This is the title of the web page
This is the title of the web page

Please assign a menu to the primary menu location under menu

Local News

ಸ್ಮಾರ್ಟ ಸಿಟಿ ಯೋಜನೆಯ ೭ ನೇ ವರ್ಷದ ಸಂಭ್ರಮಾಚರಣೆ : ಶಾಸಕ ಅನಿಲ ಬೆನಕೆ ಬಾಗಿ


ಬೆಳಗಾವಿ ೨೫ : ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ ಸಿಟಿ ಯೋಜನೆ ಪ್ರಾರಂಭಗೊಂಡು ಜೂನ್ ೨೫ ಕ್ಕೆ ೭ ವರ್ಷಗಳ ಆಗಿರುವುದರಿಂದ ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಗರಾಭಿವೃಧ್ದಿ ಮತ್ತು ವಸತಿ ಮಂತ್ರಾಲಯ ಇವರ ನಿರ್ದೇಶನದ ಮೇರೆಗೆ ಸ್ಮಾರ್ಟಸಿಟಿ ಬೆಳಗಾವಿ ಆಡಳಿತ ಮಂಡಳಿಯು ೭ನೇ ವರ್ಷದ ಸಂಭ್ರಮಾಚರಣೆಯನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಬಾಗಿಯಾಗಿ ಸ್ಮಾರ್ಟಸಿಟಿ ಯೋಜನೆಯು ಪ್ರಧಾನ ಮಂತ್ರಿಗಳ ಕನಸಿನ ಯೋಜನೆಯಲ್ಲಿ ಒಂದಾಗಿದ್ದು, ಸ್ಮಾರ್ಟಸಿಟಿ ಅಡಿಯಲ್ಲಿ ನಿರ್ಮಾಣಗೊಂಡಿರುವ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್‌ನಿಂದಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕಾರಿಯಾಗಿದ್ದು, ಸ್ಮಾರ್ಟ ಸಿಟಿ ಯೋಜನೆಯಿಂದಾಗಿ ನಗರದ ಅಭಿವೃಧ್ದಿಯಲ್ಲಿ ಬದಲಾವಣೆಯಾಗಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಮಾರ್ಟಸಿಟಿ ಬೆಳಗಾವಿ ಆಡಳಿತ ಮಂಡಳಿಯು ಸರ್ದಾರ ಪ್ರೌಢಶಾಲೆ ಹಾಗೂ ಜೈನ್ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಕಮಾಂಡ ಸೆಂರ‍್ನ ಕಾರ್ಯನಿರ್ವಹಣೆ ಮತ್ತು ಸಾರ್ವಜನಿಕರಿಗೆ ಇದರಿಂದಾಗುವ ಸದುಪಯೋಗಗಳ ಕುರಿತು ಮಾಹಿತಿ, ಸ್ಮಾರ್ಟ ಸಿಟಿ ಅಡಿಯಲ್ಲಿ ಕೈಗೊಂದಿರುವ ಕಾಮಗಾರಿಗಳ ಪೋಟೋಗ್ರಪಿ ಪ್ರದರ್ಶನ ಹಾಸ್ಯ ಸಂಜೆ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ೭ ನೇ ವರ್ಷದ ಸಂಭ್ರಮವನ್ನು ಆಚರಿಸಿತು.
ಈ ಸಂದರ್ಭದಲ್ಲಿ ಸಂಸದರರಾದ ಮಂಗಲಾ ಅಂಗಡಿ, ಶಾಸಕರುಗಳಾದ ಅಭಯ ಪಾಟೀಲ, ಅನಿಲ ಬೆನಕೆ, ಸ್ಮಾರ್ಟಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರವೀಣ ಬಾಗೇವಾಡಿ, ಹಾಗೂ ಇತರ ಅಧಿಕಾರಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply