ ಬದುಕಿನ ಧೈರ್ಯವಿದೆ. ಸದಾಚಾರವಿದೆ. ಬಸವಣ್ಣನವರು ಮಹಾನ್ ಧೈರ್ಯವಂತರು ಅವರು ದೇವರಿಗೆ ಇಷ್ಟಲಿಂಗದಿಂದ ನಿನ್ನನ್ನೇ ಗೆಲ್ಲುತ್ತೇನೆ ಎಂದು ಬಾಳಿ ಬದುಕಿದವರು.

 

ಇಂದು ಸಮಾಜ ಸೇವಕರು ತಮ್ಮ ಬದುಕನ್ನು ಸಮಾಜದಲ್ಲಿ ಪರಿವರ್ತನೆ ತರುವುದಕ್ಕೆ ತಮ್ಮ ಬದುಕನ್ನು ಸವಿದು ಬದುಕಬೇಕಿದೆ ಬಸವ ತತ್ವ ಪಾಲಿಸಬೇಕು ಬದುಕಿನಲ್ಲಿ ಛಲವಿರಬೇಕು. ಮನಸ್ಸು ಮಾಡಿದರೆ ನಿನ್ನ ಮುಂದೆ ಪರ್ವತವೇ ಬಾಗಿ ನಿಲ್ಲುತ್ತದೆ ಎಂದು ಅರಿಯಬೇಕು. ಕತ್ತಲೆಯ ಬಾಳಿಗೆ ಮಿಂಚಿನಂಥ ಒಂದು ಬೆಳಕು ಕಂಡರೆ ಸಾಕು ಅದನ್ನು ನಾವು ಬೆನ್ನು ಹತ್ತಿ ಸಾಗಬೇಕು ಎಂದು ಹೇಳಿದರು.

 

ಅವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ 10ನೇ ಘಟಿಕೋತ್ಸವದಲ್ಲಿ ಬಸವ ತತ್ವ ಪ್ರಚಾರಕಿ ಎಂದು ಗುರುತಿಸಿ ಗೌರವ ಡಾಕ್ಟರೇಟ್ ನೀಡಿದರು.

 

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷರಾದ ಬಸವರಾಜ್ ರೊಟ್ಟಿ ಅವರು ಅಕ್ಕ ಎಂಬ ಬಿರುದು ಎಲ್ಲಕ್ಕಿಂತ ಶ್ರೇಷ್ಠವಾದದ್ದು ಅಕ್ಕ ಅನ್ನಪೂರ್ಣ ಅವರಿಗೆ ಗೌರವ ಡಾಕ್ಟರೇಟ್ ಪದವಿ ದೊರೆತದ್ದು ಅದು ಅದರ ಘನತೆಯನ್ನು ಹೆಚ್ಚಿಸಿಕೊಂಡಿದೆ ಎಂದು ಅಭಿನಂದನೆ ಸಲ್ಲಿಸಿದರು.

ರಾಷ್ಟ್ರೀಯ ಬಸವ ಸೇನೆ ಜಿಲ್ಲಾಧ್ಯಕ್ಷರಾದ ಶಂಕರ್ ಗುಡಸ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಮಳಗಲಿಯವರು ಸ್ವಾಗತಿಸಿ, ನಿರೂಪಿಸಿದರು ನಯನಾ ಗಿರಿಗೌಡರ ಪ್ರಾರ್ಥಿಸಿದರು. ಅಡಿವೆಪ್ಪ ಬೆಂಡಿಗೇರಿ ವಂದಿಸಿದರು.

 

. ಸಮಾರಂಭದಲ್ಲಿ ಮಹಿಳಾ ನಗರ ಘಟಕದ ಅಧ್ಯಕ್ಷರಾದ ಡಾ ವಿಜಯಲಕ್ಷ್ಮಿ ಪುಟ್ಟಿ, ಚಂದ್ರಪ್ಪ ಬೂದಿಹಾಳ್, ಸತೀಶ್ ಚೌಗಲಾ ಡಾ. ಅಡಿವೆಪ್ಪ ಇಟಗಿ, ಸುಜಾತ ಮತ್ತಿಕಟ್ಟಿ, ಪ್ರಭು ಸ್ವಾಮಿಗಳು, ರಮೇಶ ಮಠಪತಿ, ಪ್ರಭಾವತಿ ಕವಿತಾ ಲಾವಣ್ಯ, ರತ್ನಾ ಬೆಣಚಿನಮರ್ಡಿ, ಬಸವರಾಜ ಚಟ್ಟರ, ರಾಜು ಪಡಗೂರಿ, ಬಸವರಾಜ ಮತ್ತಿಕಟ್ಟಿ, ಅನ್ನಪೂರ್ಣಾ ಮಳಗಲಿ, ಸಿದ್ದರಾಮ ಸಾವಳಗಿ, ಬಿ.ಡಿ.ಪಾಟೀಲ ಅಲ್ಲದೇ ನಗರದ ಹಲವಾರು ಬಸವ ಅಭಿಮಾನಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply