This is the title of the web page
This is the title of the web page

Please assign a menu to the primary menu location under menu

State

ಭಗವಾನ್ ವಿಶ್ವಕರ್ಮ ಜಯಂತಿ ಆಚರಣೆ


ಕುಷ್ಟಗಿ:-ತಾಲೂಕು ಆಡಳಿತ ವತಿಯಿಂದ ಇಲ್ಲಿನ ಕುಷ್ಟಗಿ ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನ ದಲ್ಲಿ ಭಗವಾನ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ತಾಲೂಕ ದಂಡಾಧಿಕಾರಿಗಳ ಕಛೇರಿಯ ಆವರಣದಲ್ಲಿ ಶ್ರಿ ವಿಶ್ವಕರ್ಮರ ಭಾವಚಿತ್ರಕ್ಕೆ ಗ್ರೇಡ್-೨ ತಹಶಿಲ್ದಾರ ಮುರುಳೀಧರ ಹಾಗೂ ಸಿಬ್ಬಂದಿ ಶರಣಯ್ಯ ಪುಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಸಮಾಜ ಬಾಂಧವರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದು ಕಾಳಿಕಾದೇವಿ ದೇವಸ್ಥಾನ ವರೆಗೆ ತಲುಪಿ ವೇದಿಕೆ ಕಾರ್ಯಕ್ರಮಕ್ಕೆ ನಾಂದಿಯಾಯಿತು.

ಮಾಜಿ ‌ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮಾತನಾಡಿ ಇಡೀ ಮನುಕುಲಕ್ಕೆ ಅನ್ನ ನೀಡುವ ರೈತಾಪಿ ವರ್ಗದವರಿಗೆ ಅತ್ಯವಶ್ಯಕ ಈ ವಿಶ್ವಕರ್ಮದವರು. ಶ್ರಮಿಕ ವರ್ಗದ ಸ್ವಾಭಿಮಾನಿ ಜೀವಿಗಳು ಇವರು. ಪ್ರತಿಯೊಂದು ದೇವರ ಪರಿಕಲ್ಪನೆ ಕಟ್ಟಿಕೊಟ್ಟದ್ದು ಈ ಸಮಾಜ. ಹೀಗಾಗಿ ವಿಶ್ವಕರ್ಮರು ಇಲ್ಲದೆ ಇ ಜಗತ್ತು ಇಲ್ಲ‌ಎಂದು ನುಡಿದರು.

ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವನಗೌಡ ಬಯ್ಯಾಪುರ ಮಾತನಾಡಿ ಶಾಸಕರಾದ ನಮ್ಮ ತಂದೆಯವರು ಅಧಿವೇಶನದಲ್ಲಿ ಭಾಗವಹಿಸಿದ್ದಾರೆ ಹೀಗಾಗಿ ಅವರು ಗೈರಾಗಬೇಕಾಯಿತು. ಸರ್ವರೊಂದಿಗೂ ಸಹ ಭಾವೈಕ್ಯತೆಯಿಂದ ಜೀವಿಸುವ ಸಮಾಜ ವಿಶ್ವಕರ್ಮ ಸಮಾಜ. ಇವರು ದುಡಿದು ಕಾಯಕದಲ್ಲೆ ನಿರತರಾಗಿದ್ದು ಈ ಸಮಾಜದ ಜೊತೆ‌ ನಾವು ಸದಾ ಇರುತ್ತೇವೆ. ವಿಶ್ವಕರ್ಮ ಸಮಾಜದ ಸೇವೆಗೆ ನಾವು ಜೊತೆಗೆ‌ ಇರುತ್ತೇವೆ ಎಂದರು.

ತಾಲೂಕಾಧ್ಯಕ್ಷ ಗುರಪ್ಪ ಬಡಿಗೇರ ಮಾತನಾಡಿ ವಿಶ್ವಕರ್ಮರು ರಾಜಕೀಯ ಮಾಡಲ್ಲ. ನಾವು ಅತ್ಯಂತ ಹಿಂದುಳಿದ ಸಮಾಜದವರಾಗಿದ್ದೇವೆ.‌ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮಾಜ ನಮ್ಮದು. ಒಂದು ಕಾರ್ಯಕ್ರಮ ಮಾಡಿದರೆ ಜನ ಜಾಗೃತಿ ಇಲ್ಲ. ಏನು ಹೇಳಿದರು ಜನ ಸೇರುವುದಿಲ್ಲ. ಒಗ್ಗಟ್ಟಿನ ಕೊರತೆ ಯದ್ದು ಕಾಣುತ್ತಿದೆ. ಯಾರು‌ ಕಾರ್ಯಕ್ರಮಕ್ಕೆ ಗೈರು ಆಗಿದ್ದಾರೆ ಅವರು ವಿಶ್ವಕರ್ಮರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಆದ್ದರಿಂದ ಮುಂದೆ ಹೀಗಾಗದಂತೆ ವಿಶ್ವಕರ್ಮ ಸಮಾಜ ಒಟ್ಟಾಗಿ ಜಾಗೃತಿ ಗೊಳ್ಳಬೇಕೆಂದು ಅಭಿಪ್ರಾಯ ಪಟ್ಟರು.

ಶ್ರೀ ಈಶಪ್ಪ ಬಡಿಗೇರ ಜಿಲ್ಲಾಧ್ಯಕ್ಷರು ತಾಲೂಕಿನಲ್ಲಿ ಹತ್ತು ಸಾವಿರ ಜನಸಂಖ್ಯೆ ಇದ್ದರೂ ಸಂಘಟನೆ ಕೊರತೆ ಇದೆ. ಯಾವ ರಾಜಕೀಯ ನಾಯಕರು ಸಹ ಪಾಲ್ಗೊಂಡಿಲ್ಲ. ಇವರಿಗೆ ಸರಿಯಾದ ಪಾಠ ಕಲಿಸಲು ವಿಶ್ವಕರ್ಮರು ಸನ್ನದ್ಧರಾಗಬೇಕಿದೆ. ಇನ್ನೇನು ಚುನಾವಣೆ ಹತ್ತರ ಬರುತ್ತಿದೆ ರಾಜಕೀಯ ನಾಯಕರಿಗೆ ತಕ್ಕ ಉತ್ತರ‌ನೀಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ನಮ್ಮ ಸಮಾಜವನ್ನು ಯಾರೂ ಸಹ ಗುರ್ತಿಸುವದಿಲ್ಲ ಎಂದರು.

ಉಪನ್ಯಾಸಕರಾಗಿ ಶಿಕ್ಷಕ ನಟರಾಜ ಸೋನಾರ ಕುಲಕಸುಬುಗಳಾದ ಅಕ್ಕಸಾಲಿಕೆ, ಬಡಿಗೆತನ, ಶಿಲ್ಪಕಲೆ, ಕಮ್ಮಾರಿಕೆ, ಕಂಚು ಕೆಲಸ ಹೀಗೆ ತಮ್ಮ ಕಸುಬನ್ನೆ ನಂಬಿ ಬದುಕುವ ಸಮಾಜ ನಮ್ಮದು. ವಿಶ್ವಕರ್ಮ ಬರೀ ವ್ಯಕ್ತಿ ಅಲ್ಲ ದೊಡ್ಡ ಶಕ್ತಿ ಯಾಗಿದ್ದಾರೆ. ನಮ್ಮ ಕಾಯಕವನ್ನು ಪ್ರೀತಿಸುವ ಕೆಲಸವಾಗಬೇಕು. ಮಕ್ಕಳಿಗೆ ‌ನೈತಿಕ ಸಾಮಾಜಿಕ ಹಾಗೂ ‌ಮಾನವೀಯ ಮೌಲ್ಯಗಳನ್ನು ಸಮಾಜದ ಕಳಕಳಿಯನ್ನು ಗೌರವಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕೆಂದು‌ ತಿಳಿಸಿದರು.

ಶ್ರೀ ನಾಗಮೂರ್ತೆಂದ್ರ ಮಹಾಸ್ವಾಮಿಗಳು ಲೇಬಗೇರಿ, ಶ್ರೀ ಬ್ರಹ್ಮೇಂದ್ರ ಮಹಾಸ್ವಾಮಿಗಳು ಆನೆಗೊಂದಿ, ಶ್ರೀ ದಿವಾಕರ ‌ಮಹಾಸ್ವಾಮಿಗಳು ಲೇಬಗೇರಿ, ಶ್ರೀ ತೀರ್ಥೇಂದ್ರ ಮಹಾಸ್ವಾಮಿಗಳು, ರುದ್ರಪ್ಪ ಮಾಸ್ತರ ಗೌರವಾಧ್ಯಕ್ಷರು, ಕೆಬಿ ಬಡಿಗೇರ, ವೀರಣ್ಣ ಪತ್ತಾರ, ಉಮ್ಮಣ್ಣ ಪತ್ತಾರ ತಾವರಗೇರಿ, ಪ್ರಕಾಶ ಪತ್ತಾರ, ಯಲಬುರ್ಗಾ ತಾಲೂಕಾಧ್ಯಕ್ಷ ಶ್ರೀಶೈಲ ಬಡಿಗೇರ, ಇಮಾಂಬಿ ಕಲಬುರಗಿ ಪುರಸಭೆ ಸದಸ್ಯರು ಕುಷ್ಟಗಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಶರಣಪ್ಪ ಬುಡುಕುಂಟಿ, ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ಗೌರವಾಧ್ಯಕ್ಷ ಮಾನಪ್ಪ ಕಮ್ಮಾರ, ಮುಖಂಡರಾದ ರಾಮಣ್ಣ ಬಡಿಗೇರ್ ಬ್ಯಾಲಿಹಾಳ್, ಕೃಷ್ಣಪ್ಪ ಪತ್ತಾರ, ಎನ್. ಎಸ್ ಬಡಿಗೇರ, ಅಯ್ಯಪ್ಪ ಬಡಿಗೇರ, ವಾಸಪ್ಪ ಪತ್ತಾರ, ಮಳಿಯಪ್ಪ ಶಾಖಾಪುರ, ಮೌನೇಶ ದೇವರಗುಡಿ, ಸುಭಾಸ ಬಡಿಗೇರ, ಶಿವಕುಮಾರ ಬಡಿಗೇರ, ಅನೀಲ ಕಮ್ಮಾರ, ಮಹೇಶ ವಜ್ರಬಂಡಿ, ಲಕ್ಷ್ಮಣ ಬಡಿಗೇರ, ಚಿನ್ನಪ್ಪ ಪತ್ತಾರ, ಮಹಾಂತೇಶ ಬಡಿಗೇರ, ಕಾಳಪ್ಪ ಬಡಿಗೇರ, ಕೃಷ್ಣ ಮೂರ್ತಿ, ಪ್ರಭು ಪತ್ತಾರ, ಸೇರಿದಂತೆ ಇತರರು ಇದ್ದರು. ಪ್ರಾರ್ಥನೆಯನ್ನು ಉಮಾದೇವಿ ಮಾಯಾಚಾರ, ಸ್ವಾಗತವನ್ನು ರಾಮಣ್ಣ ಬಡಿಗೇರ, ನಿರೂಪಣೆಯನ್ನು ರವೀಂದ್ರ ಪತ್ತಾರ ನೆರವೇರಿಸಿದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Gadi Kannadiga

Leave a Reply