This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟ: ಸಿಸಿಎಫ್ ಚವ್ಹಾಣ್ ಮಾಹಿತಿ


ಬೆಳಗಾವಿ : ಅರಣ್ಯ ವೃತ್ತದ ಬೆಳಗಾವಿ ವಿಭಾಗದಲ್ಲಿ ಮೂರು ದಿನ ನಡೆಯಲಿದೆ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್ ತಿಳಿಸಿದರು.

ನಗರದ ಅರಣ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವ್ಹೆಂಬರ್ 23, 24, 25ರಂದು ಮೂರು ದಿನ ರಾಜ್ಯದ 13 ಅರಣ್ಯ ವೃತ್ತಗಳ ಮತ್ತು ಒಂದು ಟ್ರೇನಿಂಗ್ ಅಕಾಡೆಮಿಯ ಒಟ್ಟು 14 ಅರಣ್ಯ ಯುನಿಟ್ ಗಳ ಸಿಬ್ಬಂದಿ, ಅಧಿಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಇಲಾಖೆಯ ಒಟ್ಟು 1100 ಕ್ರೀಡಾಪಟುಗಳು ಈಗಾಗಲೇ ತಮ್ಮ ನೊಂದಾಯಿಸಿಕೊಂಡಿದ್ದಾರೆ. 900 ಜನ ಪುರುಷ ಕ್ರೀಡಾಪಟುಗಳು, 200 ಜನ ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಈ ಕ್ರೀಡಾಕೂಟವು ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಮತ್ತು ಬೆಳಗಾವಿ ನಗರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಮೂರು ದಿನ ಕ್ರೀಡೆಗಳು ನಡೆಯಲಿವೆ ಎಂದರು.

ಈ ಸಂದರ್ಭದಲ್ಲಿ ಸಂದರ್ಭ ಕ್ರೀಡಾಕೂಟದ ಲೋಗೊವನ್ನು ಬಿಡುಗಡೆಗೊಳಿಸಿದರು. ಈ ವೇಳೆ ಬೆಳಗಾವಿ ಅರಣ್ಯ ವೃತ್ತದ ಡಿಸಿಎಫ್ ಗಳಾದ ಹರ್ಷ ಭಾನು, ಪಿಕೆಎಂ ಪ್ರಶಾಂತ, ಸಿ.ಜಿ.ಮಿರ್ಜಿ, ಅಂಥೋನಿ ಮರಿಯಪ್ಪ, ಎಸ್.ಕೆ.ಲಗೊರವರ, ಎಸಿಎಫ್ ಗಳಾದ ಸುನಿತಾ ನಿಂಬರಗಿ, ಎಂ.ಬಿ.ಕುಸನಾಳ, ಶಿವರುದ್ರಪ್ಪ ಕಬಾಡಗಿ ಇತರರು ಉಪಸ್ಥಿತರಿದ್ದರು.


Gadi Kannadiga

Leave a Reply