This is the title of the web page
This is the title of the web page

Please assign a menu to the primary menu location under menu

Local News

ಹಿಂದೂ ಮುಸ್ಲಿಂ ಬಾಂದವ್ಯದಿಂದ ಶ್ರದ್ದಾಭಕ್ತಿಯಿಂದ ಮೊಹರಂ ಆಚರಣೆ


ಯಮಕನಮರಡಿ :- ಸಮೀಪದ ಘೋಡಗೇರಿ ಗ್ರಾಮದಲ್ಲಿ ಮಂಗಳವಾರ ದಿ. ೦೯ ರಂದು ಹಿಂದೂ ಮುಸ್ಲಿಂ ಭಾಂದವರು ಸೌಹಾರ್ದತೆ ಶ್ರದ್ದಾ ಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಿಸಿದರು. ಮೊಹರಂ ಹಬ್ಬವು ಹಿಂದೂ ಮುಸ್ಲಿಂ ಬಾಂದವರ ಬಾವೈಕ್ಯತೆಯನ್ನು ಸೂಚಿಸುವ ಹಬ್ಬವಾಗಿದೆ ಘೋಡಗೇರಿ ಗ್ರಾಮದಲ್ಲಿ ಮೂರು ತಾಜಿಯಾ (ತಾಬೂತ)ಗಳನ್ನು, ಒಂದು ನಾಲಸಾಬವಲ್ಲಿ ದೇವರ ಪಂಜ್ಯಾಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಕತ್ತಲ ರಾತ್ರಿ ಕಾರ್ಯಕ್ರಮ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಜಿಯಾ (ತಾಬೂತ)ಗಳ ಮೆರವಣಿಗೆ ನಡೆಯಿತು. ಮೊಹರಂ ಹಬ್ಬದ ಕಾರ್ಯಕ್ರಮದಲ್ಲಿ ಘೋಡಗೇರಿ ಗ್ರಾ.ಪಂ. ಅಧ್ಯಕ್ಷ ಶ್ರೀಶೈಲ ಮಗದುಮ್ಮ, ಗ್ರಾಮದ ಮುಖಂಡರಾದ ಎ.ವಾಯ್. ಪಾಟೀಲ, ಎಚ್.ವಾಯ್ ಪಾಟೀಲ, ಅರ್ಜುನ ಪಾಟೀಲ, ರಾಚಯ್ಯ ಹಿರೇಮಠ, ಸಿದ್ರಾಮ ಮುಗಳಿ, ಅಬ್ದುಲ ಅತ್ತಾರ, ಬಸವರಾಜ ಪ್ಯಾಟಿ, ಮಲ್ಲೀಕ ಮೊಕಾಶಿ, ಇಬ್ರಾಹಿಂ ಮೊಕಾಶಿ, ಗೋಪಾಲ ಮಗದುಮ್ಮ, ಗುಲಾಬ ಭಾಗವಾನ ಹಸನ ಬೇಪಾರಿ, ಗುರುನಾಥ ಕಡೇಲಿ, ಇಸ್ಮಾಯಿಲ್ ಮುಲ್ಲಾ, ಗುಡುಸಾಬ ಮುನ್ನವಳ್ಳಿ, ಸೈಯದ ವಂಟಮೂರಿ, ನಿರ್ವಾಣಿ ಅಂಕಲಗಿ, ಶ್ರೀಕಾಂತ ರುದ್ರಪ್ಪಗೋಳ, ಶ್ರೀಕಾಂತ ಭೂಶಿ, ವಿಶಾಲ ಪೂಜೇರಿ, ಸೇರಿದಂತೆ ಗ್ರಾಮದ ಸಮಸ್ಯ ಹಿಂದೂ ಮುಸ್ಲಿಂ ಬಾಂದವರು ಮೊಹರಂ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Gadi Kannadiga

Leave a Reply