This is the title of the web page
This is the title of the web page

Please assign a menu to the primary menu location under menu

State

ಬಿಹೆಚ್‌ಸಿ ಆಸ್ಪತ್ರೆಯಲ್ಲಿ ಅದ್ಧೂರಿಯಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಗೆ ಸಂಪೂರ್ಣ ಉಚಿತ ಆರೋಗ್ಯ ಶಿಬಿರ,ಸದ್ಭಳಕೆ ಮಾಡಿಕೊಳ್ಳಲು ಮೇಯರ್ ರಾಜೇಶ್ವರಿ ಕರೆ


ಬಳ್ಳಾರಿ ಮಾ ೦೯. ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯ ಹವಂಭಾವಿಯಲ್ಲಿರುವ ಪ್ರಖ್ಯಾತ ಬಳ್ಳಾರಿ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ, ಉದ್ಘಾಟಕರಾಗಿ ಮಹಾಪೌರರಾದ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು ಅವರು ಆಗಮಿಸಿದ್ದರು. ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರಂದರೇ ಮನೆಗೆ ಮಾತ್ರ ಸೀಮಿತವಲ್ಲ, ಈಗಿನ ಮಹಿಳೆಯರು ಪುರುಷರಿಗಿಂತಲೂ ಎದರಲ್ಲೂ ಕಡಿಮೆ ಇಲ್ಲವೆಂದು, ಐಎಎಸ್,ಐಪಿಎಸ್,ಐಎಫ್‌ಎಸ್,ನೌಕಪಡೆ,ರ‍್ಮಿ, ಮಿಲಿಟರಿ,ವಾಯುಪಡೆ ಅಂತಹ ಉನ್ನತ ಮಟ್ಟದ ಹುದ್ದೆಗಳಲ್ಲಿ ನಮ್ಮ ಮಹಿಳೆಯರು ಕರ್ತವ್ಯವನ್ನು ನಿರ್ವಹಿಸುತಿದ್ದಾರೆ, ಇದು ನಮ್ಮ ಹೆಮ್ಮೆ ಎಂದರು. ಮಹಿಳೆಯರು ಮನೆಗೆ ಮಾತ್ರ ಸೀಮಿತವಾಗದೇ ಹೊರಗಿನ ಪ್ರಪಂಚ ಕೂಡಾ ನೋಡಬೇಕಾದ ಆವಶ್ಯಕತೆ ಇಂದಿನ ದಿನಗಳಲ್ಲಿ ಇದೆ ಮತ್ತು ಆರೋಗ್ಯವನ್ನು ನಿರ್ಲಕ್ಷಿಸದೇ ಸಮಯಕ್ಕೆ ಊಟ,ನಿದ್ರೆ ಮಾಡಬೇಕು. ಆರೋಗ್ಯದಲ್ಲಿ ತೊಂದರೆ ಉಂಟಾದಾಗ ಅದನ್ನು ನಿರ್ಲಕ್ಷಿಸದೇ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕೆಂದು ಅಲ್ಲಿ ನೆರೆದಿದ್ದ ಪೇಶಂಟ್‌ಗಳಿಗೆ ಕಿವಿ ಮಾತನ್ನು ಹೇಳಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಕೇವಲ ಮಹಿಳೆಯರಿಂದ ಮಹಿಳೆಯರಿಗಾಗಿ ಸಂಪೂರ್ಣ ಉಚಿತ ಆರೋಗ್ಯ ಶಿಬಿರವನ್ನು ಬಳ್ಳಾರಿ ಹೆಲ್ತ್ ಸಿಟಿ ಆಸ್ಪತ್ರೆಯವರು ಆಯೋಜನೆ ಮಾಡಿದ್ದಾರೆ, ಪ್ರಖ್ಯಾತ ಕಣ್ಣಿನ ತಜ್ಞರು,ಸ್ತ್ರೀರೋಗ,ರಕ್ತದೊತ್ತಡ,ಸಕ್ಕರೆ ಖಾಯಿಲೆ,ರÀಕ್ತ ಹೀನತೆ, ಗರ್ಭಕೋಶ ಕ್ಯಾನ್ಸರ್ ಮತ್ತಿತರ ರೋಗಗಳಿಗೆ ನುರಿತ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ ನಡೆಸಲಾಗುತ್ತದೆ, ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಮೇಯರ್ ರಾಜೇಶ್ವರಿಯವರು ಮನವಿ ಮಾಡಿದರು. ಆಸ್ಪತ್ರೆ ಕೂಡಾ ನಾನು ಇದೇ ಮೊದಲಬಾರಿಗೆ ನೋಡಿದ್ದೇನೆ,ಬಹಳ ಅಡ್ವಾನ್ಸ್ಡ್ ಟೆಕ್ನಾಲಜಿಯಿಂದ ಕೂಡಿಕೊಂಡಿದೆ, ನಾವು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರು ಮತ್ತಿತರೆ ಸಿಟಿಗಳಿಗೆ ತೆರಳಬೇಕಿತ್ತು, ಆದರೇ ಅದೇ ಚಿಕಿತ್ಸೆ ಈಗ ಬಳ್ಳಾರಿಯಲ್ಲಿ ಸಿಗಲಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
ನಂತರ ಡಾ.ಧರ್ಮಾರೆಡ್ಡಿ ಮತ್ತು ಡಾ.ಶೋಭ ಅವರು ಮಾತನಾಡುತ್ತಾ ಬಳ್ಳಾರಿಯಲ್ಲಿ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಬಳ್ಳಾರಿ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಎಲ್ಲಾ ರೋಗಗಳಿಗೆ ಚಿಕಿತ್ಸೆಯನ್ನು ನೀಡಲಾಗುತಿದ್ದೂ, ಬೆಂಗಳೂರಿನಲ್ಲಿ ಆಗುವ ಚಿಕಿತ್ಸೆ ವೆಚ್ಚಕ್ಕಿಂತ ಇಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಮುಗಿಯುತ್ತದೆ ಎಂದು ತಿಳಿಸಿದರು. ಈಸಂಧರ್ಬದಲ್ಲಿ ಡಾ.ಶಿವನಾಯಕ್,ಡಾ.ನರೇಂದ್ರಗೌಡ,ಡಾ.ಮನ್ಸೂರ್,ಡಾ.ಕೌಶಿಕ್, ಡಾ.ಚಂದ್ರಶೇಖರಪಾಟಿಲ್,ಡಾ.ಪೂರ್ಣಿಮ, ಡಾ.ಸ್ನೇಹ,ಡಾ.ಅಶ್ವಿನಿ, ಡಾ.ಅಂಕಿತ, ಡಾ.ಉಮಾಶಂಕರ್,ಸದ್ದಾಂ, ಯೋಗಿರೆಡ್ಡಿ,ಜಯತೀರ್ಥ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

 


Leave a Reply